{"title":"Bhavana Prakashana","description":"","products":[{"product_id":"sarpa-sambandha-thriller-novel-ravi-belagere-kannada-book","title":"ಸರ್ಪ ಸಂಬಂಧ","description":"\u003cp\u003eಹಾವುಗಳು ! ಅಬ್ಬಾ ಅವೆಂದರೆ ಯಾರಿಗಿರುವುದಿಲ್ಲ ಹೆದರಿಕೆ‌ ! ಮೂಳೆಯಿಲ್ಲದ ಪ್ರಾಣಿ ಹರಿದಾಡುವುದನ್ನು ನೋಡಿದರೆ ಹೆದರಿ ಅಂಜಿ ನೀರಾಗಿರುತ್ತೇವೆ. ಅಂಥಹ ಸರ್ಪದ ಮೇಲೆ ಚ್ಯುತಿ ಬರದಂತೆ ಇಂಚಿಂಚು ಸಾರಾ ಸಗಟಾಗಿ ವಿವರಿಸಿ, ಪುಸ್ತಕದ ಪುಟ ಪುಟದಲ್ಲು ಒಂದು ತಿರುವು ಕೊಟ್ಟು, ಪುಟ ತಿರುಗಿಸುವಂತೆ ಮಾಡಿದ ಬೆಳೆಗೆರೆ ಅವರ ಆಲೋಚನಾ ಶಕ್ತಿ, ಲೇಖಕನ ಆಂತರ್ಯದಲ್ಲಡಗಿರುವ ಕಲ್ಪನಾ ಲೋಕದ ಸಾಮರ್ಥ್ಯವನ್ನು ಕಣ್ಣೆದುರಿಗಿರಿಸುತ್ತದೆ. ಅಗ್ನಿನಾಥನಂತಹ ಅಘೋರಿ ಸಾಧಕನೊಬ್ಬನು ಮಾಡಿದ ಸಾಹಸ , ಅವನ ಸಿಧ್ಧಿಗಳು, ಅಘೋರಿಗಳ ಜೀವನ ಇವೆಲ್ಲವನ್ನು ಅಣು ಅಣುವಾಗಿ ಬಿಚ್ಚಿಟ್ಟಿದ್ದಾರೆ.\u003cbr\u003e\u003c\/p\u003e","brand":"Ravi Belagere","offers":[{"title":"Default Title","offer_id":42020643438851,"sku":"HB00001372","price":400.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4109.jpg?v=1636357107"},{"product_id":"matagati-thriller-novel-ravi-belagere-kannada-book","title":"ಮಾಟಗಾತಿ","description":"\u003cp\u003eಮಂತ್ರ ತಂತ್ರಗಳ ಲೋಕವು ಅತ್ಯಂತ ನಿಗೂಢ, ಭಯವನ್ನು ಹುಟ್ಟಿಸುವಂತಹ ,ನಮಗೆ ಅಪರಿಚಿತವಾದ ಒಂದು ವಿಭಿನ್ನ ಜಗತ್ತು. ಶಿಷ್ಟ ಮಾಂತ್ರಿಕರಿಂದ ಹಿಡಿದು ಅಘೋರರ ಬಗ್ಗೆ ಈ ಕೃತಿಯಲ್ಲಿ ನಮಗೆ ಗೊತ್ತಿಲ್ಲದ ಹಲವಾರು ಮಜಲುಗಳನ್ನು ಅತ್ಯಂತ ಸಫಲವಾಗಿ ಮೂಡಿಸಿದ್ದಾರೆ.\u003cbr\u003e\u003c\/p\u003e\n\u003cp\u003eರವಿಬೆಳಗೆರೆಯವರು ಈ ಕಾದಂಬರಿಯಲ್ಲಿ ತಮ್ಮ ಅತ್ಯಂತ ಸುಂದರ ಹಾಗೂ ಸುಲಲಿತವಾದ ಶೈಲಿಯಲ್ಲಿ ಮಂತ್ರ ಹಾಗೂ ತಂತ್ರ ಲೋಕದ ಹಾದಿಗಳಲ್ಲಿ ಸುತ್ತಾಡಿಸುತ್ತಾರೆ. ವಜ್ರೋಲಿ, ವಿಶೂಚಿ, ಪ್ರಹರಿ, ಖೇಚರಿ, ವರ್ಣ ವಿದ್ಯಾ ಪ್ರಯೋಗ, ಕರ್ಣ ಪಿಶಾಚಿ ಮತ್ತು ಅಘೋರ ಲೋಕದ ವಿವಿಧ ಸಾಧನೆಗಳ ಬಗ್ಗೆ ತುಂಬಾ ಮಾಹಿತಿಯನ್ನು ನೀಡುತ್ತಾರೆ. ಕಾದಂಬರಿಯೂ ನಮ್ಮ ಮುಂದೆ ಕಣ್ಣಿಗೆ ಕಟ್ಟಿದಂತೆ ನಡೆಯುವಂತೆ ಕಾಣುತ್ತದೆ.\u003c\/p\u003e\n\u003cp\u003eಯಾವುದೇ ವಿದ್ಯೆಯನ್ನು ಒಳಿತಿಗಾಗಿಯೂ ಕೆಡುಕಿಗಾಗಿಯೂ ಬಳಸಬಹುದು. ಅದನ್ನು ಹೇಗೆ ಬಳಸಬೇಕು ಎನ್ನುವುದು ಅವರವರ ಭಾವಕ್ಕೆ ಬಿಟ್ಟದ್ದು. ವಿಜ್ಞಾನ ವಿವರಿಸಲಾಗದ, ವಿಶಿಷ್ಟವಾದ, ಅಸಾಧ್ಯವೆನ್ನುವ ಸಾಧನೆಗಳ ಬಗ್ಗೆ ಇಲ್ಲಿ ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ನಿಜಕ್ಕೂ ಇಂಥದೊಂದು ಜಗತ್ತು ಉಂಟೆ ಎನ್ನುವ ಆಶ್ಚರ್ಯ ನಮ್ಮನ್ನು ಕಾಡುತ್ತದೆ. ಇದು ಸತ್ಯವೇ? ಹೀಗೂ ಉಂಟೇ ?\u003c\/p\u003e\n\u003cp\u003eಮಾಟ ಮಂತ್ರ ದ ಬಗ್ಗೆ ಆಸಕ್ತಿ ಇರುವವರು ಖಂಡಿತಾ ಓದಬೇಕಾದ ಕೃತಿ.\u003c\/p\u003e","brand":"Ravi Belagere","offers":[{"title":"Default Title","offer_id":42020643504387,"sku":"HB00001371","price":375.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4013.jpg?v=1636357109"},{"product_id":"himagni-thriller-novel-ravi-belagere-kannada-book","title":"ಹಿಮಾಗ್ನಿ","description":"\u003cp\u003e\u003cb data-path-to-node=\"4\" data-index-in-node=\"0\"\u003e'ಹಿಮಾಗ್ನಿ'\u003c\/b\u003e ಎಂದರೆ 'ಮಂಜಿನೊಳಗಿನ ಕೆಂಡ' ಎಂದರ್ಥ. ಈ ಶೀರ್ಷಿಕೆಯೇ ಸೂಚಿಸುವಂತೆ, ಮೇಲ್ನೋಟಕ್ಕೆ ಶಾಂತವಾಗಿ ಕಾಣುವ ಸಮಾಜದ ಅಡಿಯಲ್ಲಿ ಹೊಗೆಯಾಡುತ್ತಿರುವ ಅಪರಾಧ ಜಗತ್ತಿನ ಕಥೆಯನ್ನು ಇದು ತೆರೆದಿಡುತ್ತದೆ. ಇದು ಕೇವಲ ಕಲ್ಪಿತ ಕಥೆಯಲ್ಲ, ಬದಲಿಗೆ ಬೆಂಗಳೂರಿನ ಭೂಗತ ಲೋಕದ ನೈಜ ಘಟನೆಗಳಿಂದ ಪ್ರೇರಿತವಾದ ಕಾದಂಬರಿ ಎಂದು ಹೇಳಲಾಗುತ್ತದೆ.\u003c\/p\u003e","brand":"Ravi Belagere","offers":[{"title":"Default Title","offer_id":42020643569923,"sku":"HB00001370","price":500.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4151.jpg?v=1636357111"},{"product_id":"mandovi-novel-ravi-belagere-kannada-book","title":"ಮಾಂಡೋವಿ","description":"\u003cp\u003e\u003cb data-path-to-node=\"0\" data-index-in-node=\"0\"\u003eಮಾಂಡೋವಿ (Mandovi)\u003c\/b\u003e ರವಿ ಬೆಳಗೆರೆ ಅವರ ಲೇಖನಿಯಿಂದ ಮೂಡಿಬಂದ ಒಂದು ಅತ್ಯಂತ ರೋಚಕವಾದ ಪತ್ತೇದಾರಿ ಹಾಗೂ ಕ್ರೈಮ್ ಥ್ರಿಲ್ಲರ್ ಕಾದಂಬರಿ. ಇದು ಭಾವನಾ ಪ್ರಕಾಶನದ ಮೂಲಕ ಪ್ರಕಟಗೊಂಡಿದೆ.\u003c\/p\u003e\n\u003cp\u003eಈ ಕಾದಂಬರಿಯು ಗೋವಾದ ಸುಂದರ ಹಿನ್ನೆಲೆಯಲ್ಲಿ ನಡೆಯುತ್ತದೆ. ಗೋವಾದ ಪ್ರಸಿದ್ಧ ನದಿಯಾದ \u003cb data-path-to-node=\"4\" data-index-in-node=\"72\"\u003eಮಾಂಡೋವಿ\u003c\/b\u003eಯ ಹೆಸರನ್ನೇ ಈ ಪುಸ್ತಕಕ್ಕೆ ಇಡಲಾಗಿದೆ. ಕಥೆಯು ಕೇವಲ ಪ್ರವಾಸೋದ್ಯಮದ ಗೋವಾವನ್ನು ತೋರಿಸದೆ, ಅದರ ಅಡಿಯಲ್ಲಿ ಅಡಗಿರುವ ಕರಾಳ ಜಗತ್ತನ್ನು ಅನಾವರಣಗೊಳಿಸುತ್ತದೆ.\u003c\/p\u003e","brand":"Ravi Belagere","offers":[{"title":"Default Title","offer_id":42020643832067,"sku":"HB00001367","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4012.jpg?v=1636357115"},{"product_id":"himalayan-blunder-thriller-novel-rave-belagere-kannada-book","title":"ಹಿಮಾಲಯನ್ ಬ್ಲಂಡರ್","description":"\u003cp\u003eರವಿ ಬೆಳಗೆರೆ ಅವರು ಬರೆದ \u003cb data-path-to-node=\"0\" data-index-in-node=\"22\"\u003eಹಿಮಾಲಯನ್ ಬ್ಲಂಡರ್ (Himalayan Blunder)\u003c\/b\u003e ಪುಸ್ತಕವು ಭಾವನಾ ಪ್ರಕಾಶನದ ಮೂಲಕ ಹೊರಬಂದಿದೆ. ನೀವು ಇದನ್ನು \"ಥ್ರಿಲ್ಲರ್ ಕಾದಂಬರಿ\" ಎಂದು ಉಲ್ಲೇಖಿಸಿದ್ದರೂ, ವಾಸ್ತವವಾಗಿ ಇದು 1962ರ ಭಾರತ-ಚೀನಾ ಯುದ್ಧದ ಹಿನ್ನೆಲೆಯಲ್ಲಿ ಬರೆದ ಒಂದು ಅತ್ಯಂತ ರೋಚಕವಾದ \u003cb data-path-to-node=\"0\" data-index-in-node=\"229\"\u003eಯುದ್ಧ ವಿಶ್ಲೇಷಣೆ ಮತ್ತು ಐತಿಹಾಸಿಕ ಕೃತಿ\u003c\/b\u003e.\u003c\/p\u003e\n\u003cp\u003eಈ ಪುಸ್ತಕವು ಮೂಲತಃ ಬ್ರಿಗೇಡಿಯರ್ \u003cb data-path-to-node=\"4\" data-index-in-node=\"29\"\u003eಜೆ.ಪಿ. ದಳವಿ\u003c\/b\u003e ಅವರು ಇಂಗ್ಲಿಷ್ನಲ್ಲಿ ಬರೆದ \u003ci data-path-to-node=\"4\" data-index-in-node=\"66\"\u003e\"Himalayan Blunder\"\u003c\/i\u003e ಕೃತಿಯಿಂದ ಪ್ರೇರಿತವಾದುದು. ರವಿ ಬೆಳಗೆರೆ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ, ಯುದ್ಧದ ಆ ಕಹಿ ಸತ್ಯಗಳನ್ನು ಕನ್ನಡಿಗರಿಗೆ ತಲುಪಿಸಲು ಈ ಪುಸ್ತಕವನ್ನು ರೂಪಿಸಿದ್ದಾರೆ.\u003c\/p\u003e","brand":"Ravi Belagere","offers":[{"title":"Default Title","offer_id":42020643897603,"sku":"HB00001366","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4152.jpg?v=1636357117"},{"product_id":"heli-hogu-karana-novel-ravi-belagere-kannada-book","title":"ಹೇಳಿ ಹೋಗು ಕಾರಣ","description":"\u003cp\u003eಕೆಲವು ಲಕ್ಷ ಜನ ಹುಡುಗರು ತಮ್ಮನ್ನು ತಾವು ಈ ಕಾದಂಬರಿಯ ನಾಯಕ ಹಿಮವಂತನೊಂದಿಗೆ ಐಡೆಂಟಿಫೈ ಮಾಡಿಕೊಂಡರು. ಹಾಗೆಯೇ ಅನೇಕ ಹುಡುಗಿಯರು ತಮ್ಮೊಳಗಿನ ಕೊಂಚ ಪ್ರಾರ್ಥನಾ-ಕೊಂಚ ಊರ್ಮಿಳಾರ ವ್ಯಕ್ತಿತ್ವಗಳ ಮಧ್ಯೆ ಜೀಕುತ್ತ ಖುಷಿಪಟ್ಟರು. ನಾಚಿಕೊಂಡರು. ನನ್ನನ್ನು ಸಣ್ಣಗೆ ಗದರಿಕೊಂಡರು. ಪತ್ರಿಕೆಯಲ್ಲಿ ವಾರ ಧಾರವಾಹಿಯಾಗಿ ಪ್ರಕಟಗೊಂಡ ಈ ಕಾದಂಬರಿ, ಪ್ರಕಟವಾಗುತ್ತಿದ್ದಷ್ಟು ದಿನವೂ ಇದು ಮನೆಮನೆಯ ಚರ್ಚೆಯಾಗಿತ್ತು. ಎಲ್ಲೋ ರಸ್ತೆಯಲ್ಲಿ ಹೋಗುತ್ತಿದ್ದವನನ್ನು ನಿಲ್ಲಿಸಿ 'ದಯವಿಟ್ಟು ಹಿಮವಂತನಿಗೆ ಮೋಸ ಮಾಡಬೇಡಿ ಸಾರ್. ಅವನಿಗೆ ಪ್ರಾರ್ಥನಾ ಸಿಗೋ ಹಂಗೆ ಮಾಡಿ' ಅಂತ ಗೋಗರೆದ ಹುಡುಗರು ಎಷ್ಟು ಜನವೋ ?\u003c\/p\u003e\n\u003cp\u003eನಿಜಕ್ಕೂ ಪ್ರಾರ್ಥನಾಳಷ್ಟು ನಿರ್ದಯಿ ಹುಡುಗೀರಿದ್ದಾರಾ?' ಅಂತ ಕೇಳಿದ ಹುಡುಗಿಯರು ಎಷ್ಟು ಜನವೋ?\u003c\/p\u003e\n\u003cp\u003e'ಬೇಗ ಈ ಧಾರಾವಾಹಿಯನ್ನು ಪುಸ್ತಕವನ್ನಾಗಿ ಪ್ರಕಟಿಸಿ: ಕೈಕೊಟ್ಟು ಹೋದ ನನ್ನ ಹುಡುಗಿಗೆ ಇದನ್ನ ತಲುಪಿಸಬೇಕಿದೆ' ಅಂದವರೂ ಇದ್ದಾರೆ.\u003c\/p\u003e\n\u003cp\u003eಇದು ಪ್ರೇಮ ಪುಸ್ತಕವಾ ?\u003c\/p\u003e\n\u003cp\u003eನೊಂದ ಮನದ ನಿಡುಸುಯ್ಯುವಿಕೆಯಾ ?\u003c\/p\u003e\n\u003cp\u003e-ರವಿ ಬೆಳಗೆರೆ\u003c\/p\u003e","brand":"Ravi Belagere","offers":[{"title":"Default Title","offer_id":47725710704899,"sku":"HB00006226","price":355.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4162.jpg?v=1636357118"},{"product_id":"amma-sikkidlu-novel-ravi-belagere-kannada-book","title":"ಅಮ್ಮ ಸಿಕ್ಕಿದ್ಲು","description":"\u003cp\u003eಎಲ್ಲರಿಗೂ ಹಾಗಾಗುವುದಿಲ್ಲ. ಆಗಲೂ ಬಾರದು, ಆದರೆ ಕುಡಿತದಂತಹ ಅನಿಷ್ಟಚಟಗಳು ಒಮ್ಮೆ ಗಂಟು ಬಿದ್ದು ಬಿಟ್ಟರೆ ಹೂದೋಟದಂತಹ ಬದುಕನ್ನು ಒಂದು ಕಡೆಯಿಂದ ಹದಗೆಡಿಸಿ ಸರ್ವನಾಶ ಮಾಡಿಬಿಡುತ್ತವೆ. ಕುಡಿತವೆಂಬ ವ್ಯಸನಕ್ಕೆ ಬಹುದೊಡ್ಡ ಕಂದಾಯ ಕಟ್ಟಿ ಅದರ ತೆಕ್ಕೆಯಿಂದ ತಪ್ಪಿಸಿಕೊಂಡು ನನಗೇ ಅಚ್ಚರಿ ಯಾಗುವಂತದ ಗೆಲುವು, ಯಶಸ್ಸು, ಸಂತಸ ಕಂಡವನು ನಾನು. ಅದನ್ನೆಲ್ಲ ನೋಡಲಿಕ್ಕೆ ನನ್ನ ಅಮ್ಮ ಬದುಕಿಲ್ಲ ಎಂಬ ವೇದನೆ ನನ್ನನ್ನು ಸದಾ ಕಾಡುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಒಂದೇ ಒಂದು ಸಲ ಈಗ ಆಕೆ ಬಂದು, ಒಂದು ದಿನ ನನ್ನೊಂದಿಗೆ ಇದ್ದುಬಿಟ್ಟರೆ... ಅಂದುಕೊಳ್ಳುತ್ತೇನೆ. ಅದೆಲ್ಲ ಆಗುವ ಮಾತೆ?\u003cbr data-mce-fragment=\"1\"\u003e\u003cbr data-mce-fragment=\"1\"\u003eಬಿಡಿ, 2012 ನನ್ನ ಪಾಲಿಗೆ ಅತ್ಯಂತ ಚಟುವಟಿಕೆಯ ವರ್ಷ, ಒಂದಾದ ಮೇಲೊಂದು ಪುಸ್ತಕಗಳು, ಸಿ.ಡಿಗಳ ಬಿಡುಗಡೆ, ನಾಲ್ಕಾರು ದೇಶಗಳ ಸುತ್ತಾಟ, ವಿಪರೀತ ಓದು. ಒಂದು ಕನಸಿನಸಾಕಾರ ವೆಂಬಂತೆ ಬೆಂಗಳೂರಿನ ಗಾಂಧಿಬಜಾರ್ ನಲ್ಲಿ ಬಿ.ಬಿ.ಸಿ ಎಂಬ ಪುಸ್ತಕದ ಅ೦ಗಡಿಯ ಉದ್ಘಾಟನೆ ಇವೆಲ್ಲವುಗಳ ನಡುವೆಯೇ 'ಅಮ್ಮ ಸಿಕ್ಕಿದ್ದು ಎಂಬ\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕಿರು ಕಾದಂಬರಿಯನ್ನು ನಿಮ್ಮ ಕೈಯಲ್ಲಿರಿಸುತ್ತಿದ್ದೇನೆ. ಒಮ್ಮೆ ಓದಿ. ಒಂದು ದಿನ ಸುಮ್ಮನೆ ನಿಮ್ಮ ಅಮ್ಮನೊಂದಿಗಿರಿ. ನಾನೇಕೆ ಇದನ್ನು ಬರೆದೆ ಎಂಬುದು ನಿಮಗೆ ಅರ್ಥವಾಗುತ್ತದೆ.