{"title":"Aravind Chokkadi","description":"","products":[{"product_id":"facing-exams-successfully-kannada-navakarnataka","title":"ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ ?","description":"ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂದರೆ ಪೆಡಂಭೂತದಂತೆ. ವರ್ಷವಿಡೀ ಓದಿದ, ಗ್ರಹಿಸಿದ ವಿಷಯಗಳನ್ನು ಮೂರು ಗಂಟೆಗಳಲ್ಲಿ ನೆನಪಿನಿಂದ ಹೆಕ್ಕಿ ತೆಗೆಯಬೇಕಲ್ಲವೇ ! ಹಾಗಾಗಿ ಭಯ, ಆತಂಕ ಸಹಜ. ಜೊತೆಗೆ ಶಿಕ್ಷಕರ ಹೆತ್ತವರ ಒತ್ತಡ ಎಲ್ಲಾ ಸೇರಿ ಅವರ ಮನಸ್ಸು ಖಿನ್ನವಾಗುತ್ತದೆ. ಓದಿನ ಏಕಾಗ್ರತೆ ಕಡಿಮೆಯಾಗುತ್ತದೆ. 'ಯಾಕಾದ್ರೂ ಬಂತಪ್ಪ ಈ ಪರೀಕ್ಷೆ' ಎನ್ನುವ ಚಡಪಡಿಕೆ ಶುರುವಾಗುತ್ತದೆ. ಈ ಸಮಯದಲ್ಲಿ ಹೆತ್ತವರ, ಶಿಕ್ಷಕರ ಪಾತ್ರ ಅವರಿಗೆ ಪ್ರೋತ್ಸಾಹದಾಯಕವಾಗಿರಬೇಕು. ಇಲ್ಲದಿದ್ದರೆ ಅವರ ಮುಂದಿನ ಭವಿಷ್ಯ ಮುರುಟಿ ಹೋಗಬಹುದು.\u003cbr\u003eವಿದ್ಯಾರ್ಥಿಗಳೇ, ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ ? ಇಲ್ಲಿವೆ ನೋಡಿ ಸರಳ - ಸುಲಭ ಉಪಾಯಗಳು.\u003cbr\u003e","brand":"Aravind Chokkadi","offers":[{"title":"Default Title","offer_id":42132584857859,"sku":"HB00000298","price":65.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at3.43.35PM.jpg?v=1638444631"},{"product_id":"jeevana-shikshana-vignana-navakarnataka","title":"ಜೀವನ ವಿಜ್ಞಾನ ಶಿಕ್ಷಣ","description":"ವಿಜ್ಞಾನಕ್ಕಿರುವ ವಿಶಿಷ್ಟ ಲಕ್ಷಣವೆಂದರೆ ಅದರ ಸಮರ್ಥನೆಯ ಗುಣ. ವಿಚಾರಗಳನ್ನು ಸಮರ್ಥಿಸಲು ಅದು ಖಚಿತ ಮಾನದಂಡ ಗಳನ್ನು ಇಟ್ಟುಕೊಂಡಿರುತ್ತದೆ. ವಿಜ್ಞಾನದ ಗ್ರಹಿಕೆಗಳು ಪ್ರಯೋಗ ಮತ್ತು ಪ್ರಮಾಣೀಕರಿಸಿದ ಸೂತ್ರಕ್ಕೆ ಒಳಪಟ್ಟಿರುತ್ತದೆ. ಹೊಸ ಪ್ರಯೋಗದಿಂದ ಹಿಂದಿನ ಫಲಿತಾಂಶ ಸರಿಯಲ್ಲವೆಂದು ಸಾಬೀತಾದಾಗ, ಹಳೆಯದನ್ನು ಕೈಬಿಟ್ಟು ಹೊಸತನ್ನು ಸ್ಥಾಪಿಸಲು ವಿಜ್ಞಾನ ಹಿಂದೆ-ಮುಂದೆ ನೋಡುವುದಿಲ್ಲ!\u003cbr\u003e\u003cbr\u003eಜೀವನ ವಿಜ್ಞಾನ ಸಹ ಹೀಗೆಯೇ, ಶಿಕ್ಷಣದ ವಿಷಯ ಬಂದಾಗ ಅದು ವೈಜ್ಞಾನಿಕವಾಗಿರಬೇಕಾದ್ದು ಅನಿವಾರ್ಯ. ಯಾಕೆಂದರೆ, ಕಲಿಸುವ ವಿಚಾರಗಳು ಎಲ್ಲರ ಅನುಭವಕ್ಕೂ ಸಿಗುವ, ತಾರ್ಕಿಕವಾಗಿ ಸರಿ ಇರುವ ಪ್ರಮಾಣೀಕರಣಕ್ಕೆ ಒಳಪಡುವ ಸಂಗತಿಗಳಾಗಿರ ಬೇಕಾಗುತ್ತದೆ.\u003cbr\u003e\u003cbr\u003eಈ ನಿಟ್ಟಿನಲ್ಲಿ ಮಕ್ಕಳಿಗೆ ಜೀವನ ಶಿಕ್ಷಣ ನೀಡಲು ಅನುಸರಿಸ ಬೇಕಾದ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಡಿ.ಎಸ್.ಇ.ಆರ್.ಟಿ. ನಿಗದಿಪಡಿಸಿದೆ. ಆ ಸೂತ್ರಗಳನ್ನು ಅನುಸರಿಸಿ ಶ್ರೀ ಅರವಿಂದ ಚೊಕ್ಕಾಡಿಯವರು ಶಿಕ್ಷಕರಿಗೆ ಉಪಯುಕ್ತವಾಗುವ ಈ ಕೃತಿಯನ್ನು ರಚಿಸಿದ್ದಾರೆ. ಎಲ್ಲವನ್ನು ವೈಜ್ಞಾನಿಕ ಒರೆಗಲ್ಲಿಗೆ ಹಚ್ಚುವ, ಕಲಿಕೆಯನ್ನು ಪ್ರಾಯೋಗಿಕವಾಗಿ ಅಭ್ಯಸಿಸಿ ಅದರ ಉಪಯುಕ್ತತೆಯನ್ನು ಅಳೆಯುವ ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಣವನ್ನು ಹೇಗೆ ವೈಜ್ಞಾನಿಕವಾಗಿ ನೀಡಿ ಬದುಕಿಗೆ ಉಪಯುಕ್ತವಾಗಿಸಬಹುದು ಎನ್ನುವುದನ್ನು ಇಲ್ಲಿ ಚರ್ಚಿಸಲಾಗಿದೆ. ಸ್ವತಃ ಯಶಸ್ವಿ ಶಿಕ್ಷಕರಾಗಿರುವ ಈ ಲೇಖಕರ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.","brand":"Aravind Chokkadi","offers":[{"title":"Default Title","offer_id":42136747999491,"sku":"HB00000252","price":85.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/a9461e7f-a493-4aa8-99c0-c43813d36106.jpg?v=1638517370"},{"product_id":"saujanya-heege-aravinda-navakarnataka","title":"ಸೌಜನ್ಯತೆ ಹೇಗೆ?","description":"ಸೌಜನ್ಯದ ನಡವಳಿಕೆ ವ್ಯಕ್ತಿಯ ಗೌರವವನ್ನು ಹೆಚ್ಚಿಸುತ್ತದೆ. ಆತನನ್ನು ಇತರರ ಪ್ರಶಂಸೆಗೆ ಪಾತ್ರನಾಗುವಂತೆ ಮಾಡುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಮ್ಮ ಮಾತು ಮತ್ತು ವರ್ತನೆ ನಮಗೂ ಇತರರಿಗೂ ಹಿತಕರವಾಗಿರಬೇಕು. ಇತರರೂ ನನ್ನಂತೆಯೇ, ಅವರ ಅಗತ್ಯಗಳು, ಭಾವನೆಗಳು, ನೋವುಗಳು ನನ್ನಂತೆಯೇ ಇರುತ್ತವೆ ಎಂಬ ನಿಲುವೇ ಸೌಜನ್ಯದ ಸಂಕೇತ. ಆದರೆ, ಇಂತಹ ನಿಲುವು\u003cbr data-mce-fragment=\"1\"\u003e\u003cbr