{"title":"Gururaj Kodkani","description":"","products":[{"product_id":"atimaanusha-gururaj-kodkani-kannada-horror-novel","title":"ಅತಿಮಾನುಷ","description":"\u003cp\u003eತಾನೊಬ್ಬ  ಅಗ್ನೋಸ್ಟಿಕ್ ,ಹಾಗೆಂದುಕೊಂಡ ಪರ್ವನ ಮನಸು ಗೊಂದಲದ ಗೂಡು. ಆಜೇಯತಾವಾದಿ ಎನ್ನುತ್ತಾರಂತೆ ಕನ್ನಡದಲ್ಲಿ ದೇವರಲ್ಲಿ ಅತಿಯಾಗಿ ವಿಶ್ವಾಸವಿರದ, ನಾಸ್ತಿಕತೆಯನ್ನೂ ಒಪ್ಪದ ಮನಸ್ಥಿತಿ ತನ್ನದು. ದೇವರು ಇರಲಿ, ಇರದಿರಲಿ ತನ್ನ ಬದುಕಿಗೆ ವ್ಯತ್ಯಾಸವೇನೂ ಆಗದು ಎನ್ನುವ ತರ್ಕ. ಅವನಿದ್ದರೆ ಅವನ ಪಾಡಿಗಿರಲಿ, ನಾನು ನನ್ನ ಪಾಡಿಗೆ ಎಂದುಕೊಂಡವನ ಬದುಕಲ್ಲಿ ಏನು ನಡೆಯುತ್ತಿದೆ ಎನ್ನುವುದು ಅರ್ಥವಾಗದ ಸ್ಥಿತಿ ಅವನಿಗೆ.\u003c\/p\u003e\n\u003cp\u003eಪರಮ ಆಸ್ತಿಕರಾದ ಹೆತ್ತವರು ತನ್ನ ತರ್ಕವನ್ನು ಅಲ್ಲಗಳೆಯುತ್ತಿದ್ದಾರೆ. ಗೆಳೆಯನಿಗೆ ವಿಷಯದ ಗಂಭೀರತೆಯನ್ನು ವಿವರಿಸುವುದು ಕಷ್ಟ. ಚಿಕ್ಕಪ್ಪನಿಗೆ ವಿವರಿಸಿ ಅರ್ಥ ಮಾಡಿಸೋಣ ವೆಂದರೆ ಅವನಿನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ. ಎಲ್ಲಕ್ಕಿಂತ ಅಚ್ಚರಿಯೆಂದರೆ ಸ್ಮಶಾನದಲ್ಲಿ ಕೊನೆಯವರೆಗೂ ತನ್ನ ಜೊತೆಗೇ ಇದ್ದ ಹೆಂಡತಿಗೆ ಏನೆಂದರೇ ಏನೂ ನೆನಪಿಲ್ಲ. ಆಕೆ ಕೂಡ ಲೋಕಿಯ ಸಾವು ಸಹಜ ಸಾವು ಎನ್ನುತ್ತಾಳೆ. ಅವನ ಸಾವಿಗೆ ಮಾನಸಿಕ ಕಾಯಿಲೆಯೇ ಕಾರಣ ಎಂದು ವಾದಿಸುತ್ತಾಳೆ.\u003c\/p\u003e\n\u003cp\u003eಊಹುಂ..!! ಖಂಡಿತ ಅದು ಸಹಜ ಸಾವಲ್ಲ. ಮೇಲ್ನೋಟಕ್ಕೆ ಸಹವೆನ್ನಿಸಿದರೂ ಅಲ್ಲೊಂದಿಷ್ಟು ಅನುಮಾನಗಳಿಗೆ ಅವಕಾಶವಿದೆ. ಅಲ್ಲೊಂದು ವಿಲಕ್ಷಣತೆಯಿದೆ. ಯಾರ ಗಮನಕ್ಕೂ ಬಾರದ, ಒಂದೇನೋ ಅವ್ಯಕ್ತ ಅಸಹಜತೆಯಿದೆ.\u003c\/p\u003e\n\u003cp\u003eಅದು ನಿಗೂಢ..!! ಅದು ವಿಕ್ಷಿಪ್ತ...!! ಅದು ಮನುಷ್ಯ ಸಹಜವಾದ ಸಾವಲ್ಲ, ಅದು ಅತಿಮಾನುಷ....!!