\u003c\/p\u003e\n\u003cp\u003e                                                                             -ರವಿ ಬೆಳಗೆರೆ\u003c\/p\u003e","brand":"Ravi Belagere","offers":[{"title":"Default Title","offer_id":42102878011651,"sku":"HB00000937","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at3.02.03PM.jpg?v=1637832901"},{"product_id":"samaadhana-articles-ravibelagere-kannada-book","title":"ಸಮಾಧಾನ - ಭಾಗ 1","description":"ಸಮಾಧಾನ!\u003cbr data-mce-fragment=\"1\"\u003e\u003cbr data-mce-fragment=\"1\"\u003eನುಡಿಯಲು ಸುಲಭ. ಆದರೆ ಅದು ಯಾರಿಗಿದೆ? 'ಓ ಮನಸೇ' ಪತ್ರಿಕೆಯಲ್ಲಿ 'ಸಮಾಧಾನ' ಅಂಕಣ ಆರಂಭದಿಂದಲೂ ಹಿಟ್, ನೌಕರಿ ಇಲ್ಲದ ಹುಡುಗರ ಆಳಲಿನಿಂದ ಹಿಡಿದು, ಪ್ರಿಯತಮನ ವಂಚನೆಗೆ ಒಳಗಾದ ಹುಡುಗಿಯರ ತನಕ ಎಲ್ಲರಿಗೂ 'ಸಮಾಧಾನ' ಹೇಳಿದವನು ನಾನು, ವಯಸ್ಸಾದ ಹೆಣ್ಣು ಮಕ್ಕಳು ತಮ್ಮದೇ ಮಕ್ಕಳ ವಂಚನೆಗೆ, ಅಸಡ್ಡೆಗೆ, ತಿರಸ್ಕಾರಕ್ಕೆ ಒಳಗಾದಾಗ ಅವರಿಗೆ ಸಿಕ್ಕ ಮಗ ನಾನು. ಇದು ನನ್ನ ಅಹಂಕಾರವಲ್ಲ. ಮತ್ತೊಬ್ಬರಿಗೆ 'ಸಮಾಧಾನ' ಹೇಳುವುದು ನನ್ನ ಪ್ರವೃತ್ತಿ. ಎಂದೋ ಸಿಕ್ಕ ಇಬ್ಬರು ಗೆಳೆಯರು ಆತ್ಮೀಯವಾಗಿ ಒಂದು ಚಿಕ್ಕ ಟೀ ಅಂಗಡಿಯಲ್ಲಿ ಕುಳಿತು ಮಾತನಾಡುತ್ತಾರಲ್ಲ? ಹಾಗೆ, ನಾನು ಯಾರೊಂದಿಗೆ ಬೇಕಾದರೂ ಮಾತಾಡಬಲ್ಲೆ. ಸಮಾಧಾನ ಹೇಳಬಲ್ಲೆ. ಕೌನ್ಸೆಲಿಂಗ್ ನನಗೆ ಹುತ್ತಾ ಬಂದ ವಿದ್ಯೆ ಇದು ಅಹಂಕಾರದ ಮಾತಲ್ಲ. ಸಮಸ್ಯೆ ಯಾರಿಗೂ ಬರಬಹುದು. ಈ ಬೆದರಿಕೆಗೆ ನಾನೂ ಒಳಪಟ್ಟಿದ್ದೇನೆ. ಅನೇಕ ಸಲ ಸಮಾಧಾನವನ್ನು ಮತ್ತೊಬ್ಬರಿಂದ ಪಡೆದಿದ್ದೇನೆ. ಅದೇನು ದೊಡ್ಡ ಮಾತಲ್ಲ. ಆ ಕ್ಷಣಕ್ಕೆ ನಮಗೆ ತೋಚದೆ ಇದ್ದುದು ಇನ್ನೊಬ್ಬರಿಗೆ ತೋಚುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e\"ನನ್ನ ದೊಡ್ಡ ಅಣ್ಣನಿಂದ ಹಿಡಿದು ಕೊನೇ ಅಣ್ಣನ ತನಕ ಒಬ್ಬರಾದ ಮೇಲೊಬ್ಬರು ಎಳೆದೊಯ್ದು ನನ್ನನ್ನ ರೇಪ್ ಮಾಡುತ್ತಾರೆ. ನಾನು ಏನು ಮಾಡಲಿ?' ಎಂದು ಬರೆಯುವ ನೊಂದ ಅಮಾಯಕ-ನಿಸ್ಸಹಾಯಕ ಮಗುವಿಗೆ ಏನು ಸಮಾಧಾನ ಹೇಳಲಿ? ಆದರೂ ಹೇಳಿದ್ದೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ರವಿ ಬೆಳಗೆರೆ","brand":"Ravi Belagere","offers":[{"title":"Default Title","offer_id":42103008493827,"sku":"HB00000936","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at3.37.02PM.jpg?v=1637835269"},{"product_id":"diana-novel-ravi-belagere-kannada-book","title":"ಡಯಾನಾ","description":"ನಮ್ಮನ್ನು ಯಾರೂ ಪ್ರೀತಿಸುವವರಿಲ್ಲ ಆಗ ನರಳುವುದೇನಿದ್ದರೂ ನನ್ನಂತಹ ಸಾಮಾನ್ಯರು ಅಂದುಕೊಂಡಿದ್ದೆ. ಆದರೆ ಇಂಗ್ಲೆಂಡಿನ ರಾಜಕುಮಾರಿ ಡಯಾವಾಗ ಮದುವೆಯಾಗಿ ಗ೦ಡನೊಂದಿಗೆ ಮೊದಲ ರಾತ್ರಿ ಕಳೆಯುತ್ತಿದ್ದಂತೆಯೇ ಅಂಥದೊಂದು ಅಸಾಧ ಪ್ರಜ್ಞೆ ಶುರುವಾಗಿ ಹೋಯಿತು. ಅವಳ ಗಂಡನಿಗೆ ಅವಳು ಬೇಕಾಗಿರಲಿಲ್ಲ. ಇಂಗ್ಲೆಂಡಿನ ಆರಮನ ಅವಳನ್ನು ಪಂಜರದಲ್ಲಿ ಇಡಬಯಸಿತು. ಪ್ರಿಯತಮರು ವಂಚಿಸಿದರು. ಕಡೆಗೆ ಉಂದ ಅನ್ನ ಕೂಡ ಹೊಟ್ಟೆಯಲ್ಲಿ ಉಳಿಯದಂಥ ಬ್ಯುಲಿಮಿಯಾ ರೋಗ, ಹಾಗೆ ಲೋಕ ತಿರಸ್ಕೃತಳಾದ ಡಯಾನಾ, ಸತ್ತದ್ದಾದರೂ ಎಣ್ಣೆ ಭಯಾನಕ ಅಪಘಾತದಲ್ಲಿ! ಅವಳ ಬದುಕಿನ ಕಥೆಯನ್ನು ಸಂಕ್ಷಿಪ್ತವಾಗಿ ಬರೆದಿಡುವ ಪ್ರಯತ್ನ ಮಾಡಿದ್ದೇನೆ. ಒಂದು ಸಿಟ್ಟಿಂಗ್‌ನಲ್ಲಿ ಓದಿ ಮುಗಿಸಬಹುದಾದ ಕೃತಿ, ಆಮೇಲೆ, ನೀವು ಒಬ್ಬರೇ ಇದ್ದಾಗಲೆಲ್ಲ ನಿಮ್ಮನ್ನಿದು ಕಾಡಿದರೆ ಜವಾಬ್ದಾರಿ ನನ್ನದಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ರವಿ ಬೆಳಗರ","brand":"Ravi Belagere","offers":[{"title":"Default Title","offer_id":48110317306115,"sku":"HB00007112","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at3.37.02PM_1.jpg?v=1637835852"},{"product_id":"reshme-rumaalu-thriller-novel-ravi-belager-kannada-book","title":"ರೇಷ್ಮೆ ರುಮಾಲು","description":"ಬ್ರಿಟಿಷ್ ಅಧಿಕಾರಿ ಫಿಲಿಪ್ ಮೆಡೋನ್ ಟೇಲರ್ ಹೀಗೊಂದು ಪುಸ್ತಕ ಬರೆಯುವ ತನಕ ಭಾರತ ದೇಶದಲ್ಲಿ ಥಗ್ ಸಂಪ್ರದಾಯ ಅಂತ ಒಂದಿದೆ ಎಂಬುದು ಹೊರ ಜಗತ್ತಿಗೆ ಗೊತ್ತೇ ಇರಲಿಲ್ಲ. ಅತ್ಯಂತ ಸಂಭಾವಿತ ಜೀವನ ಸಾಗಿಸುತ್ತಲೇ ವರ್ಷಕ್ಕೊಂದು ಬಾರಿ ತಂಡ ಕಟ್ಟಿಕೊಂಡು ಯಾತ್ರೆ ಹೊರಡುತ್ತಿದ್ದ ಥಗ್ಗರು ದಾರಿಯುದ್ದಕ್ಕೂ ನೂರಾರು ಕೊಲೆಗಳನ್ನು ಮಾಡಿ, ಶವಗಳ ಸುಳಿವೂ ಸಿಗದಂತೆ ಹೂತು ಹಾಕಿ ಹಿಂತಿರುಗಿ ಮತ್ತೆ ಸಭ್ಯತೆಯ ಪರದೆಯ ಹಿಂದೆ ಬದುಕುತ್ತಿದ್ದರು! ಅವರಲ್ಲಿ ಮಾತಾ ಭವಾನಿಯ ಭಕ್ತರಾದ ಹಿಂದೂಗಳೂ, ಅವರ ಪೈಕಿ ಬ್ರಾಹ್ಮಣರಿಂದ ಹಿಡಿದು ಅಸ್ಪೃಶ್ಯರ ತನಕ, ಅಲ್ಲಾಹುವಿನ ಭಕ್ತರಾದ ಸೈಯದ್-ಸುನ್ನಿ ಮುಸಲ್ಮಾನರೂ ಇರುತ್ತಿದ್ದರು. ದೆವರ ಹೆಸರಿನಲ್ಲೇ ಎಲ್ಲವೂ ನಡೆಯುತ್ತಿತ್ತು. ಅವರಿಗೆ ಪ್ರತ್ಯೇಕವಾದ ರಾಮಸಿ ಎಂಬ ಭಾಷೆಯೇ ಇರುತ್ತಿತ್ತು. ಅಂಥ ಥಗ್ಗರ ನಾಯಕ ಅಮೀರ್ ಅಲಿಯನ್ನು ಕೂಡಿಸಿಕೊಂಡು ಲೇಖಕ ಫಿಲಿಪ್ ಮೆಡೋಸ್ ಟೇಲರ್ ಹೇಳಿಸಿದ ಕಥೆಯೇ 'ರೇಷ್ಮೆ ರುಮಾಲು'. ಓದುವ ಥ್ರಿಲ್ಲು ನಿಮಗಿರಲಿ.\u003cbr\u003e\u003cbr\u003e-ರವಿ ಬೆಳಗೆರೆ","brand":"Ravi Belagere","offers":[{"title":"Default Title","offer_id":42103061577987,"sku":"HB00000934","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/reshmerumalukannadabook.jpg?v=1637836106"},{"product_id":"kalpana-vilasa-biography-ravi-belagere-kannada-book","title":"ಕಲ್ಪನಾ ವಿಲಾಸ","description":"'ಆಕೆ ಮಿನುಗುತ್ತಾರೆ' ಎಂದು ವೈಎನ್ಕೆ ತಮಾಷೆ ಮಾಡುತ್ತಿದ್ದರು. ಆದರೆ ಆ ಮಹಾಗೆ ಮಿನುಗುತಾರೆ ವಿಷ ಕುಡಿದು ಪ್ರಾಣ ಬಿಟ್ಟು ಬೆಳಗಾವಿಯ ಬಳಿಯ ಗೋಟೂರಿನ ಇನ್ಸ್‌ಪೆಕ್ಸನ್ ಬಂಗಲೆಯ ಮುಂದೆ ನಿಂತಾಗ ನನ್ನನ್ನು ಕಾಡಿದ್ದು ವಿಷಾದದೊಂದೇ ವಿಚಿತ್ರ ನೋಡಿ: ಕಲ್ಪನಾ ಅವರ ಪಾರ್ಥಿವವನ್ನು ತದ್ದುದೇ ಆದ ಬೆಂಗಳೂರಿನ ಬಳಿಯ ಗುಬ್ಬಲಾಳದ ಸ್ವಂತ ತೋಟದಲ್ಲಿ ಸಮಾಧಿ ಮಾಡಿಕೊಂಡವರು, ಕಲ್ಪನಾಗಿ ಕೆಲಕಾಲ ತುಂಬ ಹತ್ತಿರವಾಗಿದ್ದ ಬಿ.ಎಸ್. ವಿಶ್ವನಾಥ್ ಅವರು, ನನ್ನ ಮಗ ಅದೇ ಗುಬ್ಬಲಾಳದ 'ಕರಿಷ್ಠಾಹಿಲ್' ಎಂಬಲ್ಲಿ ಮನೆ ಕಟ್ಟಿಸುತ್ತಿದ್ದಾನೆ. ಅದನ್ನು ನೋಡಲೆಂದು ಇತ್ತೀಚೆಗ ಹೋಗುತ್ತಿದ್ದಾಗ ಬಿ.ಎಸ್.ವಿಶ್ವನಾಥ್ ಅವರ ತೋಟ, ತೋಟದೊಳಗಿನ ಕಲ್ಪನಾರ ಸಮಾಧಿ ಕಾಣಿಸಿತು. ಕಾಡಿದ್ದು ಮತ್ತದೇ ವಿಷಾದ.\u003cbr data-mce-fragment=\"1\"\u003e\u003cbr data-mce-fragment=\"1\"\u003eಆಕೆ ಮೇರು ನಟ. ತುಂಬ tasteful ಆದ ಹೆಣ್ಣು ಮಗಳು ಒಳ್ಳೆಯ ಗೃಹಿಣಿಯಾಗಬೇಕು ಎಂದು ಬಯಸಿದ ಭಾವುಕ ಜೀವಿ. ಆದರೆ ಬದುಕೆಲ್ಲ ಶರ ಪಂಜರದೇ' ಆಯಿತು, ಸಿಕ್ಕಗಂಡಸರಾರೂ ಹಿಡಿಯಲಿಲ್ಲ. ವಿಪರೀತ ಸಾಲ ಮಾಡಿ ಅದ್ಭುತ ಮನೆ ಕಟ್ಟಿದಳು. ಆಕೆಯ ತದ್ಗುನಿಗಾಗಿ ದುಡಿದದ್ದನ್ನೆಲ್ಲ ಸುರಿದಳು, ಕಡೆಗೆ ಸಾಲದ ಹೊರೆ ತಡೆಯದಾದಾಗ ಇತರ ಅನೇಕ ನಟಿಯರಂತೆ ಉತ್ತರ ಕರ್ನಾಟಕದ ನಾಟಕ ಕಂಪನಿಗಳಿಗೆ ದಿನಕ್ಕಿದ್ದು ಅಂತ ಸಂಭಾವನೆ ಮಾತನಾಡಿಕೊಂಡು ನಟಿಸಲು ಹೋಗತೊಡಗಿದಳು.\u003cbr data-mce-fragment=\"1\"\u003e\u003cbr data-mce-fragment=\"1\"\u003eಅಲ್ಲಿಂದ ಶುರುವಾಯಿತು ಕಲ್ಪನಾರ ಪತನ, ಆಕೆ ಭಾವುಕಳಾ? ಹುಚ್ಚು ಮನಸ್ಸಿನವಳಾ? ಜೀವನೋಹಿಯಾ? ಕಾಮುಕಳಾ? ವಂಚಕಿಯಾ? ವಂಚನೆಗೆ ಒಳಗಾದದಳಾ? ಆಕೆಯದು ಕೊಲೆಯಾ?\u003cbr data-mce-fragment=\"1\"\u003e\u003cbr data-mce-fragment=\"1\"\u003eಎಲ್ಲವುಗಳಿಗೂ ಉತ್ತರ ಇಲ್ಲಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e''ಈ ಹುಡುಗಿಯ ಮೀಸಲು ಮುರಿದದನೇ ನಾನು' ಎಂದು ಹಾಸ್ಯ ನಟ ನರಸಿಂಹರಾಜು ಕಲ್ಪನಾಳ ಪಾರ್ಥಿವ ಶರೀರದ ಮುಂದೆ ನಿಂತು ಹೇಳಿದ್ದನ್ನು ಕೇಳಿದರೆ ಚಿತ್ರರಂಗವೆಂಬ ಮಾಯಾನಗರಿಯ ವೈಚಿತ್ರ ನಿದುಗೆ ಅರ್ಥವಾಗುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ರವಿ ಬೆಳಗೆರೆ","brand":"Ravi Belagere","offers":[{"title":"Default Title","offer_id":42103080452355,"sku":"HB00000933","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at3.37.02PM_2.jpg?v=1637836423"},{"product_id":"aathma-ravi-thriller-novel-belagere-kannada-book","title":"ಆತ್ಮ","description":"\u003cp\u003eಶಾಲೆಗೆ ಹೋಗುವ ಕಾಲದಿಂದಲೂ ನಾನು ಪತ್ತೇದಾರಿ ಕಾದಂಬರಿಗಳಿಗೆ ಮನಸೋತಿದ್ದವನು. ಆವತ್ತಿನ ದಿನಗಳಲ್ಲಿ ಎನ್. ನರಸಿಂಹಯ್ಯ ಸೃಷ್ಟಿಸುತ್ತಿದ್ದ ಪುರುಷೋತ್ತಮ ಮತ್ತು ಅವನ ಸಾಹಸಗಳು ನನಗೆ ಇಂಟರೆಸ್ಟಿಂಗ್ ಅನ್ನಿಸುತ್ತಿದ್ದವು. ಮುಂದೆ ಮಾರ್ಕ್ಸ್‌ವಾದಿ ಸಾಹಿತ್ಯ ಓದಲು ಆರಂಭಿಸಿದಾಗ ಪುರುಷೋತ್ತಮ ಕಳೆದು ಹೋದ. ಬೆಂಗಳೂರಿನ ಪಾಳುಗಳಲ್ಲಿ ಅಲೆದು ಭೂಗತ ಜೀವಿಗಳನ್ನು ಹುಡುಕಿ ಮಾತನಾಡಿಸಿದಾಗ 'ಪಾಪಿಗಳ ಲೋಕ' ಸೃಷ್ಟಿಯಾಯಿತು. ಎಲ್ಲವೂ ಬೇರೆ ಬೇರೆ ಕೃತಿಗಳೇ. ನನ್ನಿಂದ 'ಮಾಟಗಾತಿ' ಹಾಗೂ 'ಸರ್ಪ ಸಂಬಂಧ'ದಂತಹ ಕೃತಿಗಳನ್ನು ಬರೆಯುವಾಗ ಯಾವ ಮನಸು ಕೈ ಹಿಡಿದು ಬರೆಯಿಸಿತೋ ಇವತ್ತಿಗೂ ನಾನು ಉತ್ತರಿಸಲಾರೆ. ಅ ಕೃತಿಗಳನು ಮುದುವರೆಯುವಾಗ, ಅವುಗಳ ಸೀಕ್ವೆಲ್ ಆಗಿ ಹೊರಬಂದದ್ದೇ 'ಆತ್ಮ'!\u003c\/p\u003e\n\u003cp\u003e-ರವಿ ಬೆಳಗೆರೆ    \u003c\/p\u003e","brand":"Ravi Belagere","offers":[{"title":"Default Title","offer_id":42103129768195,"sku":"HB00000930","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Athma.jpg?v=1637837089"},{"product_id":"amma-nannannu-yaake-konde-real-incident-ravi-belagere-kannada-book","title":"ಅಮ್ಮಾ ನನ್ನನ್ನು ಯಾಕೇ ಕೊಂದೆ?","description":"\u003cp\u003eಆಸ್ತಿಗಾಗಿ ಕೊಲೆಗಳಾಗುವುದು ಹೊಸದೇನಲ್ಲ. ಆದರೆ ಇಂದ್ರಾಣಿ ಎಂಬ ಮೂರು ಗಂಡಂದಿರ ಹೆಂಗಸು ಮಾಡಿದ ಕೊಲೆ ಇದೆಯಲ್ಲಾ? ಅದು ನಿಜಕ್ಕೂ ಘೋರ. ಆಕೆಯಲ್ಲಿ ಮನುಷ್ಯತ್ವದ ಲವಲೇಶವೂ ನಿಮಗೆ ಕಾಣಸಿಗುವುದಿಲ್ಲ. ಹೆತ್ತ ಮಗಳು ಆಸ್ತಿ ವಿಚಾರದಲ್ಲಿ ತಿರುಗಿ ಬಿದ್ದಾಳು ಎಂಬ ಒಂದೇ ಒಂದು ಕಾರಣಕ್ಕೆ ಆಕೆಯನ್ನು ಅತ್ಯಂತ ನಿರ್ದಯವಾಗಿ ಕೊಂದು ಸುಟ್ಟು ಹಾಕುವ ಈ ಹೆಂಗಸು ತನ್ನ ಮಗನನ್ನೂ ಕೊಲ್ಲಲು ಸಂಚು ರೂಪಿಸುತ್ತಾಳೆ. ಮೂರು ವರ್ಷಗಳ ಕಾಲ ಜಗತ್ತಿನ ಎದುರಿಗೆ ಮಗಳು ಬದುಕಿದ್ದಾಳೆ ಅಂತಲೇ ಬಿಂಬಿಸುತ್ತಾಳೆ. ಯಾವುದೇ ಕಾರಣಕ್ಕೂ ಯಾರಿಗೂ ಅನುಮಾನ ಬಾರದಂತೆ ಹೆಜ್ಜೆ ಹೆಜ್ಜೆಗೂ ಎಚ್ಚರ ವಹಿಸುತ್ತಾಳೆ. ಕಡೆಗೂ ಆಕೆಯ ಪಾಪದ ಕೊಡ ತುಂಬುತ್ತದೆ.\u003cbr data-mce-fragment=\"1\"\u003eಪಾತಕದ ಕಥೆ ಇಂಟರೆಸ್ಟಿಂಗ್ ಆಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ರವಿ ಬೆಳಗೆರೆ\u003c\/p\u003e","brand":"Ravi Belagere","offers":[{"title":"Default Title","offer_id":42103133798659,"sku":"HB00000929","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at3.37.02PM_4.jpg?v=1637837173"},{"product_id":"black-friday-real-incident-ravi-belagere-kannada-book","title":"ಬ್ಲ್ಯಾಕ್ ಫ್ರೈಡೇ","description":"ಭಾರತವೆಂಬ ಮಹಾದೈತ್ಯ, ಸಾತ್ವಿಕ ಶಕ್ತಿಯ ಕರಡಿಗೆ ಮೈಯೆಲ್ಲ ಗಾಯ, ಹಾಗೆ ಗಾಯ ಮಾಡಿಮಾಡಿ, ನೆತ್ತರು ಹರಿಸಿ ಹರಿಸಿಯೇ ಭಾರತವನ್ನು ನಿಶ್ಯಕ್ತಗೊಳಿಸುವುದು ಪಾಕಿಸ್ತಾನವೆಂಬ ಕ್ಷುದ್ರರಾಷ್ಟ್ರದ ಹುನ್ನಾರ, ಅಂಥದ್ದೊಂದು ಹುನ್ನಾರಕ್ಕೆ ಮುಂಬಯಿ ಎಂಬ ಮಹಾನಗರಿ ಬಲಿಯಾದದ್ದು 1993ರಲ್ಲಿ. ಆ ಸರಣಿ ಬಾಂಬ್ ಸ್ಫೋಟಗಳ ದುರಂತವನ್ನು ಈ ದೇಶ ಯಾವತ್ತಿಗೂ ಮರೆಯಲಾರದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಪಾಕಿಸ್ತಾನದ ಈ ಹುನ್ನಾರಕ್ಕೆ ಜೊತೆಯಾದವರು ಮುಂಬಯಿಯ ಅಂಡರ್‌ವರ್ಲ್ಡ್ ಮಂದಿ. ಅವರು ಬಾಂಬೆಯನ್ನು ಪ್ರೀತಿಸುತ್ತೇವೆ ಎಂದು ಹೇಳಿಕೊಂಡೇ ಆ ಮಹಾನಗರಕ್ಕೆ ಪದೇಪದೆ ಚೂರಿ ಹಾಕಿದವರು. ಅವರೊಂದಿಗೆ ಕೈ ಮಿಲಾಯಿಸಿದವರು ನಮ್ಮ ಸಿನೆಮಾ ನಟರು!\u003cbr data-mce-fragment=\"1\"\u003e\u003cbr data-mce-fragment=\"1\"\u003eದಾವೂದ್ ಇಬ್ರಾಹಿಂನಿಂದ ಹಿಡಿದು ಟೈಗರ್ ಮೆಮನ್ ತನಕ, ಛೋಟಾ ಶಕೀಲ್‌ನಿಂದ ಹಿಡಿದು ಸಂಜಯ್‌ದತ್ ತನಕ ಎಲ್ಲರ ಸ್ಪಷ್ಟ ಚಿತ್ರಣಗಳೂ ಇಲ್ಲಿದೆ. ಓದಲು ಕುಳಿತಾಗ ಪತ್ತೇದಾರಿ ಕಾದಂಬರಿಯಂತೆ, ಓದಿ ಮುಗಿಸಿದಾಗ ಇತಿಹಾಸದ ಒಂದು painful ಅಧ್ಯಾಯದಂತೆ ಭಾಸವಾಗುವ ಈ ಪುಸ್ತಕ, ಈ ವರ್ಷದ ಆಗಸ್ಟ್ 15ರ ಕಾಣಿಕೆ ನಿಮಗೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ರವಿ ಬೆಳಗೆರೆ","brand":"Translated by Ravi Belagere","offers":[{"title":"Default Title","offer_id":42103161454851,"sku":"HB00000928","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at3.37.02PM_5.jpg?v=1637837741"},{"product_id":"hanthaki-i-love-you-crime-thriller-ravi-belagere-kannada-book","title":"ಹಂತಕೀ ಐ ಲವ್ ಯೂ!","description":"\u003cp\u003eಸ್ವಲ್ಪ ಕಾಮವಿದೆ, ಕಾದಂಬರಿಯ ಪುಟಗಳಲ್ಲಿ: ಎಲ್ಲರ ಬದುಕಿನಲ್ಲಿದ್ದಂತೆಯೇ! ಒಂದು ಇಂಟಲಿಜೆಂಟ್ ತನಿಖೆಯಿದೆ, ಅಪರೂಪದ ಕ್ರೈಮ್ ಕಥೆಗಳಲ್ಲಿರುವಂತೆ. ಇನ್ಸ್‌ಪೆಕ್ಟರ್ ಪಾಲಿ ಇದ್ದಾನೆ ಎನ್‌ಕೌಂಟರುಗಳ ನೆತ್ತರಿನಲ್ಲಿ ಎರಡೂ ಕೈ ತೋಯಿಸಿಕೊಂಡು. ಅವನನ್ನು ಬೆನ್ನತ್ತಿದ ಕಾದಂಬರಿಗಾರ್ತಿಯಿದ್ದಾಳೆ, ಕಥೆ ಬರೆಯುತ್ತೇನೆಂದು! ಪಾಲಿಯನ್ನು ರಕ್ಷಿಸಲು ಹೆಣಗುವ ಹುಡುಗಿ, ಸೈಕಿಯಾಟ್ರಿಸ್ಟ್ ಜಿಯಾ. ಹೀಗೆ ಗಂಡು-ಹೆಣ್ಣು, ಪ್ರೇಮ-ಕಾಮ, ಕ್ರೈಮು-ಡಿಟೆಕ್ಷನ್ನುಗಳ ಪುಟ್ಟ ಸಂಭ್ರಮದ ಸಂತೆ ಈ ಕಾದಂಬರಿ. ಖುಷಿಗೆ ಓದಿ ಪಕ್ಕಕ್ಕಿಡಬಹುದಾದಂಥದ್ದು! \u003c\/p\u003e\n\u003cp\u003e- ರವಿ ಬೆಳಗೆರೆ \u003c\/p\u003e","brand":"Ravi Belagere","offers":[{"title":"Default Title","offer_id":42103173054723,"sku":"HB00000927","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/HantakiILoveYou.jpg?v=1637837958"},{"product_id":"nee-hinga-nodabyadananna-novel-ravi-belagere-kannada-book","title":"ನೀ ಹಿಂಗ ನೋಡಬ್ಯಾಡ ನನ್ನ","description":"ಈ ಕಾದಂಬರಿಯಲ್ಲಿ ಪಾತ್ರವಾಗಿ ನಾನಿದ್ದೀನಾ ? ನನ್ನೊಳಗಿನ ಶಿಶಿರಚಂದ್ರನಿದ್ದಾನಾ ? ಹಾಗಾದರೆ ಪ್ರಶಾಂತಿನಿ ? ಹಾಗಾದರೆ ಗೋಮತಿ ? ನಾನು ಕಂಡ ಎಷ್ಟೊಂದು ಜನರಲ್ಲಿ ಗಿರಿ ಅ೦ಕಲ್‌ಗಳೂ, ಶ್ರಾವಣಿಗಳೂ, ಚಿರಂತ್‌ಗಳೂ, ಶರ್ಮಿಳೆಯರೂ - ಎಲ್ಲ ಈ ಕಾದಂಬರಿಯ ಪುಟಗಳಲ್ಲಿ ಸಂತೆ ನೆರೆದಿದ್ದಾರೆ ಅನಿಸುತ್ತದೆ. ಒಂದು ಡಿಫರೆಂಟ್ ವೆರೈಟಿಯ ಥ್ರಿಲ್ಲರ್ ಬರೆಯಲು ಕೂತದ್ದು ನಿಜವಾದರೂ, ನನ್ನ ಕೈ ಪಳಗಿರುವುದು ಮಾನವ ಸಂಬಂಧಗಳ ಕುರಿತು\u003cbr data-mce-fragment=\"1\"\u003eಬರೆಯುವುದರಲ್ಲೇ ! ಮಾನವ ಸಂಬಂಧಗಳು ಯಾವತ್ತಿಗೂ ನನ್ನನ್ನು ಕುತೂಹಲಿಯನ್ನಾಗಿ ಮಾಡಿವೆ. ತುಂಬ ಪ್ಯಾಷನೇಟ್ ಆಗಿ ಅವುಗಳ ಬಗ್ಗೆ ಬರೆಯಲು ಪ್ರೇರೇಪಿಸಿದೆ. ಸದಾ ಪ್ರೀತಿಗಾಗಿ ತುಡಿಯುವ, ಅದಕ್ಕೋಸ್ಕರ ಎಲ್ಲವನ್ನೂ ಸಹಿಸಿಕೊಳ್ಳುವ, ಧಿಕ್ಕರಿಸುವ, ಕಾತರಿಸುವ, ತಪ್ಪಿಸಿಕೊಳ್ಳುವ, ಕಣ್ಣು ತೋಯಿಸಿಕೊಳ್ಳುವ, ಕನಸುವ ಮನುಷ್ಯನೊಬ್ಬ ನನ್ನಲ್ಲಿ ಇಲ್ಲದೆ ಹೋಗಿದ್ದಿದ್ದರೆ 'ನೀ ಹಿಂಗ ನೋಡಬ್ಯಾಡ ನನ್ನ ಕಾದಂಬರಿಯಲ್ಲಿ ಒಬ್ಬ ಶಿಶಿರಚಂದ್ರ ಹೇಗೆ\u003cbr data-mce-fragment=\"1\"\u003eಮೂಡಿ ನಿಲ್ಲುತ್ತಿದ್ದ ?\u003cbr data-mce-fragment=\"1\"\u003e'ಪ್ರೀತಿ ಸದಾ ನಮ್ಮನ್ನು ಆಳುವ ದೈವ.\u003cbr data-mce-fragment=\"1\"\u003eಅದಷ್ಟೇ ನನ್ನ ನಂಬಿಕೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ರವಿ ಬೆಳಗೆರೆ","brand":"Ravi Belagere","offers":[{"title":"Default Title","offer_id":42103194976515,"sku":"HB00000926","price":425.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/neehinganodabyadananna.jpg?v=1709036407"},{"product_id":"thegod-father-novel-ravi-belagere-bhavana-publications","title":"ದಿ ಗಾಡ್ ಫಾದರ್","description":"ರಾತ್ರಿ ಊಟ ಮುಗಿಸಿ ನಿಮ್ಮ ಕೋಣೆ ಸೇರಿಕೊಂಡು ಕಣ್ಣಿಗೆ ಹಿತವಾದುದೊಂದು ದೀಪ ಹಾಕಿಕೊಂಡು ಕುಳಿತು ಓದಲಿಕ್ಕೆ ಈ ಪುಸ್ತಕ ಕೈಗೆತ್ತಿಕೊಳ್ಳಿ. ಕಾದಂಬರಿಯ ಕೊನೆಯ ಪುಟ ಓದಿ ಮುಗಿಸುವ ತನಕ ನೀವು ಮಲಗಲಾರಿರಿ, 'ದಿ ಗಾಡ್ ಫಾದರ್' ಕಾದಂಬರಿಯ ಕಥಾವಸ್ತುವೇ ಅಂತಹುದು. ದೂರದಿಂದ ನಿಂತು ನೋಡಿದರೆ ಇದು ಭೂಗತದ ಆಗುಹೋಗುಗಳ ಕುರಿತಾದ ಕಾದಂಬರಿ ಅನ್ನಿಸುತ್ತದೆ. ಒಮ್ಮೆ ಒಳಹೊಕ್ಕು ನೋಡಿ: ಚಿನ್ನ ಮಾದಿರೆಡ್ಡಿಯ ಫ್ಯಾಮಿಲಿಯಲ್ಲಿ ನೀವೂ ಒಬ್ಬರಾಗಿಬಿಡುತ್ತೀರಿ, ಸಾವಿರಾರು ಕೂವಗಳಿರುವ ಭೂಗತದ ಹುತ್ತ ಈ ಕಾದಂಬರಿಯಲ್ಲಿ ಅನಾವರಣಗೊಳ್ಳುವ ವಿಧಾನವೇ ಅದ್ಭುತವಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಯಾವ ವಿಷಯ ಆರಿಸಿಕೊಂಡರೂ ರವಿ ಬೆಳಗರೆ ಚೆನ್ನಾಗಿ ಬರೆಯುತ್ತಾರೆ. ಆದಕ್ಕೆ ಅವರ ಪ್ರತಿ ಬರಹವೂ ಸಾಕ್ಷಿಯೇ. ಆದರೆ ಭೂಗತ ಲೋಕದ ಬಗ್ಗೆ ಬರೆಯಲು ಕುಳಿತಾಗಲೆಲ್ಲ ಅವರು ಬೇರೆಯದೇ ಆದ ಶ್ರದ್ಧೆಯಿಟ್ಟುಕೊಂಡು ಕೆಲಸ ಮಾಡುತ್ತಾರೆ. ಆ ಕೌಶಲ್ಯ 'ದಿ ಗಾಡ್ ಫಾದರ್' ಕೃತಿಯ ಪ್ರತಿ ಸಾಲಿನಲ್ಲೂ\u003cbr data-mce-fragment=\"1\"\u003e\u003cbr data-mce-fragment=\"1\"\u003e- ಎಂ.ಕೆ.ಸತ್ಯ ಶ್ರೀನಿವಾಸ್, ಮೈಸೂರು","brand":"Ravi Belagere","offers":[{"title":"Default Title","offer_id":42103213916419,"sku":"HB00000925","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at3.37.03PM_1.jpg?v=1637838807"},{"product_id":"samaadhaana-2-articles-ravi-belagere-kannada-book","title":"ಸಮಾಧಾನ - 2","description":"\u003cp\u003eನಮಸ್ಕಾರಗಳು.\u003cbr data-mce-fragment=\"1\"\u003e\u003cbr data-mce-fragment=\"1\"\u003e'ಸಮಾಧಾನ' ಅಂಕಣ ಪ್ರಕಟವಾದದ್ದು - 'ಓ ಮನಸೇ' ಪಾಕ್ಷಿಕದಲ್ಲಿ, ಆ ಪತ್ರಿಕೆಯೇ ಡಿಫರೆಂಟ್. ಕನ್ನಡದಲ್ಲಿ ಇನ್ನೊಂದು ಅಂಥ ಪತ್ರಿಕೆಯನ್ನು ನೀವು ಓದಲಾರಿರಿ. ಇವತ್ತಿಗೂ ಅದಕ್ಕೆ ಅಪಾರ ಬೇಡಿಕೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಿಗಿ ನಿಗಿ ಯೌವ್ವನದ ಹುಡುಗರು, ಆಗಷ್ಟೆ ನೆಲತಾಕಿದ ಪಾರಿಜಾತದಂಥ ಹುಡುಗಿಯರು, ತುಂಬು ಬಸುರಿಯರು, ನೊಂದ ತಾಯಂದಿರು, ಮುಪ್ಪಾನ ಮುದುಕರು-ಹೀಗೆ ಎಲ್ಲರಿಗೂ ಆ ಕ್ಷಣದ ಸಮಸ್ಯೆಗೆ ಅಥವಾ ಬಗೆ ಹರಿಯದ ದುಖಕ್ಕೆ ನಾನು ಹೇಳಿದ 'ಸಮಾಧಾನ' ಇದು ತುಂಬ ಶ್ರದ್ಧೆಯಿಂದ ನಾನು ನಿರ್ವಹಿಸಿದ ಅಂಕಣ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈಗ ನಿಮ್ಮ ಕೈಲಿರೋದು ಸಮಾಧಾನ ಭಾಗ 2. ಮೊದಲ ಭಾಗವನ್ನು ಮಾರುಕಟ್ಟೆ, ಕೆಲವೇ ದಿನಗಳಲ್ಲಿ ನುಂಗಿ ಮಾಯ ಮಾಡಿತು. ಒಬ್ಬ ಲೇಖಕನಿಗೆ ಚೆಂದದ, ನಿರುಪದ್ರವಿ ಅಹಂಕಾರ ಬರಲು ಇನ್ನೇನು ಬೇಕು? ಯಾರಿಗೋ ಉದ್ರಿ ಸಲಹೆ ಕೊಡೋಲ್ಲ ನಾನು ಅದನ್ನು ಯಾರು ಬೇಕಾದರೂ ಮಾಡಿಯಾರು. 'ಬೆಳದ ಮಗನನ್ನು ಅಮೆರಿಕಕ್ಕೆ ಕಳಿಸಲೋಗ್ಯ ಆಸ್ಟ್ರೇಲಿಯಾಕ್ಕೆ ಕಳಿಸಲೋ?\" ಅಂತ ಹಿರಿಯರೊಬ್ಬರು ಕೇಳಿದರೆ ಹಿಂದೆ ಮುಂದೆ ನೋಡದೆ ಆಸ್ಟ್ರೇಲಿಯಾಕ್ಕೆ ಕಳಿಸಿ ಅಂದು ಬಿಡೋದು ಅಪ್ಪಟ tupidity ನಮ್ಮ ದೇಶದಲ್ಲಿ ಸಲೀಸಾಗಿ, ಪ್ರಕಟೆ ಸಿಗೋ ಎರಡು ವಸ್ತುಗಳೆಂದರೆ ಸಲಹೆ ಮತ್ತು ಆಶೀರ್ವಾದ ಪಾಶ್ಚಾತ್ಯ ದೇಶಗಳಲ್ಲಿ ಕೌನ್ಸೆಲಿಂಗ್ ಎಂಬುದೊಂದು ಪ್ರತ್ಯೇಕವೆ ಆದ ವೃತ್ತಿ ಪ್ರತಿ ಸಮಸ್ಯೆಗೂ ಪ್ರತ್ಯೇಕ ಸ್ಪೆಷಲಿಸ್ಟ್ ಸಿಗುತ್ತಾನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಾನು ಸ್ಪೆಷಲಿಸ್ಟ್ ಅಲ್ಲ, ಆದರೆ ಉಳಿ ಪೆಟ್ಟು ತಿಂದೂ ತಿಂದು ಒಂದು ವಿಗ್ರಹವಾಗಿರುವ ಅರವತ್ತು ವರ್ಷದ young man! ಆ ಧೈರ್ಯದಿಂದಲೇ ಸಮಾಧಾನ ಮಾಡಲು ಕುಳಿತಿದ್ದೇನೆ ನನ್ನೆದುರಿಗೆ ನೀವು!\u003cbr data-mce-fragment=\"1\"\u003e\u003cbr data-mce-fragment=\"1\"\u003e-ರವಿ ಬೆಳಗೆರೆ\u003cbr data-mce-fragment=\"1\"\u003e\u003c\/p\u003e\n\u003cp\u003eಭಾವನಾ ಪ್ರಕಾಶನ\u003c\/p\u003e","brand":"Ravi Belagere","offers":[{"title":"Default Title","offer_id":42103214801155,"sku":"HB00000924","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/samaadhaana_1.jpg?v=1637838815"},{"product_id":"major-sandeep-biography-ravi-belagere-kannada-book","title":"ಮೇಜರ್ ಸಂದೀಪ್ ಹತ್ಯೆ","description":"ನನ್ನ ಮಗ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಒಂದು ವಜ್ರ ಆದರೆ ವಜ್ರದಂತಹ ಹುಡುಗನನ್ನು ಪಾಕಿಸ್ತಾನದ ಒಬ್ಬ ಯಃಕಶ್ಚಿತ್ ಕಳ್ಳ ಕೊಂದುಬಿಟ್ಟ' ಅಂತ ಹಿರಿಯರಾದ ಉನ್ನಿಕೃಷ್ಣನ್ ಅವರು ಅಂದಾಗ ನನ್ನ ಕಣ್ಣು ನೀರಾಡಿದ್ದವು. ಸದ್ದಿಲ್ಲದೆ ದೋಣಿ ಹತ್ತಿ ಬಂದ ಹತ್ತು ಜನ ಭಯೋತ್ಪಾದಕರು ಅರವತ್ತು ಗಂಟೆಗಳಿಗೂ ಹೆಚ್ಚುಕಾಲ ಭಾರತವನ್ನೇ ಒತ್ತೆಯಿಟ್ಟುಕೊಂಡುಬಿಟ್ಟಿದ್ದರು. ಕೆಲವು ದೃಶ್ಯಗಳನ್ನು ಟೀವಿಗಳಲ್ಲಿ ನೋಡಿದೆವಾದರೂ, ಕೇವಲ ಹತ್ತು ಜನ ಆ ಪರಿಯ ಭಯೋತ್ಪಾದನೆ ಮಾಡಲು ಸಾಧ್ಯವಾ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಲೇ ಇತ್ತು. ಇಷ್ಟಕ್ಕೂ ಅಂಥ ವೀರಯೋಧ ಸಂದೀಪ್ ಉನ್ನಿಕೃಷ್ಣನ್‌ರ ಕೊಲೆ ಹೇಗಾಯಿತು ಎಂಬ ಪ್ರಶ್ನೆ ಬಾಧಿಸುತ್ತಿತ್ತು. ಅವೆಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ದೊರಕಿರುವುದು ಈ ಕೃತಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eರವಿ ಬೆಳಗೆರೆ","brand":"Ravi Belagere","offers":[{"title":"Default Title","offer_id":42103244030211,"sku":"HB00000923","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at3.37.02PM_6.jpg?v=1637839437"},{"product_id":"udugore-novel-ravi-belagere-kannada-book","title":"ಉಡುಗೊರೆ","description":"\u003cp\u003eಈ ಪುಸ್ತಕವೊಂದು ಉಡುಗೊರೆ ನಿಮಗೆ ಯಾರು ಕೊಟ್ಟರು? ಅವರು ನಿಮಗೆ ತುಂಬ ಆಪ್ತರು. ಸುಮ್ಮನೆ ಕೊಟ್ಟಿಲ್ಲ. ನಿಮ್ಮ ಒಂಟಿತನದಲ್ಲಿ, ಬೇಸರದಲ್ಲಿ, ಹರುಷದಲ್ಲಿ, ನೀವು ಹೊಸ ಕೆಲಸಕ್ಕೆ ಹೊರಡುವಾಗಿನ ಅಳುಕಿನಲ್ಲಿ, ನಿಮ್ಮ ನಿರ್ಧಾರದ ಘಳಿಗೆಯಲ್ಲಿ ನಿಮಗೆ ಇದು ನೆರವಾಗುವ ಉಡುಗೊರೆ, ನಿಮ್ಮಜೊತೆಗೆ ಇದನ್ನಿಟ್ಟುಕೊಳ್ಳಿ. Be successful. ಬದುಕಿನಲ್ಲಿ ಗೆಲುವೊಂದೇ ಮುಖ್ಯವಲ್ಲ. ಆದರೆ ಗೆಲುವಿಲ್ಲದೆ ಬದುಕಿಲ್ಲ. ನಿಮ್ಮ ಗೆಲುವಿಗೆ, ಪ್ರತಿ ಕ್ಷಣದ ಗೆಲುವಿಗೆ ಶುಭ ಕೋರುತ್ತ ನಿಮ್ಮ ಜೊತೆ ಜೊತೆಗೇ ನಾನಿದ್ದೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ನಿಮ್ಮ\u003c\/p\u003e\n\u003cp\u003eರವಿ ಬೆಳಗೆರೆ\u003c\/p\u003e","brand":"Ravi Belagere","offers":[{"title":"Default Title","offer_id":42103244292355,"sku":"HB00000922","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/udugore_1.jpg?v=1637839449"},{"product_id":"kamarajamaarga-kannada-novel-ravi-belagere-kannada-book","title":"ಕಾಮರಾಜ ಮಾರ್ಗ","description":"\u003cp\u003eರಾಜಕೀಯ ಪಲ್ಲಟಗಳ ಬಗ್ಗೆ ಬರೆಯುವಾಗ ರವಿ ಬೆಳಗೆರೆ ವಹಿಸಿರುವ ಎಚ್ಚರ ಗಮನಾರ್ಹವಾದದ್ದು. ಎರಡು ಪಕ್ಷಗಳವರು ಸೇರಿಕೊಂಡು ಒಬ್ಬ ಮುಖ್ಯಮಂತ್ರಿಯನ್ನು ಕೆಡವುವುದು, ತಲಾ ಇಪ್ಪತ್ತು ತಿಂಗಳು ಹಂಚಿಕೊಂಡು ರಾಜ್ಯವಾಳಲು ಹೊರಡುವುದು, ಕಡೆಗೆ ಕುತಂತ್ರ ಮಾಡಿ ತಮ್ಮದೇ ಆದ ಮಿತ್ರ ಪಕ್ಷಕ್ಕೆ ಅಧಿಕಾರ ಸಿಕ್ಕದಂತೆ ಮಾಡುವುದು ಮುಂತಾದವೆಲ್ಲ ನಮ್ಮ ಕಣ್ಣ ಮುಂದೆ ನಡೆದ ಘಟನೆಗಳೇ. ಇವುಗಳನ್ನು ಬರೆಯುವಾಗ ಲೇಖಕ ಆಯ ತಪ್ಪಿದರೆ ಇಡೀ ಕಥನ ಒಂದು ರಾಜಕೀಯ ಪಲ್ಲಟದ ವರದಿಯಷ್ಟೇ ಆಗಿಬಿಡುವ ಅಪಾಯವಿರುತ್ತದೆ. ಆದರೆ ಬೆಳಗೆರೆ ಪತ್ರಿಕೋದ್ಯಮದಲ್ಲಿ ಇದ್ದೂ ತನ್ನ ಕ್ರಿಯಾಶೀಲತೆ ಉಳಿಸಿಕೊಂಡಿರುವ ಜಾಣ. ಹೀಗಾಗಿ ಕಾದಂಬರಿ ಯಶಸ್ವಿಯಾಗಿದೆ.\u003c\/p\u003e\n\u003cp\u003e- ವಿಶ್ವೇಶ್ವರ ಭಟ್       \u003c\/p\u003e","brand":"Ravi Belagere","offers":[{"title":"Default Title","offer_id":42103251632387,"sku":"HB00000921","price":425.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Kamarajamarga.jpg?v=1637839635"},{"product_id":"khaasbaat-articles-ravi-belagere-kannada-book","title":"ಖಾಸ್ ಬಾತ್ - 96","description":"ಯಾರಿಗೂ ಆಗದೇ ಇರೋದು ನಿಮಗೇ ಆಗುತ್ತಟ್ಟಿಸರ್?' ಕೇಳ್ತಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e''ಏನು ಮಾಡಿ, ಒಮ್ಮೊಮ್ಮೆ ಯಾರೂ ಮಾಡದ್ದನ್ನು ನಾನು ಮಾಡುತ್ತೇನೆ. ಏಕೆಂದರೆ ನಾನು ಮುಂಬ, ಉತ್ಸಾಹಿ ಕಾರ್ಗಿಲ್ ಬೆಟ್ಟದ ಮೇಲಕ್ಕೆ ಯಾರೂ ಹತ್ತಿರಲಿಲ್ಲ, ಕನ್ನಡಿಗರಲ್ಲಿ, ನಾನು ಹತ್ತಿದ್ದೆ. ಬೇರೆ ಪತ್ರಿಕೆಯವರೂ ಬರಬಹುದಿತ್ತು, ಹೋಗಿ, ಗೋಗರೆದು ಕೈ ಹಿಡಿದು ಕರೆ ತಂದು ಹತ್ತಿಸಲಾ? ಅದು ಅವರ ಇಷ್ಟ ಅಲ್ಲಿ ಯುದ್ಧ ಭೂಮಿಯಲ್ಲಿ hand to hand fight ನಡೆಯಿತು, ನೀವು ನೋಡಿದಿರಾ? ನೋಡಿದ್ದಿದ್ದರೆ ಅದು ನಿಮ್ಮ ಖಾಸ್‌ಬಾತ್'ಗೆ ಜಮೆ ಆಗುತ್ತಿತ್ತು. ನೀವು ಕೆಳಗೇ ಉಳಿದು ಆರ್ಮಿ ಅಧಿಕಾರಿಗಳೊಂದಿಗೆ ಲಲ್ಲೆ ಹೊಡೆದು \"my experiences in Kargil” ಅಂತ ರೆಟ್ಟೆಗಾತ್ರದ ಪುಸ್ತಕ ಬರೆದರೆ ಅದೂ ಓಕೆ, ನಾನು ಇಳಿದು ಬಂದು ಕಾರ್ಗಿಲ್‌ನಲ್ಲಿ ಹದಿನೇಳು ದಿನ' ಅಂತ ಬರೆದರೆ ಅದೂ ಮಂಜೂರ್, ಆ ತರಹದ ಒಂದು ಅನುಭವಕ್ಕೆ ಒಗ್ಗಿಕೊಳ್ಳದ ಹೊರತು, ನಿಮ್ಮ 'ಖಾಸ್‌ಬಾತ್'ನೊಳಕ್ಕೆ ಕಾರ್ಗಿಲ್ ಇಳಿದು ಸ್ಥಾಪಿತವಾಗದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಅದೇ ನಾನು ಅಫಘನಿಸ್ತಾನಕ್ಕೆ ಹೋದೆ. ಅಲ್ಲಿಯ ಜನರೆಲ್ಲ ಹೊರಕ್ಕೆ ಓಡುತ್ತಿದ್ದರು. ನಿಮಗೆ ಗೊತ್ತಿರಲಿಕ್ಕಿಲ್ಲ: ಯೂರಪ್‌-ಏಷಿಯಾಕ್ಕೂ ಮಧ್ಯೆ ಇರೋ ದೇಶವದು. ಅಲ್ಲಿನವರನ್ನು 'ಯೂರೇಷಿಯನ್ನರು' ಅಂತಾರೆ. ನಮ್ಮನ್ನು 'ಇಂಡಿಯನ್ಸ್' ಅಂದಹಾಗೆ, ಅತಿಥಿ ಸತ್ಕಾರ ಆ ಜನರ ನೆತ್ತರಿನಲ್ಲೇ ಇದೆ. ಅಂಥ ಮುದ್ದಾದ ದೇಶವನ್ನು ಹಿಡಿದು ಪುಡಿಗುಟ್ಟತೊಡಗಿತು ಅಮೆರಿಕ, ನಾನು ನೇರ ಹೋಗಿ ಅದರ ಅಡಿಗೇ ನಿಂದೆ. ಕಣ್ಣಾರೆ ನಾನು ಕುಂದೂಸ್ ಯುದ್ಧವೆಂಬ ಘನಘೋರ ಯುದ್ಧ ನೋಡಿದೆ. ಉಂಟಾ? ಬೇರೆ ಪತ್ರಕರ್ತರಿಗೆ ಅದು ಸಾಧ್ಯವಾ? ಸಾಧ್ಯವಾದರೆ ಅದು ಅವನ ಖಾಸ್‌ಬಾತ್. ಆಗಲಿಲ್ಲವೋ sorry sorry.\u003cbr data-mce-fragment=\"1\"\u003e\u003cbr data-mce-fragment=\"1\"\u003eಇಲ್ಲಿ ನನ್ನ ಜೀವನಾನುಭವದ ತುಣುಕುಗಳನ್ನು ನೀಡಿದ್ದೇನೆ. ಗ್ರಹಿಸಬಹುದು. ಹಿಮಾಲಯಕ್ಕೆ ಹೋಗಬೇಕೆನ್ನಿಸಿದರೆ, ಅದು ನಿಮ್ಮ ಖಾಸ್‌ಬಾತ್ Why don't you try?\u003cbr data-mce-fragment=\"1\"\u003e\u003cbr data-mce-fragment=\"1\"\u003e-ರವಿ ಬೆಳಗೆರೆ","brand":"Ravi Belagere","offers":[{"title":"Default Title","offer_id":42103263265027,"sku":"HB00000920","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_6_c1609812-5b49-4a67-b8c0-287131bbe3be.jpg?v=1691836328"},{"product_id":"kaargilnalli-hadinelu-dinagalu-articles-ravi-belagere-kannada-book","title":"ಕಾರ್ಗಿಲ್‌ನಲ್ಲಿ ಹದಿನೇಳು ದಿನಗಳು","description":"\u003cp\u003eಕಾರ್ಗಿಲ್‌ನ ಯುದ್ಧ ಭೂಮಿಗೆ ನಾನು ಹೋದದ್ದು ಪತ್ರಕರ್ತನಾಗಿಯೇ ಆದರೂ, ಆ ಯುದ್ಧ ಭೂಮಿ ನನ್ನೊಳಗೊಬ್ಬ ಹೊಸ ಮನುಷ್ಯನನ್ನೇ ಸೃಷ್ಟಿಸಿ ಕಳಿಸಿತು. ಅಲ್ಲಿ ಷೆಲ್ ದಾಳಿ ನಡೆಯುತ್ತಿದ್ದರೆ ಅಂಗೈಯಲ್ಲಿ ಜೀವ ಹಿಡಿದುಕೊಂಡು ಯುದ್ಧಭೂಮಿಯ ತುಂಬಾ ಓಡಾಡಿದೆ. ನೂರಾರು ಸಾವುಗಳನ್ನು ಕಂಡೆ. ಫಿರಂಗಿಗಿಂತ ದೃಢವಾಗಿ ನಿಂತು ಬಡಿದಾಡಿದ ಸೈನಿಕರ ಹೆಗಲಿಗೆ ಕೈಯಿಟ್ಟು 'ಅಣ್ಣಾ' ಅಂದೆ. ಕಾರ್ಗಿಲ್ ನನ್ನನ್ನು ಹೊಸ ಮನುಷ್ಯನನ್ನಾಗಿ ಮಾಡಿ ಕಳಿಸಿತು.\u003c\/p\u003e\n\u003cp\u003eರವಿ ಬೆಳಗೆರೆ\u003c\/p\u003e\n\u003cp\u003eಭಾವನಾ ಪ್ರಕಾಶನ\u003c\/p\u003e","brand":"Ravi Belagere","offers":[{"title":"Default Title","offer_id":42103281516803,"sku":"HB00000919","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kaargilnallihadineludinagalu_1.jpg?v=1637840164"},{"product_id":"chalam-autobiography-ravi-belagere-kannada-book","title":"ಚಲಂ","description":"\u003cp\u003eಸುಮಾರು ಮೂವತ್ತು ವರ್ಷಗಳಿಂದ ಒಂದು ತೆಲುಗು ಪುಸ್ತಕ ನನ್ನೊಂದಿಗಿದೆ. ನಾನು ಹೋದಲ್ಲಿಗೆಲ್ಲ ಲಗೇಜಿನೊಂದಿಗೆ ಬಂದಿದೆ. ಕಪಾಟಿನಲ್ಲಿ ಕುಳಿತಿದೆ. ದಿಂಬಿನಡಿ ನಲುಗಿದೆ. ಬೇಸರವಾದಾಗ ಸಮಾಧಾನ ಹೇಳಿದೆ, ಅದರ ರಟ್ಟು ಹರಿದಿದೆ. ಪುಟಗಳು ಜೀರ್ಣ ಜೀರ್ಣ, ಆದರೂ ಜೊತೆಯಲ್ಲಿಟ್ಟುಕೊಂಡೇ ಇದ್ದೆ. ಅದು ತೆಲುಗಿನ 'ಚಲಂ'ನ ಆತ್ಮಚರಿತ್ರೆ. ನಾನು ಆತನಂತೆ ಬರೆಯಲು ಪ್ರಯತ್ನಿಸಿದೆ. ಆಗಲಿಲ್ಲ. ಆತನಂತೆ ಬದುಕಲು ಪ್ರಯತ್ನಿಸಿದೆ, ಸಾಧ್ಯವಾಗಲಿಲ್ಲ. ಆತನನ್ನು ಕಡೆಗೆ ಧಿಕ್ಕರಿಸಲು ನೋಡಿದೆ. ಅದೂ ಸಾಧ್ಯವಾಗಲಿಲ್ಲ. ಹೀಗಾಗಿ, ಆತನನ್ನು ನೀಗಿಕೊಳ್ಳುವ ಕೊನೆಯ ಪ್ರಯತ್ನವಾಗಿ ಈ ಕೆಲಸ ಮಾಡುತ್ತಿದ್ದೇನೆ, ಆತನ ಪುಸ್ತಕ 'ಆತ್ಮಕಥ' ಅನುವಾದಿಸುತ್ತಿದ್ದೇನೆ. ಚಲಂನ ಬದುಕಿನ ಕಥೆ ಓದಲು ಚಂದವೇ ಹೊರತು ಆತ ಅನುಕರಣೀಯನಲ್ಲ ಆತನಂತೆ ಬದುಕಲು ಯತ್ನಿಸಬೇಡಿ, ಹಾಗಂತ ಹೇಳಿಯೇ ಈ ಪುಸ್ತಕವನ್ನು ನಿಮ್ಮ ಕೈಗಿಡುತ್ತಿದ್ದನೆ. ಓದುವ ಸಂಕಟ ನಿಮ್ಮದಾಗಲಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eರವಿ ಬೆಳಗೆರೆ\u003c\/p\u003e","brand":"Ravi Belagere","offers":[{"title":"Default Title","offer_id":42103283056899,"sku":"HB00000918","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at3.37.03PM_2.jpg?v=1637840182"},{"product_id":"pradosha-novel-ravi-belagere-kannada-book","title":"ಪ್ರದೋಷ","description":"ಅದು ಪ್ರದೋಷ ಕಾಲ! ಭಗವಂತ ಇದ್ದಾನಾ? ಗೊತ್ತಿಲ್ಲ. ಪ್ರೇತಾತ್ಮವಿದೆಯಾ? ತಿಳಿದಿಲ್ಲ. ಹೇಗೆ ಭಗವಂತನ ಸುತ್ತ ಗುಡಿ, ಗೋಪುರ, ಕಳಶ, ಮಂತ್ರ, ಆಚರಣೆಗಳು ಬೆಳೆದುಕೊಂಡಿವೆಯೋ ಹಾಗೆಯೇ ಇನ್ನೊಂದೆಡೆ ವಾಮವಿದ್ಯೆಯೂ ಬೆಳೆದಿದೆ. ಮಾಟ, ಕೈ ಮುಸುಗು, ಮದ್ದು, ವಕರಣ, ಶವ ಸಾಧನೆ, ಶವ ಭೋಜನ, ಶವ ಮೈಥುನ, ಕಪಾಲ ಭೋಜನ, ಸ್ಮಶಾನ ಜೀವನ - ಹೀಗೆ ನೂರೆಂಟು. ಸುಮಾರು ಇಪ್ಪತ್ತೈದು ವರ್ಷಗಳಿಂದಲೂ ಈ ಬಗ್ಗೆ ಒಂದು ಕುತೂಹಲ ಬೆಳೆಸಿಕೊಂಡು ಬಂದವನು ನಾನು. ಅದೇ ಗುಂಗಿನಲ್ಲಿ ಕೆಲವು ಕಾದಂಬರಿಗಳನ್ನು ಬರೆದೆ. ಮೊದಲನೆಯದು 'ಮಾಟಗಾತಿ'. ಎರಡನೆಯದು 'ಸರ್ಪ ಸಂಬಂಧ!'. ಈಗ ಮೂರನೆಯದು 'ಪ್ರದೋಷ'. ಈ ಮೂರೂ ಕಾದಂಬರಿಗಳು ಒಂದಕ್ಕೊಂದು ತಳುಕು ಹಾಕಿಕೊಂಡಂತಿವೆ. ಹಾಗಾಗಿ ಇವನ್ನ ಓದುವ ರೋಮಾಂಚನ ನಿಮ್ಮದು.\u003cbr data-mce-fragment=\"1\"\u003e\u003cbr data-mce-fragment=\"1\"\u003e- ರವಿ ಬೆಳಗೆರೆ","brand":"Ravi Belagere","offers":[{"title":"Default Title","offer_id":42103303241987,"sku":"HB00000917","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at5.08.21PM.jpg?v=1637840558"},{"product_id":"ottaare-kathegalu-collection-of-stories-ravi-belagere-kannada-book","title":"ಒಟ್ಟಾರೆ ಕಥೆಗಳು","description":"\u003cp\u003eಈ ಸಂಕಲನದ ಕಥೆಗಳಿಗೆ ಮುಖ್ಯ ವಸ್ತು ಪ್ರತಿದಿನದ ಬದುಕು ಮತ್ತು ಅದರ ಒಡಲಲ್ಲಿ ಇರುವ ಹಿಂಸೆ. ರವಿ ಬೆಳಗೆರೆಗೆ ಪ್ರಗತಿಶೀಲ ಕಣ್ಕಟ್ಟುಗಳನ್ನು ಕಳಚಿ, ಬದುಕನ್ನು ನೆಟ್ಟನೋಟದಿಂದ ಕಾಣಬಲ್ಲ ಸಾಮರ್ಥ್ಯವಿದೆ. ಸಂಕಲನದ ಒಳ್ಳೆಯ ಕಥೆಗಳೇ ಈ ಮಾತಿಗೆ ಸಾಕ್ಷಿ. ಕಮೂನ ಒಂದು ಮಾತನ್ನು ಬಳಸಿಕೊಂಡು ಹೇಳುವುದಾದರೆ ಈ ಕಥೆಗಳು ಚರಿತ್ರೆಗೆ ಬಲಿಯಾದವರ ವೃತ್ತಾಂತಗಳು, ಚರಿತ್ರೆ ನಿರ್ಮಸುವವರದ್ದಲ್ಲ. \u003c\/p\u003e\n\u003cp\u003e- ಜಿ. ರಾಜಶೇಖರ್. \u003c\/p\u003e","brand":"Ravi Belagere","offers":[{"title":"Default Title","offer_id":42103305896195,"sku":"HB00000916","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/OttaareKathegalu.jpg?v=1637840666"},{"product_id":"time-pass-autobiography-ravi-belagere-kannada-book","title":"ಟೈಮ್ ಪಾಸ್ - ಪ್ರೊತಿಮಾ ಬೇಡಿ ಆತ್ಮಚರಿತ್ರೆ","description":"\u003cp\u003e ಹೀಗೆ ಈ ಪ್ರೊತಿಮಾ ಬೇಡಿ ಎಂಬ ವಿಲಕ್ಷಣ ಜೀವಿಯಂತೆ ನಲವತ್ತೊಂಬತ್ತು ವರ್ಷಗಳ ಕಾಲ ಪ್ರತಿ ನಿಮಿಷವನ್ನು ಇಷ್ಟೊಂದು ತೀವ್ರವಾಗಿ ಬದುಕಿ ಬಿಡುವುದು ಮತ್ಯಾವ ಹೆಂಗಸಿಗಾದರೂ ಸಾಧ್ಯವೋ ಏನೋ? ಆದರೆ ಬದುಕಿದುದನ್ನೆಲ್ಲ ಹೀಗೆ, ಇಷ್ಟು ನಿಚ್ಚಳವಾಗಿ ಬರೆದುಕೊಳ್ಳುವುದು ಮಾತ್ರ ಸದ್ಯದ ಭವಿಷ್ಯತ್ತಿನಲ್ಲಿ ಮತ್ತೊಬ್ಬ ಹೆಣ್ಣುಮಗಳಿಗೆ ಸಾಧ್ಯವಾಗಲಾರದು. ಕಬೀರ್ ಬೇಡಿಯಿಂದ ಹಿಡಿದು ಪಂಡಿತ್ ಜಸ್‌ರಾಜ್‌ ತನಕ, ರಜನಿ ಪಟೇಲ್‌ನಿಂದ ಹಿಡಿದು ನಿಗೂಢ ಕೇಂದ್ರಮಂತ್ರಿ 'ಮನು'ತನಕ ಚಿತ್ರವಿಚಿತ್ರದ ದೇಶವಿದೇಶಗಳ ಗಂಡಸರೊಂದಿಗೆ ಸಂಬಂಧವಿರಿಸಿಕೊಂಡ ಪ್ರೊತಿಮಾ ಬೇಡಿ-ವರ್ಷಗಟ್ಟಲೆ ಕುಡಿದಳು, ಚರಸ್ ಸೇದಿದಳು, ಬೆತ್ತಲೆ ಓಡಿದಳು! ಅದು ಸ್ಟೇಚ್ಛೆಯನ್ನೇ ಸ್ವಾತಂತ್ರ್ಯವೆಂದು ಭಾವಿಸದಂತಹ ಹಿಪ್ಪಿಯುಗ.