data-mce-fragment=\"1\"\u003eತಳೆಯಬೇಕಾದರೆ, ಆತನ ಆಲೋಚನೆಯ ಧಾಟಿ ಬದಲಾಗಬೇಕಾಗುತ್ತದೆ. ಸೌಜನ್ಯದ ನಡವಳಿಕೆ ಹೇಗೆ ರೂಢಿಸಿಕೊಳ್ಳಬಹುದು ? ಮಕ್ಕಳಿಗೆ ಇದನ್ನು ಕಲಿಸಲು ಸಾಧ್ಯವೇ? ಸೌಜನ್ಯವನ್ನು ಶಾಲೆಯಲ್ಲಿ ಕಲಿಯಬಹುದೇ ? ಮನೆಯಲ್ಲಿ ಕಲಿಯಬಹುದೇ ? ಸೌಜನ್ಯದ ನಡವಳಿಕೆಯಿಂದ ದಾರಿ ತಪ್ಪುವ ಸಂದರ್ಭಗಳು ಇರುತ್ತವೆಯೇ ?\u003cbr data-mce-fragment=\"1\"\u003e\u003cbr data-mce-fragment=\"1\"\u003eಸೌಜನ್ಯತೆ ಕುರಿತು ಆಮೂಲಾಗ್ರವಾಗಿ ತಿಳಿಸಿಕೊಡುವ ಈ ಕೃತಿಯನ್ನು ಶ್ರೀ ಅರವಿಂದ ಚೊಕ್ಕಾಡಿ ರಚಿಸಿದ್ದಾರೆ. ಶಿಕ್ಷಕರಾಗಿರುವ ಇವರು ತಮ್ಮ ಅನುಭವಗಳ ಹಿನ್ನೆಲೆಯಲ್ಲಿ ಇದನ್ನು ರಚಿಸಿದ್ದಾರೆ. 'ಆತ್ಮವಿಶ್ವಾಸ ವೃದ್ಧಿಸಿ ಕೊಳ್ಳುವುದು ಹೇಗೆ ?' 'ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ ?' ಮತ್ತು 'ಯಶಸ್ವೀ ಶಿಕ್ಷಕರಾಗುವುದು ಹೇಗೆ ?' ಎಂಬ ಕೃತಿಗಳನ್ನು ಇವರು ಈ ಮಾಲಿಕೆಗಾಗಿ ರಚಿಸಿದ್ದಾರೆ. ಇವರ ಇನ್ನೂ ಹಲವಾರು ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ.","brand":"Aravind Chokkadi","offers":[{"title":"Default Title","offer_id":42137071485187,"sku":"HB00000224","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/33e0087e-6c33-4c67-960f-46aeb986502b.jpg?v=1638527223"},{"product_id":"ajnaata-santa-hardekar-manjappa-kannada-book","title":"ಅಜ್ಞಾತ ಸಂತ ಹರ್ಡೇಕರ್ ಮಂಜಪ್ಪ","description":"","brand":"Aravind Chokkadi","offers":[{"title":"Default Title","offer_id":43414423994627,"sku":"HB00003605","price":230.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_20d0638a-0ef2-4c43-b002-6d6fc62eee5e.jpg?v=1665666293"}],"url":"https:\/\/harivubooks.com\/collections\/aravind-chokkadi-kannada-books.oembed","provider":"Harivu Books","version":"1.0","type":"link"}