{"title":"Chanda Books Articles","description":"","products":[{"product_id":"purva-pashchima","title":"ಪೂರ್ವ ಪಶ್ಚಿಮ","description":"\u003cp\u003eಮನುಷ್ಯತ್ವದ ಘನತೆಯ ಆರ್ತ ಹುಡುಕಾಟದಲ್ಲಿ, ಈ ಬರಹ ಮುಖ್ಯವಾಗುವುದು. ಈ ಬರಹಗಳಲ್ಲಿ ಲೇಖಕನು, ತಾನು ಪಡೆದ ಅನುಭವವನ್ನು, ಭಾಷೆ ಮತ್ತು ಲಯದ ಮೂಲಕ ಇನ್ನೊಬ್ಬರಿಗೆ ದಾಟಿಸಲು ಹೋರಾಡುತ್ತಿದ್ದಾನೆ. ಅನುಭವದ ಸೂಕ್ಷ್ಮಗಳನ್ನು ಹಿಡಿಯಲು, ಚಿಂತನೆಯ ಕವಲುಗಳನ್ನು ಹಿಡಿಯಲು ಸೂಕ್ಷ್ಮ ಸಂವೇದನೆಯ ಲೇಖಕ ತಹತಹಿಸತೊಡಗುತ್ತಾನೆ. ಎಂ.ಆರ್‌. ದತ್ತಾತ್ರಿ ಅವರ ಗದ್ಯದಲ್ಲಿ, ಆಕರ್ಷಕವಾದ ಲಯದ ಮುರಿವುಗಳು, ಭಾವುಕವಾಗದ, ಆದರೆ ಭಾವಗುಣ ಬಿಟ್ಟುಕೊಡದ ಭಾಷಾಶೈಲಿ, ಅಲ್ಲಲ್ಲಿ ಅನಾಯಾಸವಾಗಿ ದಕ್ಕುವ ಕಾವ್ಯದ ಜಿಗಿತಗಳು, ನವಿರಾದ ಹಾಸ್ಯ ಭಾವದಷ್ಟೇ ಬುದ್ಧಿ ಪ್ರಕಾಶಕ್ಕೂ ಎಡೆಗೊಡುವ ತೂಕದ ಅರ್ಥಗುಂಪಿದೆ. ಇದಕ್ಕಿಂತ ಇನ್ನೇನು ಬೇಕು?\u003c\/p\u003e","brand":"M. R. Dattatri","offers":[{"title":"Default Title","offer_id":42020606869763,"sku":"HB00001839","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_9cad23c7-764e-4747-8f6a-50db8721c86f.jpg?v=1636356271"},{"product_id":"nammamma-andre-nangishta","title":"ನಮ್ಮಮ್ಮ ಅಂದ್ರೆ ನಂಗಿಷ್ಟ","description":"\u003cp\u003e\u003cspan\u003eತಾಯಿ ಮತ್ತು ಮಗನ ನಡುವಿನ ಸೂಕ್ಷ್ಮ ಒಡನಾಟದ ಹೃದ್ಯ ಬರಹಗಳು. ಈ ಪುಸ್ತಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಬಂದಿದೆ.\u003c\/span\u003e\u003c\/p\u003e","brand":"Vasudhendra","offers":[{"title":"Default Title","offer_id":42020607197443,"sku":"HB00001834","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_59cd740f-470d-4f67-a52a-4d31aa478b93.jpg?v=1636356279"},{"product_id":"misal-bhaaji","title":"ಮಿಸಳ್ ಭಾಜಿ","description":"\u003cp\u003eಈ ಪುಸ್ತಕವಂತು ಒಳ್ಳೆ ಪ್ರಬಂಧಗಳ ಗುಚ್ಛವಾಗಿದೆ. ಗರಿಬಿಚ್ಚಿದ ನವಿಲಿನಂತ ಸಂತೋಷದಿಂದ ತಮ್ಮ ಬದುಕಿನ ಹಲವು ನಗೆಯ ಸಂಗತಿಗಳನ್ನು ಹೇಳಿಕೊಂಡಿದ್ದಾರೆ ಲೇಖಕರು. ಹಾಗಂತ ಹಾಸ್ಯದ ರಭಸದಲ್ಲಿ, ಬದುಕಿನ ಗಂಭೀರತೆ ಇಲ್ಲಿ ಲೇವಡಿಗೊಳಗಾಗಿಲ್ಲ. ಉಡಾಫೆಯಲ್ಲೂ ನಲುಗಿಲ್ಲ. ಸಾವಿನ ಆತಂಕ, ಬಡತನದ ಕಾರ್ಪಣ್ಯ, ಗಂಡನ ಮನೆಯ ಹೊಸತನಕ್ಕೆ ಹೊಂದಿಕೊಳ್ಳುವ ಸಂಕಷ್ಟ, ವಾಸ್ತುಶಾಸ್ತ್ರದ ಡೋಂಗಿಯಂತಹ ಗಂಭೀರ ಸಂಗತಿಗಳು ಕೂಡ ಇಲ್ಲಿ ಸಕ್ಕರೆ ಲೇಪಿತ ಹೋಮಿಯೋಪತಿ ಮಾತ್ರೆಗಳಂತೆ ನಮಗೆ ದಕ್ಕುತ್ತವೆ.\u003c\/p\u003e\n\u003cp\u003eತಮ್ಮನ್ನೇ ಗೇಲಿ ಮಾಡಿಕೊಂಡು ನಗಬಲ್ಲವರಿಗೆ, ಇನ್ನೊಬ್ಬರ ಪರಿಸ್ಥಿತಿಯನ್ನು ಕಂಡು ತಮಾಷೆ ಮಾಡುವ ಅಧಿಕಾರ ಸಹಜವಾಗಿಯೇ ದಕ್ಕುತ್ತದೆ. ಹಾಗಂತ ಲೇಖಕರ ತಮಾಷೆ ಮತ್ತೊಬ್ಬರ ಮನಸ್ಸನ್ನು ನೋಯಿಸುವಂತಹದ್ದೂ ಅಲ್ಲ.\u003c\/p\u003e\n\u003cp\u003eಬದುಕನ್ನು ವಿಪರೀತ ಗಂಭೀರ ಮಾಡಿಕೊಂಡು ತಲೆ ಕೆಡಿಸಿಕೊಂಡು ಕೂತಾಗ, ಇಂತಹ ಬರಹಗಳು ನಮ್ಮನ್ನು ಮತ್ತೆ ರೂಢಿಯ ಲಯಕ್ಕೆ ಹಚ್ಚುವುದಕ್ಕೆ ನೆರವಾಗುತ್ತವೆ. ಸದ್ಯದ ಕನ್ನಡ ಸಾಹಿತ್ಯಲೋಕದ ಪರಿಸ್ಥಿತಿಗಂತೂ, ಈ ಪುಸ್ತಕ ಸಂಜೀವಿನಿ. ಎಲ್ಲರೂ ಸೇರಿ ಒಂಚೂರು ನಗುವುದು ಈ ಹೊತ್ತಿನ ಅವಶ್ಯಕತೆ.\u003c\/p\u003e","brand":"B. V. Bharathi","offers":[{"title":"Default Title","offer_id":42020607525123,"sku":"HB00001830","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_7b817023-315f-4131-ac3e-fe47099ae4bb.jpg?v=1636356286"},{"product_id":"appana-rallies-cycle","title":"ಅಪ್ಪನ ರ್‍ಯಾಲೀಸ್‌ ಸೈಕಲ್","description":"","brand":"Darshan Jayanna","offers":[{"title":"Default Title","offer_id":43550890557699,"sku":"HB00003726","price":55.