\u003cbr data-mce-fragment=\"1\"\u003e\u003cbr data-mce-fragment=\"1\"\u003eಅಷ್ಟೇ ಆಗಿದ್ದಿದ್ದರೆ ಪ್ರೊತಿಮಾ ಬೇಡಿಯ ಜೀವಿತಗಾಥೆ, ಒಬ್ಬ ಕ್ಷುದ್ರ ಹೆಂಗಸಿನ ಹೀನ ಚರಿತ್ರೆಯೆನ್ನಿಸಿಕೊಂಡು ಬಿಡುತ್ತಿತ್ತು. ಆದರೆ ಪ್ರೊತಿಮಾ ತನಗೇ ಗೊತ್ತಿಲ್ಲದಂತೆ ಬದಲಾದಳು. ಒಡಿಸ್ಸಿ ನೃತ್ಯ ಸಾಮ್ರಾಜ್ಯದ ತಾರೆಯಾದಳು. ಬೆಂಗಳೂರಿನ ಬಳಿ ನೃತ್ಯಗ್ರಾಮ ಕಟ್ಟಿದಳು. ಸನ್ಯಾಸಿನಿಯಾದಳು. ತನ್ನಿಬ್ಬರು ಮಕ್ಕಳಿಗೆ ತಾಯಿಯಾಗಬೇಕೆಂದು ತುಂಬ ಚಡಪಡಿಸಿದಳು. ಕಳೆದುಕೊಂಡ ಗಂಡನಿಗಾಗಿ, ಗೆಳೆಯರಿಗಾಗಿ ಹಂಬಲಿಸಿದಳು. ಮೊಮ್ಮಗುವಿಗೆ ಪ್ರೀತಿಯ ಅಜ್ಜಿಯಾದಳು. ನೋಡನೋಡುತ್ತಲೇ ಸತ್ತೂ ಹೋದಳು.\u003cbr data-mce-fragment=\"1\"\u003e\u003cbr data-mce-fragment=\"1\"\u003eಅಂಥದೊಂದು ವಿಲಕ್ಷಣ ಬದುಕಿನ ವಿಪುಲವಾದ ಕಥೆಯೇ 'ಟೈಂಪಾಸ್'\u003cbr data-mce-fragment=\"1\"\u003e\u003cbr data-mce-fragment=\"1\"\u003e-ರವಿ ಬೆಳಗೆರ\u003c\/p\u003e\n\u003cp\u003eಭಾವನಾ ಪ್ರಕಾಶನ\u003c\/p\u003e","brand":"Ravi Belagere","offers":[{"title":"Default Title","offer_id":42103306649859,"sku":"HB00000915","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/timepass_1.jpg?v=1637840685"},{"product_id":"bheematheerada-hantakru-real-story-ravi-belagere","title":"ಭೀಮಾ ತೀರದ ಹಂತಕರು","description":"ಅವರು ಮೂವರಿದ್ದರು.\u003cbr data-mce-fragment=\"1\"\u003eನಾನು ಮೂವರನ್ನೂ ನೋಡಿದ್ದೆ. ಒಬ್ಬನನ್ನು ಪೊಲೀಸರು ಬಿಜಾಪುರ-ಗುಲಬರ್ಗ ಸೊಲ್ಲಾಪುರದ ಬಯಲುಗಳಲ್ಲಿ ಬೇಟೆಯಾಡಿ ಕೊಂದರು. ಅವನ ಹೆಸರು ಚಂದಪ್ಪ ಹರಿಜನ. ಇನ್ನೊಬ್ಬನನ್ನು ನಾನು ನೋಡುವ ಹೊತ್ತಿಗಾಗಲೇ ಸಾವು ತಲೆಯ ಮೇಲೆ 'ಕಥನ್' ಹೊದಿತ್ತು. ಭೀಮಾ ತೀರದ ಹಂತಕ ದೂರದಿಂದ ಬೆಂಗಳೂರಿಗೆ ಬಂದು ಆಸ್ಪತ್ರೆಯೊಂದರಲ್ಲಿ ಪ್ರಾಣ ಅವನ ಹೆಸರು ಕೇಶಪ್ಪತಾವರಖೇಡ. ಮೂರನೆಯವನು ಶಿವಾಜಿ ಬೋರಗಿಭೀಮಾ ತೀರದ ಅಷ್ಟೂ ರಕ್ತಪಾತಕ್ಕೆ ಕಾರಣನಾದ ಹುಂಬ. ಸಾಯುವುದಕ್ಕೆ ಕೆಲವು ತಿಂಗಳಿಗೆ ಮುಂಚೆ ಹಾಲಿನಲ್ಲಿ ಬಿಸ್ಕತ್ತು ತೋಯಿಸಿಕೊಂಡು ತಿನ್ನುತ್ತಿದ್ದ.  ಜೈಲಿನಿಂದ ಬಿಡುಗಡೆಯಾದ ತಕ್ಷಣ ಒಂದಿಬ್ಬರನ್ನು ಕೊಲ್ಲಬೇಕೆಂದು ಚಡಪಡಿಸುತ್ತಿದ್ದ. ದುರಂತವೆಂದರೆ, ಬಿಡುಗಡೆಯಾದ ದಿನ ಹೊತ್ತಿಗೆ ಅವನೇ ಹೋದ, ಭೀಮಾ ತೀರದ ಮೂವರು ಹಂತಕರ ಸಾವುಗಳೇ ಅಂಥವರ ಬದುಕುಗಳಿಗೆ ಬೆನ್ನುಡಿಗಳಾದವು. ನಾನು ಸುಮ್ಮನೆ ಕುಳಿತು ಬರೆದಿದ್ದೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ರವಿ ಬೆಳಗೆರೆ","brand":"Ravi Belagere","offers":[{"title":"Default Title","offer_id":42103315792131,"sku":"HB00000914","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at5.08.21PM_1.jpg?v=1637840995"},{"product_id":"himagiriya-garbhadalli-novel-ravi-belagere-bhavana-publications","title":"ಹಿಮಗಿರಿಯ ಗರ್ಭದಲ್ಲಿ","description":"ಈ ಒಂದು ಪ್ರಸ್ತಕಕ್ಕಾಗಿ ತುಂಬ ಆಸೆಪಟ್ಟಿದ್ದೆ, ಬ್ರಿಗೇಡಿಯರ್ ಜೆ.ಪಿ. ದಳವಿ ಎಂಬ ಧೀರ ಅಧಿಕಾರಿ ಬರೆದ ಪುಸ್ತಕವದು, 'ಹಿಮಾಲಯನ್ ಬ್ಲಂಡರ್ ಅಂತ: 1962ರಲ್ಲಿ ಚೀನಾ ಸೈನ್ಯ ಭಾರತವನ್ನು ಸೋಲಿಸಿ ರೋಹಟ ಮಾಡಿದುದರ ಕಥೆಯಿದು. ''ಈ ಪುಸ್ತಕ ಓದಿದ ನಂತರ ಬಂದರೆ ನಿಂಗೆ ಅರುಗಾಚಲ್ ಪ್ರದೇಶ್ ಸ್ಕೋ ಅರ್ಥವಾಗದೆ' ಅಂದಿದ್ದ ಡಾ. ಮುರಳಿ, ನನ್ನ ನಹೀಬು ಬೊಟ್ಟಿತ್ತು. ಪುಸ್ತಕ ಕಡೆಗೂ ಸಿಗಲಿಲ್ಲ. ಅರುಣಾಚಲ ಪ್ರದೇಶ ಪ್ರವಾಸ ಮುಗಿಸಿ ಬಂದರೂ\u003cbr data-mce-fragment=\"1\"\u003e\u003cbr data-mce-fragment=\"1\"\u003eಒಂದು ದಿನ ಹೀಗೆ ಬೆಂಗಳೂರಿನ ಬ್ರಿಗೇಡ್ ರಸ್ತೆಗೆ ಹೋದೆ, ಅಲ್ಲಿ  ಪುಸ್ತಕ ಮಾರುವ ವೃದ್ಧರೊಬ್ಬರು ಇದ್ದರು. ಎದ್ದು ಹೋಗೋ ಮಾತು ಬಿದ್ದು ಹೋಗಲಿ ಅಂತ 'ಹಿಮಾಲಯನ್ ಬ್ಲಂಡರ್' ಇದೆಯಾ? ಅಂದೆ. 'ತಗೊ ಅಂತ ಮೂಲೆಯಿಂದ ತೆಗೆದು ಕೊಟ್ಟೇಬಿಟ್ಟರು. ಪುಸ್ತಕ ಸಿಕ್ಕ ಭಯಂಕರ ಖುಷಿಯಲ್ಲಿ ರೂಮಿಗೆ ಬಂದರೆ ಮತ್ತೊಂದು 'ತ್ರಿಲ್‌' ಕಾದಿತ್ತು. ಪುಸ್ತಕದ ಮೊದಲ ಹಾಳೆಯ ಮೇಲೆ ಪುಸ್ತಕದ ಕರ್ತೃ ಬ್ರಿಗೇಡಿಯರ್ ಜೆ.ಪಿ. ದಳವಿ ಅವರ ಮುದ್ದಾದ ಕೈ ಬರಹ, ಸಹಿ ಕಂಡು ಕಣ್ಣುಂಬಿ ಬಂದವು. ಅಂದಹಾಗೆ ನನ್ನ ಈ ಅರುಣಾಚಲ ಪ್ರದೇಶದ ಯಾತ್ರೆ ಪೂರ್ಣವಾಗುವುದೇ ಬ್ರಿಗೇಡಿಯರ್ ದಳವಿ ಅವರ ಪುಸ್ತಕದಿಂದ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ರವಿ ಬೆಳಗೆರೆ","brand":"Ravi Belagere","offers":[{"title":"Default Title","offer_id":42103381000451,"sku":"HB00000913","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at5.08.20PM.jpg?v=1637841386"},{"product_id":"the-gift-self-help-ravi-belagere-kannada-book","title":"ದಿ ಗಿಫ್ಟ್","description":"\u003cp\u003eಒಬ್ಬರು ಮತ್ತೊಬ್ಬರಿಗೆ ಕೊಡಬಹುದಾದ ಅತ್ಯುತ್ತಮ ಉಡುಗೊರೆಯೆಂದರೆ ಸಮಯ. ಎರಡನೆಯ ಅತ್ಯುತ್ತಮ ಕೊಡುಗೆ ಪುಸ್ತಕ. ಇದು ಅಂತಹದೊಂದು ಉಡುಗೊರೆ: 'ದಿ ಗಿಫ್ಟ್' ನೀವು ಮತ್ತೇನು ಕೊಟ್ಟರೂ ಮರೆತು ಹೋಗುತ್ತದೆ. ಪುಸ್ತಕ ಕೂಡ ಅಷ್ಟೆ: ಅದು ಕಳೆದು ಹೋಗುತ್ತದೆ. ಆದರೆ ಪುಸ್ತಕ ಕೊಟ್ಟ ನೆನಪು? ಅದು ಅವಳು ಕೊಟ್ಟ ಮೊದಲ ಮುತ್ತಿನಂತೆ. ಅದನ್ನು ಮನಸು ಮರೆದು ಹೋದರೂ ದೇಹ ನೆನಪಿಟ್ಟುಕೊಳ್ಳುತ್ತದೆ. ಈ ಪುಸ್ತಕ ನಿಮಗೂ, ನೀವಿದನ್ನು ಉಡುಗೊರೆಯಾಗಿ ಕೊಟ್ಟ ಅವರಿಗೂ ಶಾಶ್ವತವಾಗಿ ನೆನಪಿರುತ್ತದೆ ಎಂಬ ಭರವಸೆಯೊಂದಿಗೆ ನಿಮಗಿದನ್ನು ಕೊಡುತ್ತಿದ್ದೇನೆ. ಸ್ವೀಕರಿಸಿ.\u003c\/p\u003e\n\u003cp\u003e- ರವಿ ಬೆಳಗೆರೆ.   \u003c\/p\u003e","brand":"Ravi Belagere","offers":[{"title":"Default Title","offer_id":42103407673603,"sku":"HB00000912","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/TheGift.jpg?v=1760776088"},{"product_id":"idu-jeeva-iduve-jeevana-articles-ravi-belager-kannada-book","title":"ಇದು ಜೀವ ಇದುವೇ ಜೀವನ","description":"\u003cp\u003eಇದು ನಿಜಕ್ಕೂ ನನ್ನಿಂದ ಸಾಧ್ಯವಾ?\u003cbr data-mce-fragment=\"1\"\u003e\u003cbr data-mce-fragment=\"1\"\u003eಸಾವಿರ ಸಲ ಯೋಚಿಸಿದ್ದೇನೆ. ಏಕೆಂದರೆ ನನ್ನ ಮಾಮ ಬೆಳಗೆರೆ ಕೃಷ್ಣಶಾಸ್ತ್ರಿಗಳು ಯೇಸುವಿನಂತೆ ಬದುಕಿದವರು. ನಾನು ಅದಕ್ಕೆ ತದ್ವಿರುದ್ಧವಾಗಿ ಬದುಕುತ್ತಿರುವ ಜುದಾಸನಂಥವನು. ಯೇಸುವಿನ ಜೀವನ ಕಥನವನ್ನು ಜುದಾಸ ಬರೆಯುವುದುಂಟೆ?\u003cbr data-mce-fragment=\"1\"\u003e\u003cbr data-mce-fragment=\"1\"\u003eಈತನಕ ಎಪ್ಪತ್ತು ಪುಸ್ತಕ ಅನಾಯಾಸವಾಗಿ ಬರೆದಿದ್ದೇನೆ. ಅಂದರೆ, ನನಗೆ ಬರೆಯಲು ಬರುತ್ತದೆ. ಬಾಲ್ಯದಲ್ಲಿ ತಾರುಣ್ಯದಲ್ಲಿ ಅಮ್ಮನೊಂದಿಗೆ ಬದುಕುತ್ತಾ, ಮಾಮನೊಂದಿಗೆ ಅಲೆಯುತ್ತಾ ಆತನ ಬಗ್ಗೆ ಅಷ್ಟಿಷ್ಟು ಅರಿತಿದ್ದೇನೆ. ಮತ್ತು ಬೆಳಗೆರೆಯವನಲ್ಲದಿದ್ದರೂ ಬೆಳಗೆರೆ ಕುಟುಂಬದೊಳಕ್ಕೆ ಹೊಕ್ಕು ದಾಖಲಾಗಿದ್ದೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕೆಲವು ಕಾರಣಗಳಿಗಾಗಿ ಶಾಸ್ತ್ರಿಗಳ ಜೀವನ ಕಥನ ಬರೆಯಲು ನಾನು ಅರ್ಹ. ಅಷ್ಟೆ. ಉಳಿದಂತೆ ಸರಿ ಸುಮಾರು ತೊಂಬತ್ತೇಳು ವರ್ಷಗಳ ಆ ಶ್ರೇಷ್ಠ ಜೀವಿಯ ಬದುಕನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಮನುಷ್ಯ ಮಾತ್ರರಿಗೆ ಕಷ್ಟ ಕಷ್ಟ ಕಷ್ಟ,\u003cbr data-mce-fragment=\"1\"\u003e\u003cbr data-mce-fragment=\"1\"\u003e-ರವಿ ಬೆಳಗೆರೆ\u003c\/p\u003e\n\u003cp\u003eಭಾವನಾ ಪ್ರಕಾಶನ\u003c\/p\u003e","brand":"Ravi Belagere","offers":[{"title":"Default Title","offer_id":42103441195267,"sku":"HB00000911","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/idujeevaiduvejeevana_1.jpg?v=1637841587"},{"product_id":"nijjapreetistiya-crime-thriller-ravi-belagere-kannada-book","title":"ನಿಜ್ಜ ಪ್ರೀತಿಸ್ತೀಯಾ?","description":"ಇಸವಿ 1985 ಮಾರ್ಚ್ 19ರ ಬೆಳಗಿನ ಜಾವ ಕ್ಯಾಲಿಫೋರ್ನಿಯಾದಲ್ಲಿ ಲಿಂಡಾ ಮೇರಿ ಬ್ರೌನ್‌ಳ ಕೊಲೆಯಾಯಿತು. ಸತ್ತವಳಿಗೆ ಬರೀ 23 ವರ್ಷ. ಒಂದು ಪುಟ್ಟ ಮಗು, ಗಂಡ ಭಯಂಕರ ಶ್ರೀಮಂತ ಮತ್ತು ಕಂಪ್ಯೂಟರ್ ಜೀನಿಯಸ್, ಕೊಲೆಯಾದ ಲಿಂಡಾ ಅನುರೂಪ ಸುಂದರಿ. ಅಂಥವಳ ಎದೆಗೆ, ಸರಿಯಾಗಿ ಸ್ತನಗಳಿಗೆ ಮಧ್ಯೆ ಯಾರೋ ಎರಡು ಗುಂಡು ಹೊಡೆದಿದ್ದರು. ಹಾಗೆ ಲಿಂಡಾ ಕೊಲೆಯಾದ ಘಳಿಗೆ ಆ ಮನೆಯಲ್ಲಿದ್ದವರೆಂದರೆ ಲಿಂಡಾಳ ತಂಗಿ ಪ್ಯಾಟಿ ಬೇಝ್ ಮತ್ತು ಲಿಂಡಾಳ ಮಲಮಗಳು ಸಿನ್ನಮೋನ್ ಬ್ರೌನ್, ಕೊಲೆಯಾದ ಲಿಂಡಾ ಬ್ರೌನ್‌ಳ ಗಂಡ ಡೇವಿಡ್ ಅವತ್ತು ಮನೆಯಲ್ಲಿರಲಿಲ್ಲ. ಹಾಗಾದರೆ ಲಿಂಡಾಳನ್ನು ಕೊಲೆ ಮಾಡುವ ಅವಶ್ಯಕತೆ ಯಾರಿಗಿತ್ತು? ಅಂಥದ್ದೇನಿತ್ತು? ಅಸಲಿಗೆ ಬಂದೂಕಿನ ಟ್ರಿಗರ್ ಎಳೆದವರಾದರೂ ಯಾರು? ಈ ಪಾತಕದ ಕಥೆ ತುಂಬ ಇಂಟರೆಸ್ಟಿಂಗ್ ಆಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ರವಿ ಬೆಳಗೆರೆ","brand":"Translated by Ravi Belagere","offers":[{"title":"Default Title","offer_id":42103474553091,"sku":"HB00000910","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at5.27.15PM.jpg?v=1637841696"},{"product_id":"best-of-lavlavike-ravi-articles-belagere-kannada-book","title":"ಬೆಸ್ಟ್ ಆಫ್ ಲವ್‌ಲವಿಕೆ","description":"ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ 'ಲವ್‌ಲವಿಕೆ' ಅಂಕಣಗಳ ಸಂಕಲನ. ಹದಿಹರೆಯದವರ ಯುವಕ ಯುವತಿಯರ ಮನಗೆದ್ದ ಈ ಅಂಕಣಗಳು ಈಗ ಒಟ್ಟುಗೂಡಿ 'ಬೆಸ್ಟ್ ಆಫ್ ಲವ್‌ಲವಿಕೆ' ಪುಸ್ತಕವಾಗಿ ನಿಮ್ಮ ಮುಂದಿದೆ.","brand":"Ravi Belagere","offers":[{"title":"Default Title","offer_id":42103542317315,"sku":"HB00000909","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/BestofLavLavike.jpg?v=1637842078"},{"product_id":"nanna-neela-dweepa-essays-ravi-belagere-kannada-book","title":"ನನ್ನ ನೀಲ ದ್ವೀಪ","description":"\u003cp\u003e\u003cb data-path-to-node=\"0\" data-index-in-node=\"0\"\u003eನನ್ನ ನೀಲ ದ್ವೀಪ\u003c\/b\u003e (Nanna Neela Dweepa) ಖ್ಯಾತ ಪತ್ರಕರ್ತ ಮತ್ತು ಲೇಖಕ \u003cb data-path-to-node=\"0\" data-index-in-node=\"62\"\u003eರವಿ ಬೆಳಗೆರೆ\u003c\/b\u003e ಅವರ ಒಂದು ಸುಂದರವಾದ ಲಲಿತ ಪ್ರಬಂಧಗಳ ಸಂಕಲನ ಅಥವಾ ಆಯ್ದ ಲೇಖನಗಳ ಪುಸ್ತಕವಾಗಿದೆ. ಈ ಪುಸ್ತಕವು \u003cb data-path-to-node=\"0\" data-index-in-node=\"154\"\u003eಭಾವನಾ ಪ್ರಕಾಶನ\u003c\/b\u003eದಿಂದ ಹೊರಬಂದಿದೆ.