{"title":"Dadapeer Jyman","description":"","products":[{"product_id":"pardaa-and-paaligami","title":"ಪರ್ದಾ \u0026 ಪಾಲಿಗಮಿ","description":"\u003cp\u003e\u003cspan\u003ePurdah and Polygomy: Life In An Indian Muslim Household (‘ಪರ್ದಾ \u0026amp; ಪಾಲಿಗಮಿ: ಭಾರತೀಯ ಮುಸ್ಲಿಮ್ ಕುಟುಂಬವೊಂದರಲ್ಲಿ ಬದುಕು’) ಎಂಬ ಹೆಸರಿನ ಇಂಗ್ಲೀಷ್ ಕಾದಂಬರಿ ಬೆಂಗಳೂರಿನ ಹೊಸಾಳಿ ಮುದ್ರಣಾಲಯದಲ್ಲಿ ಮುದ್ರಿತವಾಗಿ 1944ರಲ್ಲಿ ಪ್ರಕಟವಾಯಿತು. ಇದನ್ನು ರಚಿಸಿದವರು ಬೆಂಗಳೂರಿನ ಇಕ್ಬಾಲುನ್ನೀಸಾ ಹುಸೇನ್ ಎಂಬ ಮುಸ್ಲಿಂ ಮಹಿಳೆ. ಆ ಮೂಲಕ ಇಂಗ್ಲೀಷ್‌ನಲ್ಲಿ ಸಾಮಾಜಿಕ ಕಾದಂಬರಿಯನ್ನು ಬರೆದ ಮೊದಲ ಭಾರತೀಯ ಮುಸ್ಲಿಮ್ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿ, ಇಕ್ಬಾಲುನ್ನೀಸಾ ಭಾರತೀಯ ಇಂಗ್ಲೀಷ್ ಸಾಹಿತ್ಯದ ಇತಿಹಾಸದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡರು.\u003c\/span\u003e\u003c\/p\u003e\n\u003cp\u003eಈ ಕೃತಿಯನ್ನು ಇಂಗ್ಲೀಷ್‌ನಲ್ಲಿ ಬರೆಯಲ್ಪಟ್ಟ ಪ್ರಥಮ ಮುಸ್ಲಿಮ್ ಸುಧಾರಣಾವಾದಿ ಕಾದಂಬರಿಯೆಂದು ಅಥವಾ ಪ್ರಥಮ ಸ್ತ್ರೀವಾದಿ ಕಾದಂಬರಿಯೆಂದು ನೋಡಬಹುದು. ಒಂದಲ್ಲಾ ಒಂದು ರೀತಿಯಲ್ಲಿ ಮಹಿಳೆಯು ತನ್ನ ಹಕ್ಕುಗಳಿಗಾಗಿ ಹೋರಾಡುವುದು ಕೇವಲ ಇತ್ತೀಚಿನ ಬೆಳವಣಿಗೆಯಲ್ಲ ಮತ್ತು ಕೇವಲ ಪಾಶ್ಚಾತ್ಯ ರಾಷ್ಟ್ರಗಳಿಂದ ಆಮದು ಮಾಡಿಕೊಂಡ ವೈಚಾರಿಕತೆಯೂ ಅಲ್ಲ ಎಂಬುದಕ್ಕೆ ಇಕ್ಬಾಲುನ್ನೀಸಾ ಹುಸೇನ್ ಅವರ “ಪರ್ದಾ \u0026amp; ಪಾಲಿಗಮಿ” ಕಾದಂಬರಿ ಅತ್ಯುತ್ತಮ ನಿದರ್ಶನ. 21ನೆಯ ಶತಮಾನದಲ್ಲಿಯೂ ‘ಧಾರ್ಮಿಕ ಅಸ್ಮಿತೆ’ ಎಂಬ ನೆಪದಲ್ಲಿ ಎಲ್ಲಾ ಧರ್ಮಗಳ ನಾಯಕರೂ ಪರಂಪರಾಗತ ಸ್ತ್ರೀ-ಪುರುಷ ಶ್ರೇಣೀಕರಣವನ್ನು ಹಿಂಬಾಗಿಲಿಂದ ತರಲು ಪ್ರಯತ್ನಿಸುತ್ತಿರುವ ಕಾರಣದಿಂದ ಈ ಕಾದಂಬರಿ ಇಂದೂ ಕೂಡಾ ಅತ್ಯಂತ ಪ್ರಸ್ತುತವಾಗಿದೆ.\u003c\/p\u003e\n\u003cp\u003eಒಂದು ಅತ್ಯಂತ ಪ್ರಸ್ತುತವಾಗಿರುವ ಇಂಗ್ಲೀಷ್ ಕೃತಿಯನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿರುವ ದಾದಾಪೀರ್ ಜೈಮನ್ ಮತ್ತು ಈ ಕೃತಿಯನ್ನು ಅನುವಾದಿಸಲು ಜೈಮನ್ ಅವರನ್ನು ಪ್ರೋತ್ಸಾಹಿಸಿ, ಅನಂತರ ‘ಛಂದ ಪುಸ್ತಕ’ ಎಂಬ ತಮ್ಮದೇ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯ ಮೂಲಕ ಅನುವಾದಿತ ಕೃತಿಯನ್ನು ಪ್ರಕಟಿಸುತ್ತಿರುವ, ಪ್ರಸಿದ್ಧ ಕತೆಗಾರ-ಕಾದಂಬರಿಕಾರ ವಸುಧೇಂದ್ರ ಇವರಿಬ್ಬರಿಗೂ ನನ್ನ ಹಾರ್ದಿಕ ಅಭಿನಂದನೆಗಳು.\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003eಡಾ. ಸಿ.ಎನ್. ರಾಮಚಂದ್ರನ್\u003c\/p\u003e","brand":"Translated By Dadaphir Jaiman","offers":[{"title":"Default Title","offer_id":42020606673155,"sku":"HB00001842","price":380.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_8f311e96-5320-4065-940c-de2fb1f7f452.jpg?v=1636356266"},{"product_id":"neelakurinji-stories-kannada-book","title":"ನೀಲಕುರಿಂಜಿ","description":"ವಿವಿಧ ಸಮುದಾಯಗಳಿಗೆ ಸೇರಿದ ಹೊಸ ತಲೆಮಾರಿನ ತಾರುಣ್ಯವು ಸೃಷ್ಟಿಸುತ್ತಿರುವ ಇಂದಿನ ಕನ್ನಡ ಸಾಹಿತ್ಯವು ಹೊಸ ಬೈಗಿನ ನವಿರು ಬಿಸಿಅನ ಬೆಳಗಿನಂತೆ ಗೋಚರಿಸುತ್ತಿದೆ. ಇದೀಗ, ಮುಕ್ತ ಛಂದಸ್ಸಿನ ಕಾಲ. ಒಣ ಬೌದ್ಧಿಕತೆ ಹುಟ್ಟು ಹಾಕುವ ಸಿದ್ಧಾಂತಗಳ ಭಾರ; ಕೃತಕ ತಾರ್ಕಿಕ ಅಂತ್ಯಗಳನ್ನು ಬಯಸುವ ಸಾಹಿತ್ಯದಿಂದ ನಿಧಾನಕ್ಕೆ ಕಳಚಿಕೊಳ್ಳುತ್ತಿರುವ ಕಾಲವೂ ಇದಾಗಿದೆ. ಹಾಗೆಂದು, ಬರಹಗಾರರಲ್ಲಿ ರಾಜಕೀಯ ನಂಬಿಕೆ-ಬದ್ಧತೆ, ಬದಲಾವಣೆಯ ಕನಸು ಕಾತರ, ಭವಿಷ್ಯದ ಕುರಿತು ಅಪಾರ ಭರವಸೆ ಕಾಣ್ಕೆಗಳೇನೂ ಬದುಕಿನಿಂದ ದೂರ ಸರಿವಿಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003eದಾದಾಪೀರ್ ಜೈಮನ್ ಮತ್ತು ಅವರಂಥ ಒಬ್ಬಿಬ್ಬರು ಲೇಖಕರನ್ನು ಈ ಹೊಸ ಕಥನಮಾರ್ಗದ ಭರವಸೆಯ ಲೇಖಕರು ಎಂದು ನಾನು ತಿಳಿದಿದ್ದೇನೆ. ಕಥಾವಸ್ತು. ಒಟ್ಟಾರೆ ಕಟ್ಟೋಣದಲ್ಲಿ ಸಾಧಿಸುತ್ತಿರುವ ಪರಿಣತಿ, ಬದುಕಿನ ಕುರಿತು ರೂಢಿಸಿಕೊಳ್ಳುತ್ತಿರುವ ಹದವಾದ ದೃಷ್ಟಿಕೋನವನ್ನು ಆಯಾ ಕಥೆಗಳಲ್ಲಿ ಸಾಧಿಸುತ್ತಿರುವ ಕೊಂಚ ಮಾತ್ರದ ಪಕ್ವತೆಗಳು ಇಂತಹ ಮಾತುಗಳನ್ನು ಬರೆಯಲು ಪ್ರೇರೇಪಿಸುತ್ತಿವೆ. ಇಂಥ ಲೇಖಕರ ಈವರೆಗಿನ ಬೆರಳೆಣಿಕೆಯ ಕಥೆಗಳು ಕಥನಮಾರ್ಗ ಮುಂದೆ ಪಡೆದುಕೊಳ್ಳಬಹುದಾದ ನಡಿಗೆಯನ್ನೂ ಸೂಚಿಸುತ್ತಿರುವಂತಿದೆ. 'ನೀಲಕುರಿಂಜಿ' ಸಂಕಲನದಲ್ಲಿ ಕಥೆಗಳಲ್ಲಿ ವಸ್ತು ವಿಷಯ ವೈವಿಧ್ಯತೆ, ಸಂಯಮಪೂರ್ಣ ನಿರೂಪಣೆ, ತಾರ್ಕಿಕವಾಗಿಯಲ್ಲದೆ ಆ ಕ್ಷಣಕ್ಕಷ್ಟೇ ಮುಗಿದು ಓದುಗನಲ್ಲಿ ಬೆಳೆಯಬಹುದಾದ ಅಂತ್ಯಗಳು ತಟ್ಟನೆ ಗಮನ ಸೆಳೆಯುತ್ತವೆ. ಅವರ ಕಥೆಗಳಲ್ಲಿ ಭಾವತೀವ್ರತೆ ಇಣುಕಿದರೂ ವಾಸ್ತವ ಮಾರ್ಗದ ನಿರೂಪಣಿಗೆ ಹೆಚ್ಚು ಒತ್ತು. ಪಾತ್ರಗಳನ್ನು ಜತನದಿಂದ ಕಟ್ಟುವಾಗ ಪೂರ್ವಗ್ರಹಗಳಿಂದ ಮುಕ್ತವಾಗಿ ಅವನ್ನು ಮನುಷ್ಯ ಗೊಂಬೆಗಳು ಎಂಬಂತೆ ನೋಡುವುದು ಕೂಡ ಗಮನಾರ್ಹ ಅಂಶವೇ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕನ್ನಡದ ಓದುಗರು ಈ ಹೊಸ ಲೇಖಕನ ಕಥಾ ಸಂಕಲನವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಲಿ. ಅದು ಬದಲಾಗುತ್ತಿರುವ ಕನ್ನಡ ಕಥಾಲೋಕಕ್ಕೆ ನಾವು ತೋರಿಸಬಹುದಾದ ಅರ್ಥಪೂರ್ಣ ಪ್ರತಿಕ್ರಿಯೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಕೇಶವ ಮಳಗಿ","brand":"Dadapeer Jyman","offers":[{"title":"Default Title","offer_id":43420218851587,"sku":"HB00003617","price":120.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_7738d283-6c0e-4329-ab64-74e17a161f8e.jpg?v=1665828696"},{"product_id":"junction-point-experential-writing-dadapeer-jyman-kanndabook","title":"ಜಂಕ್ಷನ್ ಪಾಯಿಂಟ್","description":"\u003cp\u003eಇದು ಲೇಖಕನೂ ಸೇರಿದಂತೆ ಹಲವು ಜನರ ಕಷ್ಟ ಕೋಟಲೆಗಳು, ದುಗುಡ ದುಮ್ಮಾನಗಳು,  ಭಾವನೆಗಳು, ಬದುಕಿನ ಬಗೆಗಿನ ಹಲವು ಗ್ರಹಿಕೆಗಳು ಸಂಧಿಸುವ ಜಂಕ್ಷನ್ ಪಾಯಿಂಟ್. ಹಲವು ದಾರಿಗಳು ಕೂಡುವ ಜಂಕ್ಷನ್ ಹಲವು ದಾರಿಗಳು ಹೊರಡುವ ಜಂಕ್ಷನ್ನೂ ಹೌದು. ಅಲ್ಲಿ ನಿಂತು ಕಿರು ಬೆಳಕಿನ ದಾರಿ ಸಿಗುವುದೋ ಎಂದು ನೋಡುವುದು ಓದುಗರ ನಿರೀಕ್ಷೆ. ನನಗೆ ಇಲ್ಲಿನ ಬರವಣಿಗೆ ಒಂದು ರೀತಿ ಸೆಮಿ ಫಿಕ್ಷನ್ನಂತೆ ಕಂಡಿದೆ. ಈ ಓದು ನನ್ನನ್ನು ಮತ್ತಷ್ಟು ಮನುಷ್ಯನನ್ನಾಗಿ ಮಾಡುತ್ತಿದೆಯೋ ಅಥವಾ ನನ್ನೊಳಗೆ ಮನೆ ಮಾಡಿಕೊಂಡಿರುವ ಚಿಂತೆಗಳನ್ನು ಇಮ್ಮಡಿಗೊಳಿಸುತ್ತಿದೆಯೋ ಎಂಬ ಗೊಂದಲವಾಗುತ್ತಿದೆ. ಈ ಬರಹಗಳು ಅಷ್ಟು ಕಾಡುತ್ತವೆ.\u003c\/p\u003e\n\u003cp\u003e\u003cspan style=\"text-decoration: underline;\"\u003e\u003cstrong\u003eಜನಾರ್ದನ ಕೆಸರಗದ್ದೆ, ಲೇಖಕರು, ಪರಿಸರವಾದಿ, ಯುವಜನ ಕಾರ್ಯಕರ್ತರು.\u003c\/strong\u003e\u003c\/span\u003e\u003c\/p\u003e\n\u003cp\u003e \u003c\/p\u003e\n\u003cp\u003eದಾದಾಪೀರ್ ಉರ್ಫ್ ದಾದು ಬರೆದಿರುವ ಈ ಅಪರೂಪದ ಪುಸ್ತಕ ಆತ್ಮಕತೆಯಂತಾ ಜಗದ್ಕತೆಯೂ ಹೌದು ಮತ್ತು ನಿಶ್ಚಲ ಪ್ರವಾಸ ಕಥನವೂ ಹೌದು. ಲೋಕವನ್ನು ಮತ್ತು ಬದುಕನ್ನು ಅರಿಯಲು, ಮತ್ತದರ ವೈವಿಧ್ಯ ಮತ್ತು