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_0dc54dcc-d0f7-424b-b002-d2790ebc8de8.jpg?v=1669461462"},{"product_id":"rakshaka-anaatha-collection-of-essays-vasudhendra-kannada-book","title":"ರಕ್ಷಕ ಅನಾಥ","description":"\u003cp\u003eಇನ್ನೂರಕ್ಕೂ ಹೆಚ್ಚು ಪಟಗಳನ್ನು ಮನೆ ಕೊಂಡವರು ನನಗೆ ತಂದು ಕೊಟ್ಟರು. ಒಂದೊಂದೇ ಪಟವನ್ನು ನೋಡಿದಾಗಲೂ ನುಗ್ಗಿ ಬರುವ ನೆನಪುಗಳು. ಆದರೆ ಅವುಗಳನ್ನು ರಕ್ಷಿಸುವದಾದರೂ ಹೇಗೆ? ನಮ್ಮ ಬದುಕನ್ನು ಅಪ್ಪಣೆ ಕೊಟ್ಟು ನಡೆಸಿದ ಈ ದೇವಾನುದೇವತೆಗಳು, ಹಿರಿಯರು ನನ್ನ ಕಡೆ ಅಸಹಾಯಕ ದೃಷ್ಟಿಯಿಂದ \"ಹೇಗಾದರೂ ಕಾಪಾಡು\" ಎಂದು ಬೇಡಿಕೊಳ್ಳಲಾರಂಭಿಸಿದರು. ಉಗ್ರನರಸಿಂಹನ ಉಗುರುಗಳು ಮೊಂಡಾಗಿದ್ದವು. ಲಕ್ಷ್ಮಿಯ ಕೈಯಿಂದ ಸುರಿಯುವ ಬಂಗಾರದ ನಾಣ್ಯಗಳು ಹೊಳವು ಕಳೆದುಕೊಂಡಿದ್ದವು. ಸತ್ಯನಾರಾಯಣನ ಅಕ್ಕಪಕ್ಕದ ಬಾಳೆ ಎಲೆಗಳು ಬಾಡಿದ್ದವು, ಸೂರ್ಯದೇವರಿಗೆ ಗ್ರಹಣ ಹಿಡಿದಿತ್ತು.\u003c\/p\u003e","brand":"Vasudhendra","offers":[{"title":"Default Title","offer_id":47049571107075,"sku":"HB00005328","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/RakshakaAnaatha.jpg?v=1753778408"},{"product_id":"vaidya-mattobba-collection-of-essays-guruprasad-kaginele-kannada-book","title":"ವೈದ್ಯ ಮತ್ತೊಬ್ಬ","description":"\u003cp\u003eಈ ಲೇಖನಗಳಲ್ಲಿ ವೈದ್ಯನೊಬ್ಬನು ತಾನು ಬದುಕುತ್ತಿರುವ ವ್ಯವಸ್ಥೆಯ ಗುಣದೋಷಗಳನ್ನು ಅಲ್ಲಿ ಉಂಟಾಗುವ ನೈತಿಕ ಬಿಕ್ಕಟ್ಟುಗಳನ್ನು, ನಿರ್ಮಮವಾಗಿ ಆದರೆ ಭಾವಸಹಿತವಾಗಿ ಮಂಡಿಸುತ್ತಾನೆ. ತಾತ್ವಿಕ ಸಂಗತಿಗಳನ್ನು ಮಾನುಷಿಕ ಅನುಭವಗಳ ಹಿನ್ನೆಲೆಯಲ್ಲಿ ಕಾಣಲು ಲೇಖಕರಿಗೆ ಸಾಧ್ಯವಾಗಿದೆ. ಪಾಶ್ಚಾತ್ಯ ವೈದ್ಯಕೀಯದಲ್ಲಿ ಇಂದು ನಿಜವಾಗಿರುವ ಸಂಗತಿಗಳು ನಾಳೆ ನಮಗೂ ನಿಜವಾಗುವುದರಿಂದ ಈ ಲೇಖನಗಳು ಬಹಳ ಪ್ರಸ್ತುತವಾಗುತ್ತವೆ. ಅವರ ಅನೇಕ ತಲ್ಲಣಗಳು ನಮಗೂ ನಿಜವೆನಿಸುತ್ತವೆ. ಕೊನೆಗೂ 'ವೈದ್ಯಕೀಯ'ವೆನ್ನುವ ಬೃಹತ್ ವ್ಯವಸ್ಥೆಯಲ್ಲಿ ವೈದ್ಯನು ಕೇವಲ ತಿರುಪುಮೊಳೆಯಾಗಿಬಿಡುವ (ಕಾಗ್ ಇನ್ ದ ವೀಲ್) ವಾಸ್ತವ ನಮ್ಮ ಕಣ್ಣಿಗೆ ಕಟ್ಟುತ್ತದೆ.\u003c\/p\u003e\n\u003cp\u003e-ಎಚ್. ಎಸ್. ರಾಘವೇಂದ್ರ ರಾವ್ \u003c\/p\u003e","brand":"Guruprasad Kaginele","offers":[{"title":"Default Title","offer_id":47076282925315,"sku":"HB00005355","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/VaidyaMattobba.jpg?v=1754651772"},{"product_id":"saavemba-lahari-collection-of-articles-guruprasad-kaginele-kannada-book","title":"ಸಾವೆಂಬ ಲಹರಿ","description":"\u003cp\u003eಪ್ರಸ್ತುತ ಪ್ರಬಂಧ ಸಂಕಲನದಲ್ಲಿ ರೋಗಿಗಳ ಜತೆಗಿನ ಒಡನಾಟದ ವಿಶಿಷ್ಟಾನುಭವಗಳು ಕಥನಗೊಂಡಿವೆ. ಇಲ್ಲಿರುವ ಬೇರೆಬೇರೆ ದೇಶದ ಮತ್ತು ಸಮಾಜದ ರೋಗಿಗಳ ಜತೆಗಿನ ಅನುಭವಗಳು ಸ್ವಾರಸ್ಯಕರವಾಗಿವೆ. ಮನುಷ್ಯ ಸ್ವಭಾವದ ವೈಚಿತ್ರ್ಯ-ವಿಕ್ಷಿಪ್ತತೆಗಳನ್ನು ತಾತ್ವಿಕ ಮತ್ತು ವಿನೋದ ದೃಷ್ಟಿಯಿಂದ ಅವಲೋಕಿಸುವ ಸೂಕ್ಷ್ಮಗುಣವೊಂದು ಕಾಗಿನೆಲೆಯವರಲ್ಲಿದೆ. ರೋಗಿಗಳ ಮತ್ತು ರೋಗಿಬಂಧುಗಳ ವರ್ತನೆಗಳ ಹಿಂದೆ ಕೇವಲ ದೇಹ ಮತ್ತು ಮನಸ್ಸುಗಳ ಮಾತ್ರವಲ್ಲ, ಅವರ ಸಮಾಜ, ಆಲೋಚನ ಕ್ರಮ, ಸಂಸ್ಕೃತಿ, ನಾಗರಿಕತೆಗಳೂ ಇರುತ್ತವೆ ಎಂಬ ಗ್ರಹಿಕೆ ಇಲ್ಲಿದೆ. ಇದಕ್ಕೆ ಕಾರಣ, ಲೇಖಕರು ಹಲವು ಜಾತಿಧರ್ಮಗಳುಳ್ಳ ಭಾರತದಲ್ಲಿ ಹುಟ್ಟಿ ಬೆಳೆದಿರುವುದು; ಹಲವಾರು ದೇಶ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಿಂದ ವಲಸೆ ಬಂದು ನೆಲೆಸಿರುವ ಸಮುದಾಯಗಳುಳ್ಳ ಅಮೆರಿಕೆಯಲ್ಲಿ ವೈದ್ಯರಾಗಿರುವುದು. ಎಂತಲೇ, ದೇಶಗಳನ್ನೂ ಮತ್ತು ಅಲ್ಲಿನ ಸಮಾಜಗಳನ್ನೂ ಏಕರೂಪಿಯಾಗಿ ಗ್ರಹಿಸುವ ಜನಪ್ರಿಯ ಗ್ರಹಿಕೆಯನ್ನು ಪ್ರಬಂಧಗಳು