\u003c\/p\u003e","brand":"Kushwanth Singh, Translated by Ravi Belagere","offers":[{"title":"Default Title","offer_id":42205654188291,"sku":"HB00000002","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/nnd.jpg?v=1639636950"},{"product_id":"rangavilasa-bangaleya-kolegalu-true-crime-ravi-belagere-kannada-book","title":"ರಂಗವಿಲಾಸ ಬಂಗಲೆಯ ಕೊಲೆಗಳು","description":"ಇದು ಕಾದಂಬರಿಯಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003eಬೆಂಗಳೂರಿನಲ್ಲಿ 1956ರಲ್ಲಿ ಒಂದು ಘೋರ ಹತ್ಯಾಕಾಂಡ ನಡೆಯಿತು. ಅದು ಬೇಲೂರು ಶ್ರೀನಿವಾಸ ಅಯ್ಯಂಗಾರ್ ಅವರ ಇಡೀ ಮನೆತನದ, ಎಲ್ಲ ಸದಸ್ಯರ ಕೊಲೆ. ಒಂದೇ ರಾತ್ರಿಯಲ್ಲಿ ಆ ಬಂಗಲೆಯ ಸೊಂಟದೆತ್ತರದ ನಾಯಿಯಿಂದ ಹಿಡಿದು, ಅಯ್ಯಂಗಾರರ ಮನೆಯ ಹಸುಗೂಸಿನ ತನಕ ಎಲ್ಲರ ಕೊಲೆ ನಡೆದು ಹೋಯಿತು. ಕೇಜಿಗಟ್ಟಲೆ ಚಿನ್ನ, ಬೆಳ್ಳಿ, ಒಡವೆ ಲೂಟಿಯಾಯಿತು. ಇಡೀ ರಾಜ್ಯದಲ್ಲೇ ಸಂಚಲನ ಉಂಟುಮಾಡಿದ ಹತ್ಯಾ ಪ್ರಕರಣವದು. ಏಕೆಂದರೆ ಬೇಲೂರು ಶ್ರೀನಿವಾಸ ಅಯ್ಯಂಗಾರರು ಖ್ಯಾತ ಕ್ರಿಮಿನಲ್ ವಕೀಲರು, ಅಂದಿನ ಮೈಸೂರು ಪ್ರಜಾ ಪರಿಷತ್‌ನ ಸದಸ್ಯರೂ, ಸಮಾಜದಲ್ಲಿ ಗಣ್ಯರೂ, ಕಾನೂನಿನಲ್ಲಿ  ಪಂಡಿತರೂ, ಶ್ರದ್ಧಾವಂತ ಬ್ರಾಹ್ಮಣರೂ ಆಗಿದ್ದರು. ಅವರಿಗೆ ಮನೆ ತುಂಬ ಮಕ್ಕಳು, ಎಲ್ಲಕೊಲೆಯಾಗಿ ಹೋದರೂ, ಒಬ್ಬ ಹುಡುಗಿ ಉಳಿದುಕೊಂಡು ಬಿಟ್ಟಳು. ಕೊಲೆಯ ಭೀಭತ್ಸ ಕಂಡ ಹುಡುಗಿ ಮಾನಸಿಕವಾಗಿ ಘಾಸಿಗೊಂಡಳಾ? ಆಕೆ ಕೆಲಕಾಲ ಗಂಡಸಿನ ವೇಷ ತೊಟ್ಟು ಓಡಾಡುತ್ತಿದ್ದಳಂತೆ ಎಂಬ ಮಾತೂ ಕೇಳಿ ಬಂತು.\u003cbr data-mce-fragment=\"1\"\u003e\u003cbr data-mce-fragment=\"1\"\u003eಹಳೆಯ ದಾಖಲೆಗಳನ್ನೆಲ್ಲ ತಡಕಿ ಶ್ರೀನಿವಾಸ ಅಯ್ಯಂಗಾರರ ಪೂರ್ವತಿಹಾಸ ಬಗೆದು, ಹಂತಕರ ಊರಿಗೂ ಹೋಗಿ, ಅಲ್ಲಿ ಇನ್ನೂ ಬದುಕಿರುವ ಅವರ ಸಂಬಂಧಿಗಳನ್ನು ಮಾತನಾಡಿಸಿ, ಎಲ್ಲಕ್ಕಿಂತ ಮುಖ್ಯವಾಗಿ ಹಂತಕರನ್ನು ಬಂಧಿಸಿ ಅವರು ನೇಣುಗಂಬವೇರುವಂತೆ ಮಾಡಿದ ದಕ್ಷ ಪೊಲೀಸ್ ಅಧಿಕಾರಿಯನ್ನೂ ಮಾತನಾಡಿಸಿ ಅಪಾರವಾದ ಇಂಟರೆಸ್ಟಿಂಗ್ ಹಾಗೂ ಥ್ರಿಲ್ಲಿಂಗ್ ವಿವರಗಳನ್ನು ಸಂಗ್ರಹಿಸಿ, ಕ್ರೋಢೀಕರಿಸಿ ಪ್ರಕಟಿಸಿದ ಪುಸ್ತಕವಿದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಇಷ್ಟಾಗಿ ಕೊನೆಗೆ ಉಳಿಯುವ ಪ್ರಶ್ನೆಯೆಂದರೆ ಕ್ರಿಮಿನಲ್ ವಕೀಲರಾದ ಬೇಲೂರು ಶ್ರೀನಿವಾಸ ಅಯ್ಯಂಗಾರರೇ ಕೊಲೆ, ದರೋಡೆಗಳನ್ನು ಮಾಡಿಸುತ್ತಿದ್ದರಾ? ಒಂದು ಗುಕ್ಕಿನಲ್ಲಿ ಓದಿಕೊಳ್ಳಬಹುದಾದ ಪುಸ್ತಕವಿದು.\u003cbr data-mce-fragment=\"1\"\u003e\u003cbr data-mce-fragment=\"1\"\u003e-ರವಿ ಬೆಳಗೆರೆ\n\u003cdiv id=\"gtx-trans\" style=\"position: absolute; left: 461px; top: 284px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Ravi Belagere","offers":[{"title":"Default Title","offer_id":42316682854659,"sku":"HB00002131","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/md_5551234104443_171220201213086.jpg?v=1736917106"},{"product_id":"hello-collection-of-articles-ravi-belagere-kannada-book","title":"ಹಲೋ...!","description":"ರವಿ ಬೆಳಗೆರೆ!\u003cbr\u003eಅವರು ಕನ್ನಡಿಗರ ಮನೆಮಾತು, ಅತ್ಯಂತ ಹೆಚ್ಚು ಬರೆದ, ಓದಿಸಿಕೊಳ್ಳುವ ಲೇಖಕ, ಪತ್ರಕರ್ತ, ಕಾದಂಬರಿಕಾರ, ಅನುವಾದಕ, ಅವರ ಒಂದು ಹೊಸ ಪುಸ್ತಕ ಬಿಡುಗಡೆಯಾಗುತ್ತದೆ ಅಂದರೆ ಸಾವಿರಾರು ಓದುಗರು ಕರ್ನಾಟಕದಾದ್ಯಂತ ಅದಕ್ಕಾಗಿ ಕಾಯುತ್ತಿದ್ದರು. ಅವರು ಒಂದು ವಿಷಯ, ಒಂದು ಸಂಗತಿ ಅಥವಾ ಒಂದು ಸಬ್ಜೆಕ್ಟ್ ಇಟ್ಟುಕೊಂಡು ಬರೆದವರಲ್ಲ. ಮನುಷ್ಯ ಸಂಬಂಧಗಳು ಅವರ ಆಸಕ್ತಿಯ ಪ್ರಥಮ ವಿಷಯ. ಆದರೆ ಅವರು ಅತ್ಯಂತ ಆಸಕ್ತಿಯಿಂದ ದೇಶ, ಇತಿಹಾಸ, ಯುದ್ಧಗಳ ಬಗ್ಗೆ ಬರೆದಿದ್ದಾರೆ. ಯುದ್ಧಗಳ ಪ್ರತ್ಯಕ್ಷ ವರದಿ ಮಾಡಿದ್ದಾರೆ. ಕಾರ್ಗಿಲ್ ಕದನ ಭೂಮಿ, ಅಫಘನಿಸ್ತಾನ ಮತ್ತು ಪುಲ್ವಾಮಾದ ಮಹಾ ಯುದ್ಧರಂಗದಲ್ಲಿ ಓಡಾಡಿದ್ದಾರೆ. ಅಂತೆಯೇ ಅವರ ಕಾದಂಬರಿಗಳಲ್ಲಿ ಪ್ರೀತಿ, ತಂತ್ರ, ಅಂಡರ್ ವರ್ಲ್ಡ್ ರಾಜಕಾರಣ, ಕಾಮ, ಟೆರರಿಸಂ ವಿಜೃಂಭಿಸಿವೆ. ಅವರ ತನಿಖಾ ವರದಿ ಪುಸ್ತಕವಾಗಿದೆ. ಮೂಲತಃ ರವಿ ಬೆಳಗೆರೆ ಕಥೆಗಾರರೆಂದೇ ಹೆಸರಾದವರು. ಅವರು ತಮ್ಮ ಇಷ್ಟದ ಕವಿ ಸಾಹಿರ್‌ ಲೂಧಿಯಾನವಿಯಿಂದ ಹಿಡಿದು ತೆಲುಗು ಲೇಖಕ ಗುಡಿಪಾಟು ವೆಂಕಟ ಚಲಂ ತನಕ ಅನೇಕರ ಜೀವನ ಕಥನ ಬರೆದಿದ್ದಾರೆ. ಅನುವಾದಿಸಿದ್ದಾರೆ. ರವಿ ಬೆಳಗೆರೆ ಪ್ರತೀವಾರ ಬರೆಯುವ 'ಹಲೋ' ಅಂಕಣ ಹಾಯ್ ಬೆಂಗಳೂರ್!' ಪತ್ರಿಕೆಯ ಜೀವಾಳವಾಗಿತ್ತು. ಅನೇಕ ರಾಜಕಾರಣಿಗಳ ಬದುಕಿನ ಆಗು-ಹೋಗುಗಳನ್ನು ತೆರೆದಿಡುತ್ತಾ ಹೋಗುವ ಈ ಅಂಕಣ ರಾಜಕಾರಣಿಗಳಿಗೆ ಬದುಕಿನ ಪಾಠವಾಗಿತ್ತು. ಈಗ ಈ ಅಂಕಣ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದೆ. ಎಂದಿನಂತೆ ಒಪ್ಪಿಕೊಳ್ಳಿ.\u003cbr\u003e\u003cbr\u003e- ಭಾವನಾ ಬೆಳಗೆರೆ","brand":"Ravi Belagere","offers":[{"title":"Default Title","offer_id":44261119459587,"sku":"HB00004335","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/2_1_7.jpg?v=1696674212"},{"product_id":"rajaneeshana-hudugiyaru-articles-ravi-belagere-kannada-book","title":"ರಜನೀಶನ ಹುಡುಗಿಯರು","description":"\u003cp\u003eರವಿ ಬೆಳಗೆರೆ! ಅವರು ಕನ್ನಡಿಗರ ಮನೆಮಾತು. ಅತ್ಯಂತ ಹೆಚ್ಚು ಬರೆದ, ಓದಿಸಿಕೊಳ್ಳುವ ಲೇಖಕ, ಪತ್ರಕರ್ತ, ಕಾದಂಬರಿಕಾರ, ಅನುವಾದಕ. ಅವರ ಒಂದು ಹೊಸ ಪುಸ್ತಕ ಬಿಡುಗಡೆಯಾಗುತ್ತದೆ ಅಂದರೆ ಸಾವಿರಾರು ಓದುಗರು ಕರ್ನಾಟಕದಾದ್ಯಂತ ಅದಕ್ಕಾಗಿ ಕಾಯುತ್ತಿದ್ದರು. ಅವರು ಒಂದು ವಿಷಯ, ಒಂದು ಸಂಗತಿ ಅಥವಾ ಒಂದು ಸಪ್ಟೆಕ್ಟ್ ಇಟ್ಟುಕೊಂಡು ಬರೆದವರಲ್ಲ. ಮನುಷ್ಯ ಸಂಬಂಧಗಳು ಅವರ ಆಸಕ್ತಿಯ ಪ್ರಥಮ ವಿಷಯ. ಆದರೆ ಅವರು ಅತ್ಯಂತ ಆಸಕ್ತಿಯಿಂದ ದೇಶ, ಇತಿಹಾಸ, ಯುದ್ಧಗಳ ಬಗ್ಗೆ ಬರೆದಿದ್ದಾರೆ. ಯುದ್ಧಗಳ ಪ್ರತ್ಯಕ್ಷ ವರದಿ ಮಾಡಿದ್ದಾರೆ. ಕಾರ್ಗಿಲ್ ಕದನ ಭೂಮಿ, ಅಫಘನಿಸ್ತಾನ ಮತ್ತು ಪುಲ್ವಾಮಾದ ಮಹಾ ಯುದ್ಧರಂಗದಲ್ಲಿ ಓಡಾಡಿದ್ದಾರೆ. ಅಂತೆಯೇ ಅವರ ಕಾದಂಬರಿಗಳಲ್ಲಿ ಪ್ರೀತಿ, ತಂತ್ರ, ಅಂಡರ್‌ವರ್ಲ್, ರಾಜಕಾರಣ, ಕಾಮ, ಟೆರರಿಸಂ ವಿಜೃಂಭಿಸಿವೆ. ಅವರ ತನಿಖಾ ವರದಿ ಪುಸ್ತಕವಾಗಿದೆ. ಮೂಲತಃ ರವಿ ಬೆಳಗೆರೆ ಕಥೆಗಾರರೆಂದೇ ಹೆಸರಾದವರು. ಅವರು ತಮ್ಮ ಇಷ್ಟದ ಕವಿ ಸಾಹಿರ್ ಲೂಧಿಯಾನವಿಯಿಂದ ಹಿಡಿದು ತೆಲುಗು ಲೇಖಕ ಗುಡಿಪಾಟು ವೆಂಕಟ ಚಲಂ ತನಕ ಅನೇಕರ ಜೀವನ ಕಥನ ಬರೆದಿದ್ದಾರೆ, ಅನುವಾದಿಸಿದ್ದಾರೆ. ರವಿ ಬೆಳಗೆರೆ ಪ್ರತೀವಾರ ಬರೆಯುತ್ತಿದ್ದ 'ರಜನೀಶನ ಹುಡುಗಿಯರು' ಈ ಅಂಕಣ ಈಗ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಎಂದಿನಂತೆ ಒಪ್ಪಿಕೊಳ್ಳಿ.\u003cbr\u003e\u003cbr\u003e-ಭಾವನಾ ಬೆಳಗೆರೆ\u003c\/p\u003e","brand":"Ravi Belagere","offers":[{"title":"Default Title","offer_id":44753693114627,"sku":"HB00004653","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_2_d539a525-864a-4ef4-a4fc-94d37e7a24d3.jpg?v=1709040558"},{"product_id":"arti-novel-ravi-belagere-kannada-book","title":"ಅರ್ತಿ","description":"\u003cp\u003eರವಿ ಬೆಳಗೆರೆ! ಅವರು ಕನ್ನಡಿಗರ ಮನೆಮಾತು. ಅತ್ಯಂತ ಹೆಚ್ಚು ಬರೆದ, ಓದಿಸಿಕೊಳ್ಳುವ ಲೇಖಕ, ಪತ್ರಕರ್ತ, ಕಾದಂಬರಿಕಾರ, ಅನುವಾದಕ. ಅವರ ಒಂದು ಹೊಸ ಪುಸ್ತಕ ಬಿಡುಗಡೆಯಾಗುತ್ತದೆ ಅಂದರೆ ಸಾವಿರಾರು ಓದುಗರು ಕರ್ನಾಟಕದಾದ್ಯಂತ ಅದಕ್ಕಾಗಿ ಕಾಯುತ್ತಿದ್ದರು. ಅವರು ಒಂದು ವಿಷಯ, ಒಂದು ಸಂಗತಿ ಅಥವಾ ಒಂದು ಸಪ್ಟೆಕ್ಟ್ ಇಟ್ಟುಕೊಂಡು ಬರೆದವರಲ್ಲ. ಮನುಷ್ಯ ಸಂಬಂಧಗಳು ಅವರ ಆಸಕ್ತಿಯ ಪ್ರಥಮ ವಿಷಯ. ಆದರೆ ಅವರು ಅತ್ಯಂತ ಆಸಕ್ತಿಯಿಂದ ದೇಶ, ಇತಿಹಾಸ, ಯುದ್ಧಗಳ ಬಗ್ಗೆ ಬರೆದಿದ್ದಾರೆ. ಯುದ್ಧಗಳ ಪ್ರತ್ಯಕ್ಷ ವರದಿ ಮಾಡಿದ್ದಾರೆ. ಕಾರ್ಗಿಲ್ ಕದನ ಭೂಮಿ, ಅಫಘನಿಸ್ತಾನ ಮತ್ತು ಪುಲ್ವಾಮಾದ ಮಹಾ ಯುದ್ಧರಂಗದಲ್ಲಿ ಓಡಾಡಿದ್ದಾರೆ. ಅಂತೆಯೇ ಅವರ ಕಾದಂಬರಿಗಳಲ್ಲಿ ಪ್ರೀತಿ, ತಂತ್ರ, ಅಂಡರ್‌ವರ್ಲ್, ರಾಜಕಾರಣ, ಕಾಮ, ಟೆರರಿಸಂ ವಿಜೃಂಭಿಸಿವೆ. ಅವರ ತನಿಖಾ ವರದಿ ಪುಸ್ತಕವಾಗಿದೆ. ಮೂಲತಃ ರವಿ ಬೆಳಗೆರೆ ಕಥೆಗಾರರೆಂದೇ ಹೆಸರಾದವರು. ಅವರು ತಮ್ಮ ಇಷ್ಟದ ಕವಿ ಸಾಹಿರ್ ಲೂಧಿಯಾನವಿಯಿಂದ ಹಿಡಿದು ತೆಲುಗು ಲೇಖಕ ಗುಡಿಪಾಟು ವೆಂಕಟ ಚಲಂ ತನಕ ಅನೇಕರ ಜೀವನ ಕಥನ ಬರೆದಿದ್ದಾರೆ, ಅನುವಾದಿಸಿದ್ದಾರೆ. ರವಿ ಬೆಳಗೆರೆ ಬರೆದ 'ಅರ್ತಿ' ಸೈಕಿಯಾಟ್ರಿಕ್‌ ಸಪ್ಟೆಕ್ಸ್‌ನ ಕುರಿತಾಗಿದ್ದು, ಇದು ಸೈಕಾಲಜಿ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಪುಸ್ತಕವಾಗಿರುತ್ತದೆ. ಈ ಪುಸ್ತಕ ಮೂವತ್ತೈದು ವರ್ಷಗಳ ನಂತರ ಮರು ಮುದ್ರಣಗೊಂಡಿದೆ. ಎಂದಿನಂತೆ ಒಪ್ಪಿಕೊಳ್ಳಿ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಭಾವನಾ ಬೆಳಗೆರೆ.