\u003c\/p\u003e","brand":"Gururaj Kodkani","offers":[{"title":"Default Title","offer_id":46313453748483,"sku":"HB00005120","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2025-01-15at11.34.49AM_1.jpg?v=1736921532"},{"product_id":"shhh-ilyaaro-iddaare-thriller-stories-gururaja-kodkani-yallapura-kannada-book","title":"ಶ್...!ಇಲ್ಯಾರೋ ಇದ್ದಾರೆ..!!","description":"\u003cp\u003eಹಾರರ್ ಕತೆಗಳೆಂದರೆ ನಮಗೆಲ್ಲರಿಗೂ ಕೇಳಲು, ಓದಲು ಭಯ. ಆದರೂ ಕೇಳಲು ಓದಲು ಕಾತರ. ಯಾಕೆಂದರೆ ಅವು ಕೊಡುವ ರೋಮಾಂಚನದ ಎದುರು ಅವು ಹುಟ್ಟಿಸುವ ಭಯ ಗೌಣ. ಗುರುರಾಜರು ಇಲ್ಲಿ ಪುಟ್ಟ ಪುಟ್ಟ ಕತೆಗಳ ಮೂಲಕ ಭಯ ಹುಟ್ಟಿಸುತ್ತಾರೆ. ಇವನ್ನು ಓದಿ ಮಧ್ಯರಾತ್ರಿ ಎಚ್ಚರವಾದರೆ ನೀರು ಕುಡಿಯ ಹೋಗಲೂ, ಒಬ್ಬನೇ ರಾತ್ರಿ ನಡೆದು ಹೋಗಲೂ ಭಯಪಡುವ ಪರಿಸ್ಥಿತಿಯಾಗಿದೆ. ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿದ ಈ ಕಥೆಗಳು ಇದೀಗ ಸಂಕಲನವಾಗಿದೆ.\u003c\/p\u003e\n\u003cp\u003e-ಪ್ರಶಾಂತ್ ಭಟ್\u003c\/p\u003e\n\u003cp\u003eವಿಶೇಷ ಸೂಚನೆ : ಒಬ್ಬರೇ ಇರುವಾಗ ಓದದಿರಿ...!! ಓದಿದರೆ ನಾವು ಜವಾಬ್ದಾರರಲ್ಲ...!!\u003c\/p\u003e","brand":"Gururaj Kodkani, Yallapura","offers":[{"title":"Default Title","offer_id":46974190485763,"sku":null,"price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Shhh..IlliYaaroIddare.jpg?v=1750574542"},{"product_id":"paranormal-horror-stories-gururaja-kodkani-yallapura-kannada-book","title":"ಪ್ಯಾರಾನಾರ್ಮಲ್","description":"\u003cp\u003eಪ್ಯಾರಾನಾರ್ಮಲ್\u003c\/p\u003e\n\u003cp\u003eತುಂಬ ಹಿಂದಿನಿಂದಲೂ ಅತಿಮಾನುಷತೆಯ ಬಗ್ಗೆ ಕತೆಗಳು ಇದ್ದವಾದರೂ ಆಗ ಸರಿಯಾದ ಸಾಕ್ಷಿಗಳಿಲ್ಲದೇ ಅವೆಲ್ಲವೂ ಕೇವಲ ಕತೆಗಳಾಗಿ ಉಳಿದು ಹೋಗಿದ್ದವು. ಆದರೆ ಈಗ ಹಾಗಲ್ಲ, ಪ್ಯಾರಾನಾರ್ಮಲ್ ಕ್ಷೇತ್ರವೆನ್ನುವುದು ಸಾಕಷ್ಟು ಬೆಳವಣಿಗೆ ಕಂಡಿದೆ. ತಾರ್ಕಿಕ ವಿಶ್ಲೇಷಣೆ, ಸಂಶೋಧನಾ ಸಾಮರ್ಥ್ಯ ಮತ್ತು ಅಧ್ಯಯನಗಳಿಂದಾಗಿ ಒಂದು ಕಾಲಕ್ಕೆ ಕೇವಲ ಭ್ರಮೆಯಷ್ಟೇ ಎನ್ನಿಸುವಂತಿದ್ದ ಕೆಲವು ವಿಷಯಗಳು ಈಗ, ಕೇವಲ ಭ್ರಮೆಯಲ್ಲ, ಭ್ರಮೆಯನ್ನು ಮೀರಿದ್ದು ಇನ್ನೇನೋ ಇದೆ ಎನ್ನುವ ಭಾವನೆಯನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿವೆ. ಸರಿಯಾಗಿ ಗಮನಿಸಿದರೆ ಪ್ಯಾರಾನಾರ್ಮಲ್ ಕ್ಷೇತ್ರ ಕೂಡ, ಸೈಕಾಲಜಿ, ಭೌತಶಾಸ್ತ್ರ ಪರಿಸರ ವಿಜ್ಞಾನ ಮತ್ತು ಮನುಷ್ಯ ಗ್ರಹಿಕೆಯ ಭಾಗವೇ ಎನ್ನುವುದು ಅರ್ಥವಾಗುವುದು ಕಷ್ಟವೇನಲ್ಲ.\u003c\/p\u003e\n\u003cp\u003eಎಲ್ಲಕ್ಕಿಂತ ಹೆಚ್ಚಾಗಿ ಈ ಬಗೆಯ ಓದು, ಓದುಗನ ಕಲ್ಪನಾ ಶಕ್ತಿಯನ್ನು ಒರೆಗೆ ಹಚ್ಚುತ್ತದೆ. ಓದುಗನ ಆಲೋಚನಾ ಶಕ್ತಿಯನ್ನು ವೃದ್ಧಿಸುತ್ತಲೇ ಈ ರೀತಿಯ ವಸ್ತುಗಳೆಡೆಗಿನ ಸಿನಿಕತನವನ್ನೂ ಸಹ ಕಡಿಮೆ ಮಾಡುತ್ತವೆ. ಹಾಗೆ ಮಾಡುವುದರ ಮೂಲಕ ಮುಕ್ತ ಮನಸ್ಸಿನಿಂದ ಈ ಕ್ಷೇತ್ರದ ಬಗ್ಗೆ ಯೋಚಿಸುವಂತೆ ಮಾಡುತ್ತವೆ. ಅನಾವಶ್ಯಕವಾಗಿ ಭಯ ಹುಟ್ಟಿಸುವ ವಿಷಯಗಳು ಅರಿವಿಗೆ ಸಿಕ್ಕುತ್ತವೆ. ಇಲ್ಲಿ ನಮ್ಮನ್ನೂ ಮೀರಿದ್ದು ಇನ್ನೇನೋ ಇದೆ ಎನ್ನುವುದು ಅರಿವಾಗಿ ಭಯ ಕಡಿಮೆಯಾಗಿ ಆತ್ಮ ವಿಶ್ವಾಸ ಹೆಚ್ಚುತ್ತದೆ ಎಂದರೂ ಅತಿಶಯೋಕ್ತಿಯಲ್ಲ.