ಭಗ್ನಗೊಳಿಸುತ್ತವೆ. ಅಮೆರಿಕದ ಮೂಲಕ ಭಾರತವನ್ನೂ ಭಾರತದ ಮೂಲಕ ಅಮೆರಿಕವನ್ನೂ ಮುಖಾಮುಖಿಯಾಗಿಸಿ ನೋಡುವ ಚೌಕಟ್ಟೊಂದು ಇಲ್ಲಿದೆ. ಇದುವೇ ಪ್ರಬಂಧಗಳನ್ನು ಸಂಸ್ಕೃತಿ ಚಿಂತನೆಯನ್ನಾಗಿಸಿದೆ. ಜಾಗತಿಕ ಎನ್ನಬಹುದಾದ ಅನುಭವಲೋಕವನ್ನು ಹುಟ್ಟಿ ಬೆಳೆದ ಸ್ಥಳೀಯ ಸಮಾಜದ ಅನುಭವಗಳೊಂದಿಗೆ ಬೆರೆಸಿ ಮತ್ತು ತೂಗಿ ನೋಡುವ ಇಲ್ಲಿನ ನೋಟಕ್ರಮವು ಇದಕ್ಕೆ ಇಂಬಾಗಿದೆ.\u003c\/p\u003e\n\u003cp\u003e-ರಹಮತ್ ತರೀಕೆರೆ \u003c\/p\u003e","brand":"Guruprasad Kaginele","offers":[{"title":"Default Title","offer_id":47076326834435,"sku":"HB00005356","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SaavembaLahari.jpg?v=1754653499"},{"product_id":"emoji-bhashe-collection-of-essays-karki-krishnamurthy-kannada-book","title":"ಇಮೋಜಿ ಭಾಷೆ","description":"\u003cp\u003eಪ್ರಸ್ತುತ ಪ್ರಬಂಧ ಸಂಕಲನದಲ್ಲಿ ರೋಗಿಗಳ ಜತೆಗಿನ ಒಡನಾಟದ ವಿಶಿಷ್ಟಾನುಭವಗಳು ಕಥನಗೊಂಡಿವೆ. ಇಲ್ಲಿರುವ ಬೇರೆಬೇರೆ ದೇಶದ ಮತ್ತು ಸಮಾಜದ ರೋಗಿಗಳ ಜತೆಗಿನ ಅನುಭವಗಳು ಸ್ವಾರಸ್ಯಕರವಾಗಿವೆ. ಮನುಷ್ಯ ಸ್ವಭಾವದ ವೈಚಿತ್ರ್ಯ-ವಿಕ್ಷಿಪ್ತತೆಗಳನ್ನು ತಾತ್ವಿಕ ಮತ್ತು ವಿನೋದ ದೃಷ್ಟಿಯಿಂದ ಅವಲೋಕಿಸುವ ಸೂಕ್ಷ್ಮಗುಣವೊಂದು ಕಾಗಿನೆಲೆಯವರಲ್ಲಿದೆ. ರೋಗಿಗಳ ಮತ್ತು ರೋಗಿಬಂಧುಗಳ ವರ್ತನೆಗಳ ಹಿಂದೆ ಕೇವಲ ದೇಹ ಮತ್ತು ಮನಸ್ಸುಗಳ ಮಾತ್ರವಲ್ಲ, ಅವರ ಸಮಾಜ, ಆಲೋಚನ ಕ್ರಮ, ಸಂಸ್ಕೃತಿ, ನಾಗರಿಕತೆಗಳೂ ಇರುತ್ತವೆ ಎಂಬ ಗ್ರಹಿಕೆ ಇಲ್ಲಿದೆ. ಇದಕ್ಕೆ ಕಾರಣ, ಲೇಖಕರು ಹಲವು ಜಾತಿಧರ್ಮಗಳುಳ್ಳ ಭಾರತದಲ್ಲಿ ಹುಟ್ಟಿ ಬೆಳೆದಿರುವುದು; ಹಲವಾರು ದೇಶ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಿಂದ ವಲಸೆ ಬಂದು ನೆಲೆಸಿರುವ ಸಮುದಾಯಗಳುಳ್ಳ ಅಮೆರಿಕೆಯಲ್ಲಿ ವೈದ್ಯರಾಗಿರುವುದು. ಎಂತಲೇ, ದೇಶಗಳನ್ನೂ ಮತ್ತು ಅಲ್ಲಿನ ಸಮಾಜಗಳನ್ನೂ ಏಕರೂಪಿಯಾಗಿ ಗ್ರಹಿಸುವ ಜನಪ್ರಿಯ ಗ್ರಹಿಕೆಯನ್ನು ಪ್ರಬಂಧಗಳು ಭಗ್ನಗೊಳಿಸುತ್ತವೆ. ಅಮೆರಿಕದ ಮೂಲಕ ಭಾರತವನ್ನೂ ಭಾರತದ ಮೂಲಕ ಅಮೆರಿಕವನ್ನೂ ಮುಖಾಮುಖಿಯಾಗಿಸಿ ನೋಡುವ ಚೌಕಟ್ಟೊಂದು ಇಲ್ಲಿದೆ. ಇದುವೇ ಪ್ರಬಂಧಗಳನ್ನು ಸಂಸ್ಕೃತಿ ಚಿಂತನೆಯನ್ನಾಗಿಸಿದೆ. ಜಾಗತಿಕ ಎನ್ನಬಹುದಾದ ಅನುಭವಲೋಕವನ್ನು ಹುಟ್ಟಿ ಬೆಳೆದ ಸ್ಥಳೀಯ ಸಮಾಜದ ಅನುಭವಗಳೊಂದಿಗೆ ಬೆರೆಸಿ ಮತ್ತು ತೂಗಿ ನೋಡುವ ಇಲ್ಲಿನ ನೋಟಕ್ರಮವು ಇದಕ್ಕೆ ಇಂಬಾಗಿದೆ.\u003c\/p\u003e\n\u003cp\u003e-ರಹಮತ್ ತರೀಕೆರೆ \u003c\/p\u003e","brand":"Karki Krishnamurthy","offers":[{"title":"Default Title","offer_id":47076335747331,"sku":"HB00005357","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/EmojiBhashe.jpg?v=1754654565"},{"product_id":"kuttavalakki-collection-of-essays-prashantha-adur-kannada-book","title":"ಕುಟ್ಟವಲಕ್ಕಿ","description":"\u003cp\u003eಹಿಂಗ ಯಾಕ ಆಗೆದ ಅಂದರ ಎಲ್ಲಾರಿಗೂ ತಮ್ಮ ಅಳಿಯಾ ಕಂಪ್ಯೂಟರ್ ಇಂಜಿನಿಯರ್ ಬೇಕ್ರಿಪಾ, ಫಾರೆನ್ನಾಗ್ ಇರಬೇಕು, ಮುಂದ ಹೆಂಡತಿನ್ನೂ ಕರಕೊಂಡ್ ಹೋಗಬೇಕು. ಒಂದನೇ ಬಾಣಂತನಕ ಇವರೂ ಫಾರೆನ್ ಗೆ ಹೋಗೋರು. ಒಂದ ಕಾರು, ಬೆಂಗಳೂರ ಅಥವಾ ಪುಣೆ ಒಳಗ ಒಂದ ಅಪಾರ್ಟಮೆಂಟ್ ಅಂತೂ ಇದ್ದ ಇರತದ ಅಂತ ಇವರಿಗೆ ಖಾತ್ರಿ ಇವರ ಬೀಗತನ ಏನಿದ್ರು ನಾರಾಯಣಮೂರ್ತಿ, ಅಜಿಮ್ ಪ್ರೇಮಜಿ ಅಥವಾ ರತನ ಟಾಟಾ ಅಂಥಾವರ್ ಜೊತೀನ. ಇನ್ಫೋಸಿಸ್, ವಿಪ್ರೊ. ಟಿ.ಸಿ.ಎಸ್. ಇವೆಲ್ಲಾ ಗೋತ್ರಕ್ಕಿಂತಾ ಇಂಪಾರ್ಟೆಂಟ್ ಆಗೇದ. ಅದರಾಗ ಬ್ಯಾರೆ ಹುಡುಗಿನೂ ಏನರ ಜರ ಕರತಾ ಐ.ಟಿ. ಇಂಡಸ್ಟ್ರಿ ಒಳಗ ಇದ್ದರ ಮುಗದ ಹೋತ, ಆವಾಗ ಸ್ವ-ಗೋತ್ರನ ಬೇಕ (ಐ.ಟಿ. ಅನ್ನೊ ಗೋತ್ರ). ಇನ್ನೊಂದ ಸ್ವಲ್ಪ ದಿವಸ ತಡೀರಿ, ಬರಬರತ ಈ ಐ.ಟಿ ಕಂಪನಿ ಎಚ್.ಆರ್. ಡಿಪಾರ್ಟ್ಮೆಂಟ್ನವರು ವರ್ಷಕ್ಕೆ ಎರಡ-ಮೂರ ಸಲ ವದ್ದು-ವರರ ಸಮಾವೇಶ ಮಾಡತಾರ. 