\u003cbr\u003e\u003cbr\u003e\u003cbr\u003e\u003c\/p\u003e","brand":"Ravi Belagere","offers":[{"title":"Default Title","offer_id":44763466989827,"sku":"HB00004654","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/eaad00028c15e4d63324cad8ef3f1e26.jpg?v=1709190240"},{"product_id":"dangeya-dinagalu-novel-ravi-belagere-kannada-book","title":"ದಂಗೆಯ ದಿನಗಳು","description":"\u003cp\u003eಕಳೆದ ಕೆಲವು ದಶಕಗಳಿಂದ ಜೋಯಿಡಾದ ಕಾಡಿನ ಮಧ್ಯೆ ಒಂದು ಬಂಗಲೆ ಕಟ್ಟಿಕೊಂಡು ಬದುಕುತ್ತಿರುವವರು ಮನೋಹರ ಮಳಗಾಂವಕರ್, ಅವರಿಗೀಗ ತೊಂಬತ್ತೈದು ವರ್ಷ. ಅವರು ನಿವೃತ್ತ ಸೈನ್ಯಾಧಿಕಾರಿ. ಹಾಗೆ ಕಾಡಿನ ಮಧ್ಯೆ ಮನೆ ಕಟ್ಟಿಕೊಂಡು ಒಬ್ಬಂಟಿಯಾಗಿ ಕುಳಿತು ಅಧ್ಯಯನ ಮಾಡುತ್ತ, ಇತಿಹಾಸದ ಬಗ್ಗೆ ಧೇನಿಸುತ್ತಾ, ಬರೆಯುತ್ತ ಬದುಕುವುದು ಎಷ್ಟು ಚೆಂದ! ನನ್ನಲ್ಲಿ ಅಂಥದೊಂದು ಮೋಹ ಹುಟ್ಟಿಸಿದವರೇ ಮಳಗಾಂವಕರ್. ಅವರು ಎಂಥ ಒಳ್ಳೆಯ ಬರಹಗಾರ ಎಂಬುದು, ಈ ಪುಸ್ತಕ ಓದಲಾರಂಭಿಸುತ್ತಿದ್ದಂತೆಯೇ ನಿಮಗೆ ಗೊತ್ತಾಗುತ್ತದೆ. ಮನುಷ್ಯನ ನಿಸ್ಸಹಾಯಕತೆ, ಪ್ರತಿಭಟನೆ, ಆಸೆ, ಕಾಮ, ನಿಷ್ಠೆ, ಕ್ರೌರ್ಯ, ಮೋಸ, ಸಣ್ಣತನ, ಔದಾರ್ಯ ಹೀಗೆ ಎಲ್ಲ ಮುಖಗಳನ್ನೂ ಒಂದು ರಟ್ಟಿನಡಿ ಚಿತ್ರಿಸಿಕೊಟ್ಟದ್ದೇ ಆದರೆ, ಅದರ ಹೆಸರು \u003cbr\u003e'ದಂಗೆಯ ದಿನಗಳು'\u003c\/p\u003e\n\u003cp\u003e ಸಿಪಾಯಿ ದಂಗೆಯೆಂದೂ, ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂದೂ ಕರೆಯಲ್ಪಟ್ಟ 1857ರ ದಂಗೆಯ ಅಪರೂಪದ ವಿವರಗಳನ್ನು ನಿಮಗಾಗಿ ಕನ್ನಡಕ್ಕೆ ತರ್ಜುಮೆ ಮಾಡಿಕೊಟ್ಟಿದ್ದೇನೆ. ಒಪ್ಪಿಸಿಕೊಳ್ಳಬೇಕು.\u003c\/p\u003e\n\u003cp\u003eರವಿ ಬೆಳಗೆರೆ\u003c\/p\u003e\n\u003cp\u003e\u003cbr\u003e\u003cbr\u003e\u003cbr\u003e\u003c\/p\u003e","brand":"Ravi Belagere","offers":[{"title":"Default Title","offer_id":45289407414531,"sku":"HB00004770","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/DangeyaDinagaluBackPage_2.jpg?v=1714286809"},{"product_id":"baba-bedroom-hathyakaanda-story-ravi-belagere-kannada-book","title":"ಬಾಬಾ ಬೆಡ್ ರೂಂ ಹತ್ಯಾಕಾಂಡ","description":"\u003cp\u003eಸಾಯಿಬಾಬಾ ಕೇವಲ ಕೈಚಳಕ ತೋರುವ ಯಕ್ಷಿಣಿಗಾರನಾಗಿದ್ದಿದ್ದರೆ ಜನಮೆಚ್ಚುಗೆ ಗಳಿಸುತ್ತಿದ್ದ. ಒಬ್ಬ ಸಂತನಾಗಿದ್ದರೆ, ಆಧ್ಯಾತ್ಮಕ್ಕೆ, ಗೊಡ್ಡು ಹರಟೆಗೆ ಕೊರತೆಯಿಲ್ಲದ ಈ ನಾಡಿನಲ್ಲೂ ಗೌರವಕ್ಕೆ ಪಾತ್ರನಾಗುತ್ತಿದ್ದ. ಆತ ಗ್ರಾಮಗಳಿಗೆ ತಲುಪಿಸಿದ ನೀರು, ಕಟ್ಟಿಸಿದ ಆಸ್ಪತ್ರೆಗಳು, ಶಾಲೆಗಳು, ಸ್ಥಾಪಿಸಿದ ವಿಶ್ವ - ವಿದ್ಯಾಲಯ ನಿಜಕ್ಕೂ ಮೆಚ್ಚಬಹುದಾದಂಥ ಸಂಗತಿಗಳೇ. ಸೂಪ‌ರ್ ಸ್ಪೆಷಾಲಿಟಿ ಹಾಸ್ಪಿಟಲ್ ಮಾತ್ರ ಸದ್ಯಕ್ಕೆ ಸಜೀವ ನರಕದಂತಿದೆ. ಅದು ಒತ್ತಟ್ಟಿಗಿರಲಿ: ಆದರೆ ಸಾಯಿಬಾಬಾ ಮೂಲತಃ ಒಬ್ಬ ವಂಚಕ, ಶಿಶುಕಾಮಿ ಮತ್ತು ಒರಿಜಿನಲ್ ಆದ ದಡ್ಡ. ಅಂಥವನ ಬೆಡ್ ರೂಮಿನಲ್ಲಿ ಘೋರಾತಿಘೋರ ಹತ್ಯೆಗಳು ನಡೆದರೆ ಭಾರತದ ಪ್ರಧಾನಿಯಿಂದ ಹಿಡಿದು ಪುಟ್ಟಪರ್ತಿಯ ಸಬ್ ಇನ್ಸ್‌ಪೆಕ್ಟರನ ತನಕ ಎಲ್ಲರೂ ಆತನನ್ನು ರಕ್ಷಿಸಲು ಚಡಪಡಿಸಿದರು. ಇಂಥ ಕೆಲಸ ಬೇರೆ ಯಾವ ದೇಶದಲ್ಲೂ ನಡೆದಿರಲಾರದು. ಇಲ್ಲಿ ಮಾತ್ರ ನಡೆಯಲು ಸಾಧ್ಯ: ಏಕೆಂದರೆ ಇದು ಭಾರತ.\u003c\/p\u003e\n\u003cp\u003e-ರವಿ ಬೆಳಗೆರೆ\u003c\/p\u003e\n\u003cp\u003e\u003cbr\u003e\u003cbr\u003e\u003cbr\u003e\u003c\/p\u003e","brand":"Ravi Belagere","offers":[{"title":"Default Title","offer_id":45289618374915,"sku":"HB00004771","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BabaBedroomHathyakaanda.jpg?v=1714287718"},{"product_id":"bottom-item-collection-of-articles-ravi-belagere-kannada-book","title":"ಬಾಟಮ್ ಐಟಮ್","description":"\u003cp\u003eಗಂಡ ಹೆಂಡತಿಯ ಜಗಳದಿಂದ ಹಿಡಿದು, ನೌಕರಿಗೊಂದು ಅರ್ಜಿ ಬರೆಯುವುದು ಹೇಗೆ ಅಂತ ವಿವರಿಸುವ ತನಕ ಎಲ್ಲ ಸಂಗತಿಗಳನ್ನು ತೆಕ್ಕೆಗೆ ತೆಗೆದುಕೊಂಡ ಪೇಜಿನ ಬುಡದ ಪುಟ್ಟ ಅಂಕಣ 'ಬಾಟಮ್ ಐಟಮ್'. ಎಷ್ಟೋಸಲ ನನ್ನ ರಣ ಗಂಭೀರ ಬರಹಗಳಾದ ಖಾಸ್‌ಬಾತ್, ಹಲೋಗಳಿಗಿಂತ ಹೆಚ್ಚಿನ ಪ್ರತಿಕ್ರಿಯೆ ತೆಗೆದುಕೊಂಡ ಅಂಕಣವಿದು. ಏನು ತಪ್ಪಿದರೂ, ದೇವರ ನೆತ್ತಿಯ ಮೇಲೆ ಹೂವು ತಪ್ಪುವುದಿಲ್ಲ ಎಂಬಂತೆ-ಈ ಬಾಟಮ್ ಐಟಮ್ಮೊಂದು ಇಲ್ಲದೇ ಹೋದರೆ, ಆ ಸಂಚಿಕೆ ಪೂರ್ಣವಾಗುವುದೇ ಇಲ್ಲ. ಪತ್ರಿಕೆಯ ಮೂರನೆಯ ಪುಟಕ್ಕೊಂದು ಆಕಾರ ಸಿಗುವುದಿಲ್ಲ. ದೊಡ್ಡ ಅಂಗಿ, ಗಿಡ್ಡ ಲಂಗ ಧರಿಸಿ ನಿಂತಿರುವ ತುಂಟ ಹುಡುಗಿಯ ಹಾಗೆ ಕಾಣುವ 'ಹಾಯ್ ಬೆಂಗಳೂರ್!' ನ ಮೂರನೇ ಪುಟದ ಈ ಗಿಡ್ಡ ಲಂಗವೇ 'ಬಾಟಮ್ ಐಟಮ್.'\u003c\/p\u003e\n\u003cp\u003e-ರವಿ ಬೆಳಗೆರೆ\u003c\/p\u003e\n\u003cp\u003e\u003cbr\u003e\u003cbr\u003e\u003cbr\u003e\u003c\/p\u003e","brand":"Ravi Belagere","offers":[{"title":"Default Title","offer_id":45289696985347,"sku":"HB00004772","price":220.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BottomItem.jpg?v=1714289473"},{"product_id":"bottom-item-2-collection-of-articles-ravi-belagere-kannada-book","title":"ಬಾಟಮ್ ಐಟಮ್ -2","description":"\u003cp\u003eಗಂಡ ಹೆಂಡತಿಯ ಜಗಳದಿಂದ ಹಿಡಿದು, ನೌಕರಿಗೊಂದು ಅರ್ಜಿ ಬರೆಯುವುದು ಹೇಗೆ ಅಂತ ವಿವರಿಸುವ ತನಕ ಎಲ್ಲ ಸಂಗತಿಗಳನ್ನು ತೆಕ್ಕೆಗೆ ತೆಗೆದುಕೊಂಡ ಪೇಜಿನ ಬುಡದ ಪುಟ್ಟ ಅಂಕಣ 'ಬಾಟಮ್ ಐಟಮ್'. ಎಷ್ಟೋಸಲ ನನ್ನ ರಣ ಗಂಭೀರ ಬರಹಗಳಾದ ಖಾಸ್‌ಬಾತ್, ಹಲೋಗಳಿಗಿಂತ ಹೆಚ್ಚಿನ ಪ್ರತಿಕ್ರಿಯೆ ತೆಗೆದುಕೊಂಡ ಅಂಕಣವಿದು. ಏನು ತಪ್ಪಿದರೂ, ದೇವರ ನೆತ್ತಿಯ ಮೇಲೆ ಹೂವು ತಪ್ಪುವುದಿಲ್ಲ ಎಂಬಂತೆ-ಈ ಬಾಟಮ್ ಐಟಮ್ಮೊಂದು ಇಲ್ಲದೇ ಹೋದರೆ, ಆ ಸಂಚಿಕೆ ಪೂರ್ಣವಾಗುವುದೇ ಇಲ್ಲ. ಪತ್ರಿಕೆಯ ಮೂರನೆಯ ಪುಟಕ್ಕೊಂದು ಆಕಾರ ಸಿಗುವುದಿಲ್ಲ. ದೊಡ್ಡ ಅಂಗಿ, ಗಿಡ್ಡ ಲಂಗ ಧರಿಸಿ ನಿಂತಿರುವ ತುಂಟ ಹುಡುಗಿಯ ಹಾಗೆ ಕಾಣುವ 'ಹಾಯ್ ಬೆಂಗಳೂರ್!' ನ ಮೂರನೇ ಪುಟದ ಈ ಗಿಡ್ಡ ಲಂಗವೇ 'ಬಾಟಮ್ ಐಟಮ್.'\u003c\/p\u003e\n\u003cp\u003e-ರವಿ ಬೆಳಗೆರೆ\u003c\/p\u003e\n\u003cp\u003e\u003cbr\u003e\u003cbr\u003e\u003cbr\u003e\u003c\/p\u003e","brand":"Ravi Belagere","offers":[{"title":"Default Title","offer_id":45289723363587,"sku":"HB00004773","price":260.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BottomItem-2.jpg?v=1714290485"},{"product_id":"paapigala-lokadalli-underworld-stories-ravi-belagere-kannada-book","title":"ಪಾಪಿಗಳ ಲೋಕದಲ್ಲಿ","description":"\u003cp\u003eಈ ಪುಸ್ತಕದ ವ್ಯಾಪ್ತಿ ದೊಡ್ಡದು. ನಾನು ಸರಿಸುಮಾರು ಹತ್ತು ವರ್ಷ ಒಬ್ಬ ಪತ್ರಕರ್ತನಾಗಿ ಭೂಗತ ಲೋಕದಲ್ಲಿ ಕಂಡದ್ದನ್ನ, ಕೇಳಿದ್ದನ್ನ ಇಲ್ಲಿ ದಾಖಲಿಸಿದ್ದೇನೆ. ಕೋಳಿ ಫಯಾಜ್‌ನನ್ನು ಶಿವಾಜಿನಗರದ ಕಸಾಯಿ ಅಡ್ಡೆಯಲ್ಲಿ ಮಾತನಾಡಿಸಿದುದರಿಂದ ಆರಂಭವಾಗಿ, ಮುತ್ತಪ್ಪ ರೈಯನ್ನು ದುಬೈನಲ್ಲಿ ಭೇಟಿಯಾಗುವ ತನಕ ಪಾಪಿಗಳ ಲೋಕದ ನನ್ನ ಯಾತ್ರೆ ಸಾಗಿ ಬಂದಿದೆ. ಗ್ಯಾಂಗ್‌ವಾರ್‌ಗಳು, ಒಳಗೊಳಗೇ ನಡೆದ ಮಿತ್ರದ್ರೋಹಗಳು, ಪೊಲೀಸರ ಕಠೋರ ನಿರ್ಧಾರಗಳು, ಬದುಕು ಬದಲಿಸಿಕೊಂಡ ಮುಖವಾಡ ಧರಿಸಿಕೊಂಡೇ ಭೂಗತ ಜೀವನ ಮುಂದುವರೆಸಿದವರ ಕತೆಗಳು, ಅವರ ಭಯಗಳು, ಅವರ ಪುಕ್ಕಲು, ಅವರ ವೀರಾವೇಶ, ಅವರ ದುಃಖ-ಬಿಕ್ಕಳಿಕೆಗಳು, ಅವರ ಹತಾಶೆ-ನಿರಾಶೆಗಳು- ಎಲ್ಲವೂ ಈ ಪುಸ್ತಕದಲ್ಲಿ ದಾಖಲಾಗಿವೆ.\u003cbr\u003e\u003c\/p\u003e\n\u003cp\u003e-ರವಿ ಬೆಳಗೆರೆ\u003c\/p\u003e\n\u003cp\u003e\u003cbr\u003e\u003cbr\u003e\u003cbr\u003e\u003c\/p\u003e","brand":"Ravi Belagere","offers":[{"title":"Default Title","offer_id":45289773957379,"sku":"HB00004774","price":410.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PaapigalLokadalli.jpg?v=1714293306"},{"product_id":"raj-leela-vinoda-biography-ravi-belagere-kannada-book","title":"ರಾಜ್ ಲೀಲಾ ವಿನೋದ","description":"\u003cp\u003eಅವರು ಹಿರಿಯರು. ತೀರಿಕೊಂಡಿದ್ದಾರೆ. ರಾಜಕುಮಾರ್ ಬಗ್ಗೆ ನನಗೆ ಪ್ರೀತಿಯಿದೆ. ಆರಾಧನೆ ಇಲ್ಲ. ನಾನು ವೀರಾಭಿಮಾನಿಯೂ ಅಲ್ಲ. ಅತ್ತ ದಿಲೀಪ್ ಕುಮಾರ್ ಇದ್ದರೆ, ಇಲ್ಲಿ ರಾಜಕುಮಾರ್ ಅಷ್ಟೆ.\u003c\/p\u003e\n\u003cp\u003eಲೀಲಾವತಿಯವರಲ್ಲಿ ನಾನು ನನ್ನ ತಾಯಿಯನ್ನು ಕಾಣುತ್ತೇನೆ. ಅವರಿಗೀಗ ಎಂಬತ್ತು ವರ್ಷ\u003cspan style=\"font-size: 0.875rem;\"\u003eಹೃದಯ ಸಂಬಂಧಿ ಸಮಸ್ಯೆಗಳಿವೆ. \"ಅಮ್ಮಾ, ನೀನೂ ಈ ಹಂತದಲ್ಲಿ ಜನಕ್ಕೆ ಹೇಳಲಿಲ್ಲ ಅಂದ್ರೆ, ನನ್ನ ತಂದೆ ಯಾರೆಂದು ಹೇಳುತ್ತಾರೆ. ರವಿಯವರು ಮನೆಬಾಗಿಲ ತನಕ ಬಂದಿದ್ದಾರೆ. ನೀನು ಮಾತನಾಡು\" ಅಂದದ್ದು ವಿನೋರಾಜ್. ಆತ ರಾಜ್ ಮತ್ತು ಲೀಲಾವತಿಯವರ ಮಗ ಅಂತ ಯಾರೂ ಹೇಳಬೇಕಿಲ್ಲ. ಸಾಲಾಗಿ ನಿಲ್ಲಿಸಿದರೆ ನಾಲ್ಕೂ ಜನ ಅಣ್ಣ ತಮ್ಮಂದಿರಂತೆ ಕಾಣುತ್ತಾರೆ. ಆದರೆ ವಿನೋದ್‌ಗೆ ಉಳಿದ ಮೂವರು ಸೋದರರಿಗಿರುವ ಹಣ, ಭದ್ರತೆ, ಕೀರ್ತಿ- ಯಾವುದೂ ಇಲ್ಲ. He is a karma yogi. ತುಂಬ ದುಡಿಯುತ್ತಾರೆ. ಅವರ ತೋಟದ ತರಕಾರಿ ತಿನ್ನದವನೇ ಪಾಪಿ. ಅದನ್ನು ಮಾಡುವ ಒತ್ತಾಯ ಕೇವಲ ಲೀಲಮ್ಮ ಅವರದು.\u003c\/span\u003e\u003cbr\u003e\u003c\/p\u003e\n\u003cp\u003eಆಯ್ತು, ಲೀಲಾವತಿಯವರ ಬಾಯಿಂದಲೇ ಕೇಳಿಕೊಂಡು, ಅವರ ಈ 'ಜೀವನ ಕಥನ' ಬರೆದಿದ್ದೇನೆ. ಇದರಲ್ಲಿ ಒಂದಕ್ಷರ ಸುಳ್ಳಿಲ್ಲ. ಇದು ರಾಜಕುಮಾರ್, ಪಾರ್ವತಮ್ಮ ಅವರ ಬಗ್ಗೆ ಏನೇನೊ negative ಅಂಶಗಳಿರುವ ಪುಸ್ತಕವಲ್ಲ. It is not against him. ಆ ಕಾಲದ ಘಟನೆಗಳೇನಿವೆ- ಅವು ಮಾತ್ರ ಇಲ್ಲಿವೆ.\u003c\/p\u003e\n\u003cp\u003eಇದನ್ನು ಓದುವ ನೀವು ನನಗೊಂದು mail ಕಳಿಸಿದರೆ ಸಾಕು. ಅಭಿಪ್ರಾಯ ಸ್ಪಷ್ಟವಾಗಿರಲಿ. belagereravi@gmail.com ಗೆ ನೀವು ಅಭಿಪ್ರಾಯ ಕಳಿಸಿ. ಎಂದಿನಂತೆ ಓದುಗ ದೊರೆಗೆ ನಮಸ್ಕಾರಗಳು.\u003c\/p\u003e\n\u003cp\u003e-ರವಿ ಬೆಳಗೆರೆ\u003c\/p\u003e\n\u003cp\u003e\u003cbr\u003e\u003cbr\u003e\u003cbr\u003e\u003c\/p\u003e","brand":"Ravi Belagere","offers":[{"title":"Default Title","offer_id":45290073391363,"sku":"HB00004775","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/RajLeelaVinoda.jpg?v=1714295045"},{"product_id":"o-manase-collection-of-articles-ravi-belagere-kannada-book","title":"ಓ ಮನಸೇ","description":"\u003cp\u003eಅವರವರ ಭಾವಕ್ಕೆ, ಅವರವರ ದರುಶನಕ್ಕೆ ತಕ್ಕಂತೆ `ಕಾಣುವ ಸಾಧನೆ-ಸಿದ್ದಿಗಳ ದೈತ್ಯ ಪ್ರತಿಭೆ ಎಂಬುದು ಅಭಿಮಾನಿಗಳಿರಲೀ, ಅವರ ಶತ್ರುಗಳೂ ಒಪ್ಪುವ ಮಾತು. ಅಸಾಧಾರಣವೆನ್ನಿಸುವ ಎನರ್ಜಿಯುಳ್ಳ ಕನ್ನಡ ಬರಹಗಾರ. 100 ಪುಸ್ತಕ, 27 ವರ್ಷ ನಿರಂತರವಾಗಿ ಬಂದ 'ಹಾಯ್ ಬೆಂಗಳೂರ್!' ಪತ್ರಿಕೆ, “ಓ ಮನಸೇ...' ಪಾಕ್ಷಿಕ ಪತ್ರಿಕೆ, ಕ್ರೈಂ ಡೈರಿ, ಪ್ರಾರ್ಥನಾ ಶಾಲೆ, ರೇಡಿಯೋ ಕಾರ್ಯಕ್ರಮಗಳು, ಟೀವಿ ಕಾರ್ಯಕ್ರಮ, ಸಿನೆಮಾಗಳಲ್ಲಿ ನಟನೆ, ಸಿನೆಮಾಗಳಿಗೆ ಬರವಣಿಗೆ, ಯುದ್ಧಭೂಮಿಗಳಿಗೆ ಹೋಗಿ reporting ಹೀಗೆ ಒಬ್ಬ ಮನುಷ್ಯ ಇಷ್ಟೆಲ್ಲಾ ಕಾರ್ಯ ಮಾಡಲು, ಸಾಧಿಸಲು ಸಾಧ್ಯವೇ? ಪತ್ರಿಕೆ-ಸಾಹಿತ್ಯ ಕೃತಿಗಳ ಮೂಲಕ ಓದುಗರ ಪಾಲಿಗೆ ಅಚ್ಚರಿ-ಹೊಸ ಅನುಭವಗಳನ್ನು ಸೃಷ್ಟಿಸುವ ವಿಸ್ಮಯಗಳ ಸರದಾರ. 