ವೈರುಧ್ಯಗಳನ್ನು ಕಾಣಲು, ಕೇಳಲು ಲೋಕಸಂಚಾರ ಮತ್ತು ದೀರ್ಘಾಯುಷ್ಯ ಅಗತ್ಯವೇನಲ್ಲ ಎಂದು ಸದ್ದಿಲ್ಲದೆ ಹೇಳುವ ಈ ಪುಸ್ತಕದಲ್ಲಿ, ಸೂಕ್ಷ್ಮ ಜೀವಿ ದಾದುವಿಗೆ ನಿಂತಲ್ಲೇ ಕುಂತಲ್ಲೇ  ಲೋಕದರ್ಶನ ಮತ್ತು ಜೀವನದರ್ಶನ ಲಭ್ಯವಾಗಿರುವುದು ಕಾಣುತ್ತೇವೆ. ಇದಕ್ಕೆ ಮುಖ್ಯ ಕಾರಣ ದಾದುವಿಗೆ ಸುತ್ತಲಿನ ಬದುಕು ಮತ್ತು ಜೀವಗಳ ಬಗೆಗಿರುವ ಮುಗ್ಧ ಕುತೂಹಲ, ಬೇಷರತ್ ಗೌರವ ಮತ್ತು ತೀವ್ರವಾದ ಪರಾನುಭೂತಿ. ಅಷ್ಟೇ ಮುಖ್ಯ ಇಲ್ಲಿ ದಾದುವಿನ ಪ್ರಾಮಾಣಿಕತೆ. ಲೋಕವನ್ನು ಎದುರುಗೊಳ್ಳುತ್ತಾ ಹೋಗುವಾಗ ದಾದು ತನ್ನನ್ನೇ ಎದುರುಗೊಳ್ಳುತ್ತಾ ಹೋಗುತ್ತಾನೆ. ತನ್ನೊಳಗಿನ ಗಂಟು-ಕಗ್ಗಂಟುಗಳನ್ನು ಬಿಚ್ಚುತ್ತಾ ಹೋಗುವ ಮತ್ತು ತನ್ನನ್ನೇ ತಾನು ಪರೀಕ್ಷಿಸಿಕೊಳ್ಳುವ ಮತ್ತು ಪರಿಷ್ಕರಿಸಿಕೊಳ್ಳುವ ಅವನ ರೀತಿ ಓದುಗರನ್ನೂ ವಿನೀತಗೊಳಿಸುತ್ತದೆ. ತನ್ನ ಮಿತಿಗಳನ್ನು ಮೀರುವ, ತನ್ನ ಅರಿವಿನ ಕ್ಷಿತಿಜಗಳನ್ನು ವಿಸ್ತರಿಸಿಕೊಳ್ಳುವ ಈ ಪ್ರಯಾಣವು ಒಂದು ಭಿನ್ನ ಬಗೆಯ ಪ್ರವಾಸ ಕಥನವೇ ಹೌದು. ಇಲ್ಲಿ ಲೇಖಕನಾದ ದಾದು ಪ್ರವಾಸ ಹೋಗದೆ ಇದ್ದರೂ, ಅದೆಷ್ಟೋ ಲೋಕಗಳು ಒಂದು ಬಿಂದುವನ್ನು ಹಾದು ಹೋಗುತ್ತವೆ. ದಾದು ಆ ಬಿಂದುವಿನ ಮೇಲೆ ನಿಂತು, ನಿರಂತರ ಸಂಚಾರದಲ್ಲಿರುವ, ಎಲ್ಲಿಂದಲೋ ಬಂದು ಎಲ್ಲಿಗೋ ಹೋಗುತ್ತಿರುವ ಆ ಎಲ್ಲಾ ಲೋಕಗಳನ್ನು ಸಮೀಪದಿಂದ ಕಂಡು, ಅವುಗಳ ಮೂಲಕ ಈ ವಿಸ್ಮಯ ಬದುಕಿನ ಬಗ್ಗೆ ಆಲೋಚಿಸುತ್ತಾ ಅವುಗಳನ್ನೆಲ್ಲ ನಮ್ಮ ಮುಂದೆ ಇಟ್ಟಿದ್ದಾನೆ. ಇದೊಂದು ಅಪರೂಪದ ಪ್ರವಾಸಕಥನ ಎಂದರಷ್ಟೇ ಸಾಲದು. ಇದೊಂದು ಅಪರೂಪದ ಜೀವನಪ್ರೀತಿಯ ಕಥನವೂ ಹೌದು.\u003c\/p\u003e\n\u003cp\u003e\u003cspan style=\"text-decoration: underline;\"\u003e\u003cstrong\u003eಸಂವರ್ತ ಸಾಹಿಲ್, ಕವಿ, ಅಂಕಣಕಾರರು, ಅನುವಾದಕರು.\u003c\/strong\u003e\u003c\/span\u003e\u003c\/p\u003e","brand":"Dadapeer Jyman","offers":[{"title":"Regular Copy","offer_id":47003710652675,"sku":"PHB0000065","price":180.0,"currency_code":"INR","in_stock":true},{"title":"Signed Copy","offer_id":47003717468419,"sku":null,"price":180.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Junction_Point_Cover_Page_1.jpg?v=1751352142"},{"product_id":"chooru-bimba-stories-dadapeer-jyman-kannada-book","title":"ಚೂರು ಬಿಂಬ","description":"\u003cp\u003eತಾಹಾನ ಪತ್ರ, ಅಪನ ಕತ್ತರಿ, ಕಡುನೀಲಿ ಅಂಗಿ ಈ ಮೂರೂ ಕಥೆಗಳೂ ಮಾನವ ಸಂಬಂಧಗಳ ಸಂಕೀರ್ಣತೆಗಳನ್ನು ಬೇರೆಬೇರೆ ಆಯಾಮಗಳಲ್ಲಿ ಶೋಧಿಸುತ್ತಲೇ ತಮ್ಮ ಹೊರಮೈ ಮತ್ತು ಒಳಮೈಗಳನ್ನೂ ಕಟ್ಟಿಕೊಳ್ಳುತ್ತವೆ. ಕಥೆಗಳ ಸೂಕ್ಷ್ಮ ಹೂರಣಕ್ಕೆ ಅಚ್ಚುಕಟ್ಟಾದ ಹೊದಿಕೆ ಹೊದಿಸುವ ಕಲೆ ಲೇಖಕರಿಗೆ ಸ್ವಾಭಾವಿಕವಾಗಿ ಒಲಿದಿದೆ. ಎರಡೂ ಒಂದಕ್ಕೊಂದು ಪೂರಕವಾಗುವಂತೆ ಚೆಂದವಾಗಿ ಹೊಂದಿಸುವಲ್ಲಿ ಲೇಖಕರು ಬಹುತೇಕ ಯಶಸ್ವಿಯಾಗಿದ್ದಾರೆ. ಭಾಷೆ, ತಂತ್ರ ಮತ್ತು ಕಥನಕಲೆ ಸಹಜವಾಗಿ ಬೆಸೆದುಕೊಂಡು ಕಥೆಗಳು ಬರೆಯಲ್ಪಟ್ಟಿವೆ. ಅದರ ಜೊತೆಗೆ ಕಥೆಗಳು ಔತಣದಿಂದ ಕುಸುರಿಗೊಂಡಿವೆ.\u003c\/p\u003e\n\u003cp\u003eಕಥೆಗಾರರು ಪಾತ್ರಗಳ ಸಿಟ್ಟನ್ನೂ, ಕ್ರೌರ್ಯವನ್ನೂ, ದ್ವೇಷವನ್ನೂ ಕೂಡ ಕುಸುರಿಮಾಡಿ ಮೆತ್ತಗಾಗಿಸಿಬಿಡುತ್ತಾರೆ. ಈ ಕಥೆಗಳಲ್ಲಿ ಅವು ಪೂರಕವಾಗಿ ಕೆಲಸ ಮಾಡಿದೆ. ಭಾವಕ್ಕೂ ಅಭಿವ್ಯಕ್ತಿಗೂ ಸೂಕ್ತ ಸಂಪರ್ಕವಿರಬೇಕಾದರೆ ಭಾವಕ್ಕೆ ತಕ್ಕ ಅಭಿವ್ಯಕ್ತಿ ಮುಖ್ಯ ಎಂದು ನಾವು ನಂಬಿದ್ದೇವೆ. ಈ ಕಥೆಗಳಲ್ಲಿ ಎರಡರ ನಡುವೆ ಸಮನ್ವಯವನ್ನು ಗಳಿಸಿಕೊಂಡಿರುವ ಕಥೆಗಾರರ ಈ ಶಕ್ತಿ ಹೀಗೇ ಇರಲಿ ಎಂದು ನಾವು ಹಾರೈಸುತ್ತೇವೆ.