'ಇನ್ಫೋಸಿಸ್ ವಧು-ವರರ ಸಮಾವೇಶ' 'ವಿಪ್ರೊ ವಿವಾಹ ಕೇಂದ್ರ' ಅಂತೆಲ್ಲಾ ಹುಟ್ಟಲಿಲ್ಲಾ ಅಂದರ ಹೇಳಿ ನಂಗ, ಬ್ರಾಹ್ಮಣರಿಗೆ 'ರೆಡ್ಯೂಮ್' ಜೊತಿ 'ಕುಂಡ್ಲಿ' ಅಟ್ಯಾಚ ಮಾಡ್ರಿ ಅಂತ ಹೇಳ್ತಾರ. \u003c\/p\u003e","brand":"Prashantha Adur","offers":[{"title":"Default Title","offer_id":47076433264899,"sku":"HB00005358","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Kuttavalakki.jpg?v=1754656835"},{"product_id":"varnamaya-collection-of-articles-vasudhendra-kannada-book","title":"ವರ್ಣಮಯ","description":"\u003cp\u003eವರ್ಣಮಯ\u003c\/p\u003e\n\u003cp\u003eಬಹು ಆಸ್ತಿಕ ಮನೋಬಾವ ಹೊಂದಿರುವ ಗೌರಮ್ಮ ತನಗೆ ಏನೇ ಸಂಕಷ್ಟ ಎಂದರೂ ಯಾವುದೋ ದೇವರಿಗೆ ಹರಕೆ ಹೊತ್ತು ಬಿಡುತ್ತಾಳೆ. ಮಂತ್ರಾಲಯದ ರಾಘವೇಂದ್ರ, ಬಂಗಾರದ ಗುಡಿಯ ಲಕ್ಷ್ಮಿ, ಗುರುವಾಯೂರ ಕೃಷ್ಣ- ಯಾರಾದರೊಬ್ಬ ದೇವರು ಆಕೆಯ ಕಷ್ಟಕ್ಕೆ -ಸಹಾಯ ಮಾಡುತ್ತಾರೆ, ಒಂದಿಷ್ಟು ದಿನ \"ಆ ದೇವರು ಬಹಳ ಸತ್ಯ ಅಣ್ಣ\" ಎಂದು ಹೇಳುತ್ತಿರುತ್ತಾಳೆ. ಅನಂತರ ಬೇರೊಬ್ಬ ದೇವರಿಗೆ ಒಲಿಯುತ್ತಾಳೆ! ಒಮ್ಮೆಯಂತೂ ಸ್ವಾದಿಯ ವಾದಿರಾಜರ ಪೋಟೋ ಪೂಜೆ ಮಾಡಿದರೆ ಕಷ್ಟ ಪರಿಹಾರವಾಗುತ್ತದೆಂದು ಯಾರೋ ಆಕೆಗೆ ಹೇಳಿಬಿಟ್ಟಿದ್ದರು. ಈ ಯತಿಗಳ ಹೆಸರೇ ಆಕೆಗೆ ಗೊತ್ತಿಲ್ಲ ಉಚ್ಚರಿಸಲು ಪರಿಚಿತ ಹೆಸರೂ ಅಲ್ಲ \"ತಲೆ ಮೇಲೆ ಪುಟ್ಟಿ ಇಟ್ಟುಗೊಂಡು ಕುದುರೆಗೆ ಏನೋ ತಿನ್ನಿಸ್ತಾರೆ ನೋಡಣ್ಣಾ, ಆ ದೇವರ ಪೋಟೋ ಬೇಕಿತ್ತು\" ಅಂತ ನನಗೆ ವಿವರಿಸಿದ್ದಳು. ನಾನು ಗೂಗಲ್ಲಿನಲ್ಲಿ ಹುಡುಕಿ ವಾದಿರಾಜರ ಚಿತ್ರವನ್ನು ತೋರಿಸಿ \"ಇದಾ?\" ಎಂದು ಅಚ್ಚರಿಯಿಂದ ಕೇಳಿದ್ದೆ “ಹೌದು\" ಎಂದು ಮುಖವರಳಿಸಿದ್ದಳು. \"ಇದು ನಮ್ಮ ಜನರ ದೇವರು ನೀನು ಏನು ಮಾಡ್ತಿ ಗೌರಮ್ಮ?\" ಎಂದರೆ, \"ಯಾವ ಜನದ ದೇವರಾದ್ರೆ ಏನಣ್ಣ? ಒಳ್ಳೇದು ಮಾಡ್ತದೆ ಅಂದ್ರೆ ಆಯ್ತು, ಪೂಜೆ ಮಾಡಬಹುದು\" ಎಂದು ಸೊಗಸಾದ ಮಾತನ್ನು ಹೇಳಿದ್ದಳು.