{"title":"13","description":"","products":[{"product_id":"drouni-thriller-kannada-novel-by-themi","title":"ದ್ರೌಣಿ","description":"\u003cp\u003eನನ್ನ ಗೆಳೆಯರಾದ ಥೇಮಿ ಅವರೊಳಗೆ ಒಬ್ಬ ಲೇಖಕನಿದ್ದಾನೆ ಎಂಬುದು ನನಗೆ ಹಲವು ವರುಷಗಳಿಂದ ತಿಳಿದಿತ್ತು. ನಮ್ಮ ಸಂಸ್ಥೆಯಿಂದ ತಯಾರಿಸುತ್ತಿದ್ದ ಹಲವು ಟೆಲಿಫಿಲ್ಮ್ಗಳಿಗೆ, ಕಿರುಚಿತ್ರಗಳಿಗೆ ಅವರನ್ನು ಚರ್ಚೆಗಳಲ್ಲಿ, ಕಥಾವಿಸ್ತರಣೆಯಲ್ಲಿ ಬಳಸಿಕೊಂಡದ್ದಿದೆ. ವೃತ್ತಿಯಿಂದ ಪತ್ತೇದಾರರೇ ಆದ ಅವರ ಅನುಭವ ಲೋಕವೂ ದೊಡ್ಡದು. ಅವರ ಓದಿನ ಹರಹೂ ವಿಸ್ತಾರವಾದದ್ದು. ಹೀಗಾಗಿ ಅವರು ಕಾದಂಬರಿ ಬರೆದಿದ್ದಾರೆ ಎಂದಾಗ ಅತ್ಯಂತ ಕುತೂಹಲದಿಂದ ಓದಿದೆ. ನನಗಿಷ್ಟವಾಯಿತು.\u003c\/p\u003e\n\u003cp\u003e* ಅವರ ಭಾಷೆಯ ಬಳಕೆಯಲ್ಲಿ ಅನುಭವಸ್ಥ ಲೇಖಕರ ಹದವನ್ನು ಕಂಡುಕೊಂಡಿದ್ದಾರೆ. ನಿರೂಪಣೆಯಲ್ಲಿ ಹಲವು ತಿರುವುಗಳನ್ನು ಸೃಷ್ಟಿಸುತ್ತಾ ಓದುಗನನ್ನು ಕತೆಯ ಲೋಕದೊಳಗೆ ಉಳಿಸಿಕೊಳ್ಳುವ ಕಥನ ತಂತ್ರವನ್ನೂ ಕಲಿತಿದ್ದಾರೆ. ಕಾದಂಬರಿ ಬೆಳೆಯುತ್ತಾ ಬೆಳೆಯುತ್ತಾ ನೋಡುಗನೆದುರು ಚಿತ್ರವಾಗುವಂತೆ ಕತೆಯನ್ನು ನಿರೂಪಿಸುವ ಶಕ್ತಿಯೂ ಅವರಿಗೆ ಒಲಿದಿದೆ.*\u003c\/p\u003e\n\u003cp\u003eಈ ಎಲ್ಲಾ ಕಾರಣಗಳಿಗಾಗಿ ನಿಮ್ಮ ಕೈಯಲ್ಲಿ ಈಗಿರುವ \"ದ್ರೌಣಿ\" ಕಾದಂಬರಿಯು ಒಂದೊಳ್ಳೆಯ ಓದು ಮತ್ತು ನಿಮಗೂ ಗೊತ್ತಿಲ್ಲದ ಅನುಭವಲೋಕವನ್ನು ನಿಮ್ಮೆದುರು ತೆರೆದಿಡುತ್ತದೆ. ಪುರಾಣದ ಹಲವು ವಿವರಗಳ ಜೊತೆಗೆ ಸಮಕಾಲೀನ ಬದುಕನ್ನು ಸಮಾನವಾಗಿರಿಸಿ ಕಥನ ಬಿಚ್ಚಿಡುವ ಈ ಕ್ರಮ ಪ್ರತಿ ಓದುಗರನ್ನೂ ಒಳಗೊಳ್ಳುತ್ತದೆ ಹಾಗೂ ಮತ್ತೆ ಮತ್ತೆ ಮಿರಾಂಡ ಅವರ ಹೊಸ ಬರಹಗಳನ್ನು ಓದಲು ಪ್ರೇರೇಪಿಸುತ್ತದೆ ಎಂದು ಭಾವಿಸಿದ್ದೇನೆ.\u003c\/p\u003e\n\u003cp\u003eಥೇಮಿ ಅವರು ತಮ್ಮ ಮೊದಲ ಕಾದಂಬರಿಯ ಅನುಭವದ ಹಿನ್ನೆಲೆಯಲ್ಲಿ ಮತ್ತಷ್ಟು ಈ ಬಗೆಯ ಹೊಸ ಲೋಕವನ್ನು ಕನ್ನಡ ಓದುಗರಿಗೆ ಪರಿಚಯಿಸುತ್ತಾ ಇರಲಿ ಎಂದು ಹಾರೈಸುತ್ತೇನೆ.