'ಓ ಮನಸೇ'ಯ ಕೆಲವೊಂದು ಭಾವಪೂರ್ಣ, ಬಾಳಿಗೆ ನಿಕಟವಾದ, ನೊಂದವರಿಗೆ ದಾರಿದೀಪವಾಗುವ ಸಾಂತ್ವನದಾಯಕ ಅಂಕಣ, ನಾನಾ ನಡವಳಿಕೆಗಳ, ಅನೇಕಾನೇಕ ಸ್ವಭಾವಗಳ, ವ್ಯಕ್ತಿತ್ವಗಳ ಕಥಾರೂಪಿ ಸ್ವಾರಸ್ಯದಿಂದಡಗಿರುವ, ಯಾವ ವಯಸ್ಸಿನವರಾದರೂ ಓದುವಂತಹ ಮನಸ್ಸು ಮನಸ್ಸಿನ ಅಂಕಣಗಳ ಪರೇಡ್.\u003c\/p\u003e\n\u003cp\u003e-ಭಾವನಾ ಬೆಳಗೆರೆ\u003c\/p\u003e\n\u003cp\u003e\u003cbr\u003e\u003cbr\u003e\u003cbr\u003e\u003c\/p\u003e","brand":"Ravi Belagere","offers":[{"title":"Default Title","offer_id":45290638246147,"sku":"HB00004776","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/omanase.jpg?v=1714397295"},{"product_id":"idli-vada-deadly-murder-murder-story-ravi-belagere-kannada-book","title":"ಇಡ್ಲಿ ವಡ ಡೆಡ್ಲಿ ಮರ್ಡರ್!","description":"\u003cp\u003eಇತ್ತೀಚೆಗೆ ನನ್ನ ಬಹುಕಾಲದ ಗೆಳೆಯರೂ, ಚಿತ್ರ ನಿರ್ಮಾಪಕರೂ, ರಾಜಕಾರಣಿಯೂ ಆದ ಮುನಿರತ್ನ ಭೇಟಿಯಾದಾಗ ಅಕಸ್ಮಾತ್ತಾಗಿ ಚರ್ಚೆಗೆ ಬಂದದ್ದು ಮದರಾಸಿನ 'ಶರವಣ ಭವನ' ಮಾಲೀಕ ಮಾಡಿಸಿದ ಪ್ರಿನ್ಸ್ ಶಾಂತಕುಮಾರ್‌ನ ಕೊಲೆಯ ಸಂಗತಿ. 'ಶರವಣ ಭವನ' ಹೊಟೇಲುಗಳು ಇವತ್ತು ಒಂದೆರಡಲ್ಲ : ನೂರಾರಿವೆ. ಲಂಡನ್ ಒಂದರಲ್ಲೇ ಅದರ ಹದಿನಾರು ಶಾಖೆಗಳಿವೆ. ಕೋಟ್ಯಂತರದ ವಹಿವಾಟು. ಅದರ ಮಾಲೀಕ ರಾಜಗೋಪಾಲ್ ಕೇವಲ ಒಬ್ಬ ಟೇಬಲ್ ಒರೆಸುವ ನೌಕರನಾಗಿ ಬದುಕು ಆರಂಭಿಸಿ ಕೋಟ್ಯಂತರ ಗಳಿಸಿದ ಸಾಧಕ. ಎರಡು ಮದುವೆ ಆಗಿತ್ತು. ಮಕ್ಕಳೂ ಬೆಳೆದು ನಿಂತಿದ್ದರು. ಆದರೆ ಆಸೆಯ ಮಧ್ಯವಯಸ್ಕ ಮೂರನೆಯ ಹುಡುಗಿಗಾಗಿ ಕೈ ಚಾಚಿದ. ಅದು ಸಾಧ್ಯವಾಗದೆ ಇದ್ದಾಗ ಆ ಹುಡುಗಿಯ ಗಂಡನನ್ನೇ ಕೊಲೆ ಮಾಡಿಸಿಬಿಟ್ಟ.\u003c\/p\u003e\n\u003cp\u003eಮುಂದೇನಾಯಿತು?\u003c\/p\u003e\n\u003cp\u003eಅದರ ಪೂರ್ತಿ ವಿವರ ಚಕಿತಗೊಳಿಸುವ ರೀತಿಯಲ್ಲಿದೆ, ಓದಿಕೊಳ್ಳಿ :\u003cbr\u003e'ಇಡ್ಲಿ ವಡ ಡೆಡ್ಲಿ ಮರ್ಡ‌ರ್!'\u003c\/p\u003e\n\u003cp\u003e-ಭಾವನಾ ಬೆಳಗೆರೆ\u003c\/p\u003e\n\u003cp\u003e\u003cbr\u003e\u003cbr\u003e\u003cbr\u003e\u003c\/p\u003e","brand":"Ravi Belagere","offers":[{"title":"Default Title","offer_id":45290653090051,"sku":"HB00004777","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/IdliVadaDeadlyMurder.jpg?v=1714298306"},{"product_id":"hai-kanda-swamygalu-collection-of-articles-ravi-belagere-kannada-book","title":"ಹಾಯ್ ಕಂಡ ಸ್ವಾಮಿಗಳು","description":"\u003cp\u003eಹಿಂದೂಧರ್ಮ, ಗೋರಕ್ಷಣೆ, ಕೇಸರಿ ಉಡುಪು, ಇದು ಈಗ ಭಾರತದಲ್ಲಿ ವಿಪರೀತವಾಗಿ ದುರುಪಯೋಗವಾಗುತ್ತಿರುವ ಮಾರಾಟದ ಸರಕುಗಳು. ಕಾವಿಯನ್ನು ತೊಟ್ಟು, ಹಿಂದೂ ಧರ್ಮ ಹಾಗೂ ಗೋರಕ್ಷಣೆಯ ಮುಖವಾಡ ಹೊತ್ತ ವ್ಯಕ್ತಿಯು ಯಾವುದೇ ಅಪರಾಧ ಮಾಡಿದರೂ ಮಾಫಿ. ಪೊಲೀಸ್ ಹಾಗೂ ನ್ಯಾಯಾಲಯಗಳಿಂದ ತಪ್ಪಿಸಿಕೊಳ್ಳಲು ಪ್ರಬಲವಾದ ಗುರಾಣಿಯಾಗಿ ಬಳಸಲ್ಪಡುತ್ತಿರುವ ಈ ಅಸ್ತ್ರಗಳನ್ನು ಯಾರೂ ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದರೆ ಧರ್ಮದ್ರೋಹಿ ಮತ್ತು ದೇಶದ್ರೋಹಿ ಎಂಬ ಪಟ್ಟ ಖಚಿತ! ಶುರುವಿನಿಂದಲೂ ಹಾಯ್! ಇಂತಹ ಪಟ್ಟಗಳನ್ನು ಹೊತ್ತು ನಕಲಿ ಕಾವಿಧಾರಿಗಳ ಮುಖವಾಡವನ್ನು ಬಯಲಿಗೆಳೆಯುತ್ತ ಬಂದಿದೆ. ಈ ಪುಸ್ತಕ ಕೂಡ ಅಂತಹದ್ದೇ ಒಂದು ಪ್ರಯತ್ನ. ಹಾಯ್ ಆರಂಭದಿಂದಲೂ ಇಲ್ಲಿಯವರೆಗೆ ಪ್ರಕಟಗೊಂಡ ವರದಿಗಳನ್ನು ಈ ಹೊತ್ತಿಗೆಯ ರೂಪದಲ್ಲಿ ಪ್ರಕಟಿಸುತ್ತಿದೆ. ನಿಮಗೆ ಮುಸ್ಲಿಂ ಮುಲ್ಲಾಗಳು, ಕ್ರಿಶ್ಚಿಯನ್ ಪಾದ್ರಿಗಳ ಅನಾಚಾರ ಕಾಣುವುದಿಲ್ಲವೆ? ಎಂಬ ಪ್ರಶ್ನೆಯನ್ನು ಬಹಳಷ್ಟು ಮಂದಿ ಕೇಳಿದ್ದಾರೆ. ಮುಸ್ಲಿಂ ಕುರಿತು ನಮ್ಮ ಪ್ರಕಾಶನ ಪ್ರಕಟಿಸಿದ 'ನೀನಾ ಪಾಕಿಸ್ತಾನ' ಮತ್ತು 'ಮುಸ್ಲಿಂ' ಎಂಬ ಪುಸ್ತಕ ಕನ್ನಡ ಸಾರಸತ್ವ ಲೋಕದಲ್ಲೊಂದು ದಾಖಲೆಯನ್ನೆ ನಿರ್ಮಿಸಿದೆ. ಇದು ನಿಮ್ಮ ಗಮನಕ್ಕಿರಲಿ. ಇಷ್ಟಕ್ಕೂ ಇದು ನಮ್ಮ ಧರ್ಮ. ನಮ್ಮ ಧರ್ಮದೊಳಗೆ ನುಸುಳಿರುವ ಕ್ರಿಮಿಗಳನ್ನು ನಾವೇ ಹೊಡೆದಟ್ಟಬೇಕು. ಗೀತಾಚಾರ್ಯ ಶ್ರೀಕೃಷ್ಣ ಹೇಳಿದ್ದು ಇದನ್ನೆ. ಧರ್ಮ ಸಂಸ್ಥಾಪನಾರ್ಥಯ ಸಂಭವಾಮಿ ಯುಗೇ ಯುಗೇ...\u003c\/p\u003e\n\u003cp\u003eI ಭಾವನಾ ಬೆಳಗೆರೆ\u003c\/p\u003e\n\u003cp\u003e\u003cbr\u003e\u003cbr\u003e\u003cbr\u003e\u003c\/p\u003e","brand":"Ravi Belagere","offers":[{"title":"Default Title","offer_id":45839153070339,"sku":"HB00004914","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HaiKandaSwamigalu.jpg?v=1723546899"},{"product_id":"hagari-teerada-hantakaru-real-story-of-feudal-killing-ravi-belagere-kannada-book","title":"ಹಗರೀ ತೀರದ ಹಂತಕರು","description":"\u003cp\u003eಆತ ಕುಳಿತಿದ್ದ ಕಾರು ಹಗರಿ ಸೇತುವೆಗೆ ತೀರ ಹತ್ತಿರದಲ್ಲಿ ನಿಂತಿತ್ತು. ಆನತಿ ದೂರದಲ್ಲಿ ಗಿಳಿ ಮಾರ್ಕಿನ ಗವರ್ನಮೆಂಟು ಬಸ್ಸು ಬರುತ್ತಿದೆಯೆಂದು ಖಚಿತವಾದ ತಕ್ಷಣ, ಆತ ಇಶಾರೆ ಮಾಡಿದ. ಕಾರು ಸೇತುವೆಗೆ ಅಡ್ಡವಾಗಿ ನಿಂತುಬಿಟ್ಟಿತು. ಗಿಳಿ ಮಾರ್ಕಿನ ಸರ್ಕಾರಿ ಬಸ್ಸು ಗಕ್ಕನೆ ನಿಂತಿತು. ಆತ ಸರಕ್ಕನೆ ಬಸ್ಸಿನೊಳಕ್ಕೆ ಹತ್ತಿ ಏನೇನೂ ಅವಸರವಿಲ್ಲದೆ ಸರಿಸುಮಾರು ಒಂದೂ ಕಾಲು ಗಂಟೆ ಬಡಿದಾಡಿದ. ಮತ್ತು ನಾಲ್ಕು ಹೆಣಗಳನ್ನು ನೆಲಕ್ಕೆ ಕೆಡವಿದವನೇ ಬಸ್ಸಿಳಿದು ಹೊರಟು ಹೋದ. ಇವತ್ತಿಗೂ ಅವನ ಕಣ್ಣುಗಳಲ್ಲಿ ಹಳೆಯ ನೆತ್ತರು ಹೆಪ್ಪುಗಟ್ಟಿದಂತಿದೆ. ಆ ಹುರಿಮೀಸೆಯ ಆಳದಲ್ಲೆಲ್ಲೋ ಒಂದು ಆಕಳಿಕೆ ಬಾಕಿ ಉಳಿದಂತಿದೆ. ಈತನ ಕೈಗಳಲ್ಲಿ ಕುಡುಗೋಲು ಒಂದು ರಾತ್ರಿಯಿಡೀ ರುದ್ರವೀಣೆಯಂತೆ ನುಡಿದಿತ್ತು. ಬೆಳಕು ಹರಿದಾಗ ಎಣಿಕೆಗೆ ಸಿಕ್ಕ ಶವಗಳ ಸಂಖ್ಯೆ ಆರು! ಅವತ್ತು ಗಣೇಶ ಹಬ್ಬ. ಅಂದ ಹಾಗೆ, ಈತನ ಹೆಸರು ಸುಗ್ರೀವುಡು! ಕಣ್ಣೊಂದು ಅಲ್ಲೇ ಕಳಚಿ ಬೀಳದೆ ಹೋಗಿದ್ದಿದ್ದರೆ, ಈ ಹುಡುಗ ಖಂಡಿತವಾಗ್ಯೂ ಬಡಿದಾಡಿ ಬದುಕುಳಿಯುತ್ತಿದ್ದ. ಆದರೆ ಜೀಪಿನ ಮೇಲೆಯೇ ಸಿಡಿದ ಬಾಂಬು ಈ ಹುಡುಗನ ಕಣ್ಣುಗಳೆರಡನ್ನೂ ಕಳಚಿ ಹಾಕಿತು. ಆಮೇಲೂ ಕುರುಡುಗಣ್ಣಲ್ಲೇ ಶತಾಯಗತಾಯ ಬಡಿದಾಡಿದ ಈ ಹುಡುಗ ತೀರ ಪ್ರಾಣ ಹೋಗುವ ಘಳಿಗೆಯಲ್ಲಿ ಶತ್ರುವಿನ ತಲೆಗೂದಲನ್ನು ಗಪ್ಪನೆ ಹಿಡಿದಿದ್ದ. ಪ್ರಾಣ ಹೋದ ಮೇಲೂ ತನ್ನ ಹಿಡಿತ ಸಡಿಲಿಸಲಿಲ್ಲ. ಹಂತಕ ತನ್ನ ತಲೆಗೂದಲನ್ನು ಕುಯ್ದುಕೊಂಡು, ತಲೆ ಬಿಡಿಸಿಕೊಂಡು ಹೋಗಬೇಕಾಗಿ ಬಂತು!\u003c\/p\u003e\n\u003cp\u003e| ರವಿ ಬೆಳಗೆರೆ\u003c\/p\u003e\n\u003cp\u003e\u003cbr\u003e\u003cbr\u003e\u003cbr\u003e\u003c\/p\u003e","brand":"Ravi Belagere","offers":[{"title":"Default Title","offer_id":45839161786627,"sku":"HB00004915","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HagariTeeradaHantakaru.jpg?v=1723547835"},{"product_id":"gandhi-hatye-mattu-godse-analysis-of-political-assessinations-ravi-belagere-kannada-book","title":"ಗಾಂಧೀ ಹತ್ಯೆ ಮತ್ತು ಗೋಡ್ಸೆ","description":"\u003cp\u003eನೀವು ಕಾಣ್ಕಾಪು ಕಿತ್ತೆಸೆದು ಓದಿದ್ದೇ ಆದರೆ ನಮ್ಮ ಇತಿಹಾಸ ಪುರುಷರಲ್ಲಿದ್ದ ರಾಮ-ರಾವಣರಿಬ್ಬರ ಅಂಶಗಳೂ ನಿಮಗೆ ಕಾಣಿಸುತ್ತವೆ. ಗೋಡ್ಸೆಯಲ್ಲೊಬ್ಬ ದಿಟವಾದ ದೈವಭಕ್ತನಿದ್ದನೆಂಬುದು ಮನವರಿಕೆಯಾಗುತ್ತದೆ. ಅವನು ನಿಷ್ಠನಿದ್ದ, ಪ್ರಾಮಾಣಿಕನಿದ್ದ, ಶ್ರಮಜೀವಿಯಾಗಿದ್ದ, ಇವತ್ತಿನ ಎಲ್ಲ ಜಾತ್ಯತೀತರಿಗಿಂತಲೂ ಹೆಚ್ಚಿನ ಜಾತ್ಯತೀತ ಮನಸ್ಸಿನವನಾಗಿದ್ದ ಇತಿಹಾಸ ಓದಿಕೊಂಡವನಾಗಿದ್ದ ಸಜ್ಜನನಾಗಿದ್ದ ಎಂಬುದು ನಿಮಗೇ ಖಾತರಿಯಾಗುತ್ತದೆ. ಅವನು ದೇಶಭಕ್ತಿಯ ವಿಷಯದಲ್ಲಿ ಖಂಡಿತವಾಗ್ಯೂ ಗಾಂಧೀಜಿಗಿಂತ ಕಡಿಮೆಯವನಾಗಿರಲಿಲ್ಲ. ಆದರೆ ನಾಥರಾಮ ಗೋಡ್ಸೆ ಎಂಬ ಭಾವುಕನಿಗೆ ಬದಲಾದ ಕಾಲಮಾನವನ್ನು ಗುರುತಿಸುವುದು ಸಾಧ್ಯವಾಗಿರಲಿಲ್ಲ. ಗುರುಗೋವಿಂದ ಸಿಂಹ, ರಾಣಾಪ್ರತಾಪಸಿಂಹ, ಛತ್ರಪತಿ ಶಿವಾಜಿ ಮಹರಾಜ್ ರ ಕಾಲಕ್ಕೂ ದೇಶ ವಿಭಜನೆಯಾದ 1948ರ ಕಾಲಕ್ಕೂ ಬದುಕು ಬದಲಾಗಿದೆ, ನ್ಯಾಯದ ಪರಿಕಲ್ಪನೆ ಬದಲಾಗಿದೆ, ಜಾತಿ ಧರ್ಮಗಳ ಪರಿಕಲ್ಪನೆ ಬದಲಾಗಿದೆ ಎಂಬ ವಿವೇಕ ನಾಥೂರಾಮನಿಗಿರಲಿಲ್ಲ.\u003c\/p\u003e","brand":"Ravi Belagere","offers":[{"title":"Default Title","offer_id":45958901006595,"sku":"HB00004940","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/GandhiHatyemattuGodseBackPage_2.jpg?v=1726816316"},{"product_id":"neena-pakistana-pakistans-terror-network-ravi-belagere-kannada-book","title":"ನೀನಾ ಪಾಕಿಸ್ತಾನ?","description":"\u003cp\u003eಐವತ್ತು ವರ್ಷಗಳಿಂದ ನಮಗಿಂತ ಐದು ಪಟ್ಟು ದೊಡ್ಡದಾದ, ಅತ್ಯಾಧುನಿಕ ಶಸ್ತ್ರಾಸ್ತ್ರಗಳಿರುವ ಭಾರತ ದೇಶದ ವಿರುದ್ಧ ನಾವು ಹೋರಾಡುತ್ತಿದ್ದೇವೆ. ನಮ್ಮ ಶತ್ರುವಿನ ಹತ್ತಿರ ಎಲ್ಲವೂ ಇದೆ. ಆದರೆ ನಮ್ಮ ಬಳಿ ಇರುವಂತಹ ಒಂದು ಶಸ್ತ್ರ ಭಾರತದ ಬಳಿ ಇಲ್ಲ. ಅದು ಜೆಹಾದ್!\" ಅಂದವನು ಪಾಕಿಸ್ತಾನದ ಧರ್ಮಗುರು.\u003c\/p\u003e\n\u003cp\u003eಅದಕ್ಕೇ ಆ ದೇಶ ಇವತ್ತು ಸ್ವತಂತ್ರಗೊಂಡ ಐವತ್ತು ವರ್ಷಗಳ ನಂತರವೂ ಹಾಗಿದೆ. ಅಲ್ಲಿ ಬೆಳೆದಿರುವುದು ಅಪ್ಪಟ ಹಂತಕ ಫಸಲು. ಮತ್ತೇನನ್ನೂ ಉತ್ಪಾದನೆ ಮಾಡಲಾಗದ ಸ್ಥಿತಿಯಲ್ಲಿರುವ ಪಾಕಿಸ್ತಾನ್ ಇವತ್ತು ಕೇವಲ ಭಯೋತ್ಪಾದನೆ ಮಾಡುತ್ತಿದೆ. ಅದರ ಅಂತರ್ಯದಲ್ಲಿ ಹುಟ್ಟಿ ಬೆಳೆದ ಹಲವಾರು ಭಯೋತ್ಪಾದಕ ಸಂಘಟನೆಗಳ ಸಂಪೂರ್ಣ ಪರಿಚಯ ನೀಡುವುದು ಈ ಪುಸ್ತಕದ ಉದ್ದೇಶ. ಇದು 'ನೀನಾ ಪಾಕಿಸ್ತಾನ?' ಪುಸ್ತಕ ಸರಣಿಯ ಪೈಕಿ ಮೊದಲನೆಯದೂ ಹೌದು.\u003c\/p\u003e\n\u003cp\u003e-ರವಿ ಬೆಳಗೆರೆ.\u003c\/p\u003e","brand":"Ravi Belagere","offers":[{"title":"Default Title","offer_id":46353337549059,"sku":"HB00005127","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/NeenaPakistana.jpg?v=1738061184"}],"url":"https:\/\/harivubooks.com\/collections\/bhavana-prakashana.oembed?page=3","provider":"Harivu Books","version":"1.0","type":"link"}