\u003c\/p\u003e","brand":"Vasudhendra","offers":[{"title":"Default Title","offer_id":47076621123843,"sku":"HB00005359","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Varnamaya.jpg?v=1754659879"},{"product_id":"kilimanjaro-travelogue-prashanth-beechi-kannada-book","title":"ಕಿಲಿಮಂಜಾರೋ","description":"\u003cp\u003e\"ಆಫ್ರಿಕಾದಲ್ಲಿ ಸಿಕ್ಕಾಪಟ್ಟೆ ಬಿಸಿಲಂತೆ, ಅದೇ ಕಾರಣಕ್ಕೆ ಅಲ್ಲಿಯ ಜನ ಕಪ್ಪಗಿರ್ತಾರೆ, ಆದಷ್ಟು ಬಿಳಿ ಕಲರ್ ಶರ್ಟ್ ತಗೊಂಡು ಹೋಗು\" ಅಂತ ಹೇಳಿದವರು ಒಂದು ಕಡೆ. \"ಆಫ್ರಿಕಾದಲ್ಲಿ ಸಖತ್ ಚಳಿ ಅಂತೆ. ಅಲ್ಲಿ ಸೂರ್ಯ ಕಾಣೋದೆ ಅಪರೂಪ ಅಂತೆ. ಅದಕ್ಕೆ ಸ್ವೆಟರು ಮತ್ತು ಉಣ್ಣೆ ಬಟ್ಟೆ ಇಡ್ಕೊಳ್ಳೋದು ಮರಿಬ್ಯಾಡ\" ಎಂದು ಎಚ್ಚರಿಸಿದವರು ಮತ್ತೊಂದು ಕಡೆ. ಹೀಗೆ ತದ್ವಿರುದ್ಧ ಉಪದೇಶಗಳ ಸುರಿಮಳೆ ನನ್ನ ಮೇಲಾಗಿತ್ತು. ಈ ತರಹದ ಮಾತು-ಕತೆ ಕೇವಲ ಚಳಿ-ಬಿಸಿಲಿಗಷ್ಟೆ ಅಲ್ಲ, ಹತ್ತು ಹಲವಾರು ವಿಷಯಗಳ ಮೇಲೆ ನಡೆದಿತ್ತು. ಇದೆಲ್ಲ ಸುಳ್ಳು ಎಂದು ಹೇಳದಿದ್ದರೂ ನಿಜವಂತೂ ಅಲ್ಲ ಎಂದು ನಾನು ತಾನ್ಜಾನಿಯಾಗೆ ಬಂದ ಮೇಲೆ ಗೊತ್ತಾಗಿದ್ದು, ಸೂರ್ಯ ಕಾಣದಿರುವ, ಬಿಸಿಲು ಬೀಳದಿರುವ ಕೆಲವು ಪ್ರದೇಶಗಳು ಇನ್ನೂ ಆಫ್ರಿಕಾದಲ್ಲಿ ಇವೆ. ಆದರೆ ಅವು ಕ್ಷೀಣಿಸುತ್ತಿವೆ. ಪೂರ್ತಿ ಆಫ್ರಿಕಾದ ಬಗ್ಗೆ ತಿಳಿಸಲು ಆಗದ ಕಾರಣ, ನಾ ಕಂಡ ತಾನ್ಜಾನಿಯಾದ ಬಗ್ಗೆ ತಿಳಿಸುತ್ತೇನೆ.\u003c\/p\u003e","brand":"Prashanth Beechi","offers":[{"title":"Default Title","offer_id":47078062063875,"sku":"HB00005367","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Kilimanjaro.jpg?v=1754723955"}],"url":"https:\/\/harivubooks.com\/collections\/chanda-books-articles.oembed","provider":"Harivu Books","version":"1.0","type":"link"}