\u003cbr\u003e- ಬಿ. ಸುರೇಶ\u003cbr\u003e(ರಂಗಕರ್ಮಿ, ನಾಟಕಕಾರ\/ಚಲನಚಿತ್ರ ನಿರ್ಮಾಪಕ-ನಿರ್ದೇಶಕ-ಕಲಾವಿದ)\u003c\/p\u003e","brand":"Themi","offers":[{"title":"Default Title","offer_id":47615111790851,"sku":"HB00005502998","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/607422706_25945964221708533_433518086859487702_n_1.jpg?v=1768055065"},{"product_id":"allindillige-collection-of-poems-by-hrudaya-shiva-kannada-book","title":"ಅಲ್ಲಿಂದಿಲ್ಲಿಗೆ","description":"\u003cp data-path-to-node=\"2\"\u003eಹೃದಯ ಶಿವ ಕನ್ನಡ ಚಲನಚಿತ್ರ ರಂಗದ ಅತ್ಯಂತ ಜನಪ್ರಿಯ ಗೀತರಚನಾಕಾರರು. ಅಷ್ಟು ಮಾತ್ರವಲ್ಲದೆ, ಕನ್ನಡದಲ್ಲಿ ಅತ್ಯುತ್ತಮ ಕವನಗಳನ್ನು ರಚಿಸಿ ಕಾವ್ಯ ಕಣಜವನ್ನು ಸಮೃದ್ಧಗೊಳಿಸಿದ್ದಾರೆ. ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೂ ಕನ್ನಡ ಸಾಹಿತ್ಯದೊಂದಿಗೆ ಗಂಭೀರ ಸೃಜನಶೀಲ ಅನುಸಂಧಾನ ನಡೆಸುತ್ತಲೇ ಇದ್ದಾರೆ. ಚಲನಚಿತ್ರರಂಗದ ಜನಪ್ರಿಯತೆಯ ಪ್ರವಾಹದಲ್ಲಿ ಹರಿದು ಹೋಗುವ ಜಾಯಮಾನ ಇವರದಲ್ಲ.\u003c\/p\u003e\n\u003cp data-path-to-node=\"3\"\u003e'ಅಲ್ಲಿಂದಿಲ್ಲಿಗೆ' ಸಂಕಲನದ ಅನುವಾದಿತ ಕವನಗಳು ಹೃದಯ ಶಿವ ಅವರ ಸಾಹಿತ್ಯದ ಶ್ರೇಷ್ಠ ಅಭಿರುಚಿಗೆ ಕನ್ನಡಿಯಂತಿವೆ. ಜಗತ್ತಿನ ಕೆಲವು ಶ್ರೇಷ್ಠ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ಹೃದಯ ಶಿವ ಅವರು, ಕಾವ್ಯದ ಆತ್ಮ ಮತ್ತು ಭಾವ ಸಂವೇದನೆಯನ್ನು ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ತಂದಿದ್ದಾರೆ. ಇವು ಅನುವಾದದಂತೆ ಭಾಸವಾಗದೆ ಕನ್ನಡದ್ದೇ ಕವಿತೆಗಳೆಂಬಂತೆ ಮೂಡಿಬಂದಿವೆ. ಕನ್ನಡ ಕಾವ್ಯದ ಲಾಲಿತ್ಯ ಇಲ್ಲಿನ ಎಲ್ಲ ಕವಿತೆಗಳ ಮೈಗಂಟಿದೆ. 'ಅಲ್ಲಿಂದಿಲ್ಲಿಗೆ' ಸಂಕಲನದ ಬಹುಪಾಲು ಕವಿತೆಗಳು ಮೊದಲ ಓದಿಗೆ ಭಾವಕೋಶದಲ್ಲಿ ಸ್ಥಾಯಿಯಾಗಿ ನೆಲೆ ನಿಲ್ಲುವ ಕಸುವು ಪಡೆದಿವೆ.\u003c\/p\u003e\n\u003cp data-path-to-node=\"4\"\u003e\u003cb data-path-to-node=\"4\" data-index-in-node=\"0\"\u003e- ಡಾ. ರಾಜಶೇಖರ ಹತಗುಂದಿ\u003c\/b\u003e\u003c\/p\u003e","brand":"Hrudaya Shiva","offers":[{"title":"Default