\u003c\/p\u003e\n\u003cp\u003e-ದೇವರಾಜ್ ಸನ್ಯಾಲ್\u003c\/p\u003e\n\u003cp\u003eಪ್ಯಾರಾನಾರ್ಮಲ್ ಸಂಶೋಧಕ\u003c\/p\u003e\n\u003cp\u003e'ಡಿಟೆಕ್ಟಿವ್ ಆಫ್ ಸೂಪರ್ ನ್ಯಾಚುರಲ್ಸ್'ನ ಸಂಸ್ಥಾಪಕ ಪಶ್ಚಿಮ ಬಂಗಾಳ'\u003c\/p\u003e","brand":"Gururaj Kodkani, Yallapura","offers":[{"title":"Default Title","offer_id":46974162436355,"sku":"HB00005282","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Paranormal.jpg?v=1750575745"},{"product_id":"vikshipta-horror-novel-gururaj-kadkani-kannada-book","title":"ವಿಕ್ಷಿಪ್ತ","description":"\u003cp\u003eಚಿಕ್ಕದ್ದೊಂದು ಆಟಿಕೆಯನ್ನಿಟ್ಟುಕೊಂಡು ಫೇಸ್ ಬುಕ್ಕಿನಲ್ಲಿ ಬರೆಯಲಾರಂಭಿಸಿದ್ದ ಕತೆಯೊಂದು ನಿಧಾನಕ್ಕೆ ತುಂಬ ಜನಪ್ರಿಯವಾಗಲಾರಂಭಿಸಿದ್ದು ನಿಜಕ್ಕೂ ಆಶ್ಚರ್ಯವೇ. ಮೊದಮೊದಲು ಹತ್ತು ಭಾಗಗಳಲ್ಲಿ ಮುಗಿಸಿಬಿಡೋಣವೆಂದುಕೊಂಡಿದ್ದ ಕತೆ ನನ್ನ ಕೈ ಮೀರಿ ಬೆಳೆದರೂ ಓದುಗರಲ್ಲಿ ಕೊಂಚವೂ ಬೇಸರ ಮೂಡಿಸದೇ ಓದಿಸಿಕೊಂಡಿದ್ದು ಹೋಗಿದ್ದು ಸೋಜಿಗ. ಒಂದು ಹಂತಕ್ಕೆ ಓದುಗರು ಇದನ್ನೋದುತ್ತ, ಇದರ ಭಾಗವೇ ಆಗಿ ಹೋಗಿ ಕತೆಯ ಕೆಲವು ಸಾವುನೋವುಗಳು ತಮ್ಮ ವೈಯಕ್ತಿಕವೇ ಏನೋ ಎನ್ನುವಂತೆ ಭಾವಿಸಿ ಹೊತ್ತಿಲ್ಲದ್ದ ಹೊತ್ತಿನಲ್ಲಿ ನನಗೆ ಸಂದೇಶ ಕಳುಹಿಸಿ, 'ನಿಮಗೆ ಕರುಣೆ ಇಲ್ಲವಾ, ಅವರನ್ನೇಕೆ ಕೊಂದಿರಿ.' ಎಂದು ಬಯ್ದು ನನ್ನನ್ನು ಅಪರಾಧಿ ಸ್ಥಾನಕ್ಕೆ ನಿಲ್ಲಿಸಿದ್ದೂ ಇದೆ. ಹಾಗೆ ಓದುಗರು ಅಪರಾಧಿ ಸ್ಥಾನಕ್ಕೆ ನಿಲ್ಲಿಸಿದ್ದರೂ ಓದುಗರಿಗೆ ನನ್ನ ಕತೆಯೊಂದು ತಮ್ಮದೇ ಕತೆಯೆನ್ನುವ ಭಾವ ಕೊಟ್ಟಿದೆ ಎನ್ನುವ ಸಂತೃಪ್ತಿಯೇ ನನಗೆ ಹೆಚ್ಚು ಖುಷಿ ಕೊಟ್ಟಿತ್ತು ಎನ್ನುವುದನ್ನು