\u003c\/p\u003e\n\u003cp\u003e-ವಿನಯಾ ಒಕ್ಕುಂದ ಮತ್ತು ಗುರುಪ್ರಸಾದ್ ಕಾಗಿನೆಲೆ\u003cbr\u003eತೀರ್ಪುಗಾರರು, ಟೊಟೊ ಸಾಹಿತ್ಯ ಪುರಸ್ಕಾರ - 2023 (ಕನ್ನಡ ಸಾಹಿತ್ಯ ವಿಭಾಗ)\u003c\/p\u003e\n\u003cp\u003eಆಳಕ್ಕಿಳಿಯುವ, ಸಮುದಾಯಗಳನ್ನು ಸೂಕ್ಷ್ಮ ವಾಗಿ ಪರಿಶೀಲಿಸುವ, ನಗರಗಳನ್ನೆಲ್ಲವ ಸಂಚರಿಸುವ, ಕುಟುಂಬವನ್ನು ಶೋಧಿಸುವ, ಮಾನವ ಸಂವಹನದ ದುರ್ಬಲತೆಗಳನ್ನು ಒರೆಗೆ ಹಚ್ಚುವ ಕಥೆಗಳ ಗುಚ್ಛವಾಗಿ ಹೊಮ್ಮಿರುವ ದಾದಾಪೀರ್ ಜೈಮನ್ ಅವರ ಚೂರು ಬಿಂಬ ಕೃತಿಯು ಪ್ರೀತಿ, ಸ್ನೇಹ, ಲೈಂಗಿಕತೆ ಮತ್ತು ಲಿಂಗತ್ವದ ತಿರುಳನ್ನು ಅದರ ಎಲ್ಲಾ ಕ್ರೌರ್ಯ ಮತ್ತು ಮೃದುತ್ವದೊಂದಿಗೆ ತೆರೆದಿಟ್ಟಿದೆ. ಪತ್ರಗಳೇ ಹೇಳುವ ಕಥೆಗಳಿಂದ ಹಿಡಿದು, ಸ್ಥಳಾಂತರವು ತಂದೊಡ್ಡುವ ಸ್ಥಿತ್ಯಂತರಗಳವರೆಗೆ, ಚೂರು ಬಿಂಬ ಎಂಬುದು ಯುವಜನರ ಮತ್ತು ಬದುಕುಳಿಯುವಿಕೆಯ ಸಂಕೀರ್ಣತೆಗಳನ್ನು ಸಂವೇದನಾಶೀಲ ಕಣ್ಣಿನಿಂದ ಮತ್ತು ಕೇಂದ್ರೀಕೃತ ಮಸೂರದಿಂದ ಅನ್ವೇಷಿಸುವ ಸಂಕಲನವಾಗಿದೆ.\u003c\/p\u003e\n\u003cp\u003e-ಡಾ. ಇಂದಿರಾ ಚಂದ್ರಶೇಖರ್\u003cbr\u003eಕಥೆಗಳಿಗೆಂದೇ ಮೀಸಲಾಗಿರುವ ಔಟ್ ಆಫ್ ಪ್ರಿಂಟ್ ನಿಯತಕಾಲಿಕೆಯ ಸ್ಥಾಪಕಿ ಮತ್ತು ಸಂಪಾದಕಿ \u003c\/p\u003e","brand":"Dadapeer Jyman","offers":[{"title":"Default Title","offer_id":47175866679555,"sku":"HB00005406","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ChooruBimba.jpg?v=1757334606"}],"url":"https:\/\/harivubooks.com\/collections\/dadapeer-jyman-harivu-kannada-books.oembed","provider":"Harivu Books","version":"1.0","type":"link"}