ವಿವರಿಸಬೇಕಿಲ್ಲ. ಪೂರ್ತಿ ಐವತ್ತು ಕಂತುಗಳಲ್ಲಿ ಈ ಕತೆಯನ್ನು ಮುಗಿಸಿದಾಗ ಅನೇಕ ಓದುಗರು ಕತೆಯನ್ನು ಕಾದಂಬರಿಯಾಗಿ ಪುಸ್ತಕ ರೂಪದಲ್ಲಿ ಪ್ರಕಟಿಸುವಂತೆ ಕೇಳಿದ್ದರು. ಅಂಥಹ ಹತ್ತಾರು ಓದುಗರ ಕೋರಿಕೆಯ ಫಲವೇ, 'ವಿಕ್ಷಿಪ್ತ' ಎನ್ನುವ ಈ ಕಾದಂಬರಿಯ ಮುದ್ರಣ ರೂಪ.\u003c\/p\u003e","brand":"Gururaj Kodkani","offers":[{"title":"Default Title","offer_id":47311881142531,"sku":"HB00005420","price":180.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Vikshipta_58806fa4-3ec5-44f7-9f4e-5ec7fdd79293.jpg?v=1760011268"},{"product_id":"prathijne-horror-novel-gururaj-kodkani-kannada-book","title":"ಪ್ರತಿಜ್ಞೆ","description":"\u003cp\u003eಅತಿವಾಸ್ತವದ ಕಲ್ಪನೆಯೂ ವಿಭಿನ್ನವಾಗಿ ಭಯ, ಪ್ರೀತಿ, ರೋಚಕತೆಯಂಥ ಹತ್ತು ಹಲವು ಭಾವಗಳನ್ನು ಓದುಗನಲ್ಲಿ ಮೂಡಿಸಲು ಸಾಧ್ಯವಾ ಎನ್ನಿಸಿದ್ದು ಸುಳ್ಳಲ್ಲ. ಕಿಂಗ್ನ ಬರಹಗಳಲ್ಲಿ ನಿಜಕ್ಕೂ ಒಂದು ಮಾಂತ್ರಿಕತೆಯಿದೆ. ಅವನ ಕಾದಂಬರಿ ಓದಿ ಮುಗಿಸುವ ಹೊತ್ತಿಗೆ ಕನ್ನಡದಲ್ಲಿಯೂ ಈ ಧಾಟಿಯ ಕತೆ ಇರಬಾರದಿತ್ತೇ ಎನ್ನುವ ಹಪಾಹಪಿ ನನಗೆ.\u003c\/p\u003e\n\u003cp\u003eಆ ಆಲೋಚನೆಯ ಹಿಂದೆಯೇ ನಾನೇಕೆ ಹೀಗೊಂದು ಕತೆಯನ್ನು, ನಮ್ಮದೇ ಮಣ್ಣಿನ ಸೊಗಡಿಗೆ ಹೊಂದಿಕೊಳ್ಳುವಂತೆ ಬರೆಯಲು ಪ್ರಯತ್ನಿಸಬಾರದು ಎಂಬ ಮತ್ತೊಂದು ಯೋಚನೆ. ಯೋಚನೆಯನ್ನು ಕಾರ್ಯರೂಪಕ್ಕಿಳಿಸಲು ಸಾಧ್ಯವಾಗಿದ್ದು ಮಾತ್ರ ಹತ್ತು ವರ್ಷಗಳ ನಂತರವೇ.\u003c\/p\u003e\n\u003cp\u003eಮೊದಲ ಬಾರಿಗೆ ಕತೆಯನ್ನು ಫೇಸ್ಟುಕ್ಕಿನಲ್ಲಿ ಪ್ರಕಟಿಸಿದಾಗ ಇದಕ್ಕೆ ಸಿಕ್ಕ ಪ್ರತಿಕ್ರಿಯೆ ಅಭೂತಪೂರ್ವ. ಮೂರನೇಯ ಕಂತಿನ ಹೊತ್ತಿಗಾಗಲೇ ಓದುಗ ಮಿತ್ರರರಲ್ಲೊಂದು ತೀವ್ರ ಕುತೂಹಲ, ಬೆಳಿಗ್ಗೆ ಮತ್ತು ಸಂಜೆ ಎಂದುಕೊಂಡು ದಿನಕ್ಕೆರಡು ಭಾಗಗಳನ್ನು ಪ್ರಕಟಿಸುತ್ತಿದ್ದೆ. ಕೊಂಚ ತಡವಾದರೂ ಸಾಕು, ಇನ್ಬಾಕ್ಸಿಗೆ ಸಂದೇಶ ಕಳಿಸುವ ಕೆಲವು ಸ್ನೇಹಿತರು, 'ಇನ್ನೂ ಯಾಕೆ ಇಂದಿನ ಕಂತು ಪ್ರಕಟವಾಗಿಲ್ಲ' ಎಂದು ಕೇಳುತ್ತಿದ್ದರು. ಒಂದಿಬ್ಬರಂತೂ 'ಇತ್ತೀಚೆಗೆ ತೀರ ತಡ ಮಾಡ್ತಿದ್ದೀರಿ. ಇಷ್ಟು ಆಲಸ್ಯ ಒಳ್ಳೆಯದಲ್ಲ' ಎಂದು ಪ್ರೀತಿಯಿಂದ ಗದರಿದ್ದೂ ಇದೆ.\u003c\/p\u003e","brand":"Gururaj Kodkani","offers":[{"title":"Default Title","offer_id":47311920398595,"sku":"HB00005421","price":160.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Prathigne.jpg?v=1760012667"},{"product_id":"hekki-tanda-nenapugalu-collectio-of-articles-gururaja-kodkani-kannada-book","title":"ಹೆಕ್ಕಿ ತಂದ ನೆನಪುಗಳು","description":"\u003cp\u003eಹಳೆಯ ಕಳೆದು ಹೋದ ದಿನಗಳಿಗೆ ಒಮ್ಮೆಯಾದರೂ ನಾನು ಹಿಂದಿರುಗಬೇಕು ಏನನ್ನಾದರೂ ಬದಲಿಸಬೇಕೆಂದಲ್ಲ, ಕೆಲವನ್ನು ಮತ್ತೊಂದು ಬಾರಿ ಅನುಭವಿಸುವ ಖುಷಿಗಷ್ಟೇ...”\u003c\/p\u003e\n\u003cp\u003eಹೌದು, ನೆನಪುಗಳ ಚಾಪೆಯಲ್ಲಿ ಖುಷಿಯ ಘಟನೆಗಳು ಮತ್ತು ವಿಷಾದದ, ಬೇಡದ, ಪಶ್ಚಾತ್ತಾಪದ, ನೋವಿನ ಹತ್ತು ಹಲವಾರು ಘಟನೆಗಳು ಜೊತೆಯಾಗಿ ಹೆಣೆದುಕೊಂಡು ಬಿಟ್ಟಿರುತ್ತವೆ. ಯಾವುದನ್ನು ಕಿತ್ತರೂ ಹೆಣಿಗೆ ಅಳ್ಳಕವಾಗಿ ಚಾಪೆ ಹಾಳಾಗುತ್ತದೆ. ಇದ್ದಂತೆಯೇ ಉಳಿಸಿಕೊಂಡರೆ ಬೇಡವಾದ ಕಡ್ಡಿಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತ ಕಾಡಿಸುತ್ತವೆ, ಆದರೆ ಚಾಪೆ ಗಟ್ಟಿಯಾಗಿಯೇ ಉಳಿಯುತ್ತದೆ. ಗುರುರಾಜ ಕೊಡ್ಕಣಿಯವರ \"ಹೆಕ್ಕಿ ತಂದ ನೆನಪುಗಳು\" ಇಂಥದ್ದೇ ಮೂವತ್ತೊಂದು ಬರಹಗಳ ಸಂಕಲನ. ಬಾಲ್ಯದ ಘಟನೆಗಳಿಂದ ಶುರುವಾಗಿ, ಯೌವನ ಮತ್ತು ಯೌವನ ಮಾಗುವವರೆಗಿನ ಅವರ ಬರಹಗಳನ್ನು ಓದುವುದೇ ಒಂದು ಖುಷಿ. ಕೆಲವರ ಬಾಲ್ಯ ತುಂಬ ಸಮೃದ್ದವಾಗಿರುತ್ತದೆ. ಅಂಥವರನ್ನು ಪುಣ್ಯವಂತರು ಎನ್ನುತ್ತೇನೆ ನಾನು. ಗುರುರಾಜ ಕೊಡ್ಕಣಿ ಕೂಡಾ ಇಂಥ ಪುಣ್ಯವಂತರಲ್ಲಿ ಒಬ್ಬರು! ಅವರ ಬಾಲ್ಯದ ಬಗೆಗಿನ ಸುಮಾರು ಬರಹಗಳು ತುಟಿಯಂಚಿನಲ್ಲಿ ನಗೆ ಉಕ್ಕಿಸಿದರೆ, ಕೆಲವು ಉರುಳಾಡಿ ನಗಿಸುವಂತಿವೆ. ಅದರಲ್ಲೂ ಅವರ ಬಾಲ್ಯ ಹಳ್ಳಿಯಲ್ಲಿ ಕಳೆದಿರುವುದರಿಂದ ಅದು ಸಾಕಷ್ಟು ವರ್ಣರಂಜಿತವಾಗಿದೆ ಮತ್ತು ವಿಸ್ತಾರ ಕ್ಯಾನ್ವಾಸಿನಲ್ಲಿ ಚಿತ್ರಿತವಾಗಿದೆ. ಈ ಎಲ್ಲದರ ಬಗ್ಗೆ ಬರೆಯುವಾಗ ಅವರ ಬರಹದಲ್ಲಿ ಆ ದಿನಗಳನ್ನು \"ಮತ್ತೊಮ್ಮೆ ಜೀವಿಸಿದ ಖುಷಿ ಕಾಣಿಸುತ್ತದೆಯಷ್ಟೇ ಹೊರತು, ನಮ್ಮ ಕಾಲವೇ ಚೆಂದ ಎನ್ನುವ ಹಳಹಳಿಕೆ ಕಾಣಬರುವುದಿಲ್ಲ. ಹಾಗಾಗಿ ಓದುವಾಗ ಯಾವುದೇ ಋಣಾತ್ಮಕ ಚಿಂತನೆ ನಮ್ಮಲ್ಲಿ ಮೂಡುವುದಿಲ್ಲ. ಯೌವನದ ಒಂದಿಷ್ಟು ಎಡವಟ್ಟುಗಳ ಬಗ್ಗೆಯೂ ದಾಖಲಿಸುತ್ತಾರಾದರೂ, ಅವುಗಳನ್ನು ಕೂಡಾ ಮೀರಿ ಬದುಕು ಕಟ್ಟಿಕೊಂಡ ಪರಿಣಾಮವಾಗಿ ಹಗುರವಾಗಿ ಓದಿಸಿಕೊಂಡು ಬಿಡುತ್ತವೆ. \u003c\/p\u003e","brand":"Gururaj Kodkani","offers":[{"title":"Default Title","offer_id":47699902660867,"sku":"HB0000550363","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HekkiTandaNenapugalu.jpg?v=1769923753"}],"url":"https:\/\/harivubooks.com\/collections\/gururaj_kodkani_yallapura_books.oembed","provider":"Harivu Books","version":"1.0","type":"link"}