Title","offer_id":47637389017347,"sku":"PHB0000075","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/22.jpg?v=1768570282"},{"product_id":"chaduranga-thriller-novel-vasudev-murthy-kannada-book","title":"ಚದುರಂಗ","description":"\u003cp data-path-to-node=\"2\"\u003e\"ಮನುಷ್ಯ ಬೇಕಾದ ರೀತಿಯಲ್ಲಿ ಮಾಯವಾಗಬಲ್ಲ. ಹೊಸ ಜಾಗ, ಹೊಸ ಗುರುತು (Identity), ಹೊಸ ಪರಿಚಯ - ಹೀಗೆ ಎಲ್ಲರಿಂದ ದೂರವಾಗಿ ಹೊಸ ಜೀವನ ಪ್ರಾರಂಭಿಸಿ ಹಳೆಯದನ್ನೆಲ್ಲಾ ಮುಚ್ಚಿ ಹಾಕಬಲ್ಲ. ಆದರೆ ಹಣ ಹಾಗಲ್ಲ; ಅದು ಒಮ್ಮೆ ತನ್ನ ಪ್ರಯಾಣ ಪ್ರಾರಂಭಿಸಿದರೆ, ಎಲ್ಲಿಂದ ಹೊರಡುತ್ತದೆಯೋ, ಎಲ್ಲೆಲ್ಲಿ ನಿಲ್ಲುತ್ತದೆಯೋ ಅಲ್ಲೆಲ್ಲಾ ತನ್ನ ಛಾಪನ್ನು ಮೂಡಿಸಿಯೇ ಮುಂದೆ ಹೋಗುತ್ತದೆ. ಅದನ್ನು ಹುಡುಕುವ ತೀಕ್ಷ್ಣ ನೋಟ, ತಾಳ್ಮೆ ಹಾಗೂ ಛಲ ಬೇಕು. ಎಲ್ಲರೂ ಹಣ ಬೇಕು ಅಂತ ನಾಗರೆ ಹಿಂದೆ ಬಿದ್ದರು, ಆದರೆ ನಾನು ನಾಗರೆ ಬೇಕು ಅಂತ ಹಣದ ಹಿಂದೆ ಬಿದ್ದೆ. ನಾಲ್ಕು ವರ್ಷ! ಅವನ ಒಂದೊಂದು ವ್ಯವಹಾರವನ್ನೂ ಪರಿಶೀಲಿಸುತ್ತಾ ಅದರ ಮೂಲ ಹುಡುಕಿದಾಗ ಸಾಮಾನ್ಯವಾಗಿ (Common ಆಗಿ) ಕಂಡುಬಂದಿದ್ದು ಬೆಂಗಳೂರು...\"\u003c\/p\u003e\n\u003cp data-path-to-node=\"3\"\u003e\"ಯು ಆರ್ ಜೀನಿಯಸ್ ಭೂಷಣ್!\"\u003c\/p\u003e\n\u003cp data-path-to-node=\"4\"\u003e\"ಜೀನಿಯಸ್ ನಾನಲ್ಲ... ನಾನು ಅವನು ಬಿಟ್ಟು ಹೋದ ಕ್ಯೂಗಳನ್ನು (Clues) ಹುಡುಕಿಕೊಂಡು ಹೋದೆ ಅಷ್ಟೇ. ಆದರೆ 6,500 ಕೋಟಿ ಹಣವನ್ನು ಸರ್ಕಾರದ ಕಣ್ಣಿಗೆ ಮಣ್ಣೆರಚಿ ಮಾಯ ಮಾಡಿ, ತಾನೂ ಮಾಯವಾಗಿದ್ದಾನಲ್ಲ... ಅವನು ಜೀನಿಯಸ್. ನನ್ನ ಕೆಲಸ ಅವನನ್ನು ಹಿಡಿಯುವುದು ಮಾತ್ರ.\"\u003c\/p\u003e","brand":"Vasudev Murthy","offers":[{"title":"Default Title","offer_id":47666848334083,"sku":"PHB0000076","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ChadurangaCovercopy_1.jpg?v=1769060835"},{"product_id":"syringe-hidiyuva-kai-pennu-hididaga-avratti02-dr-m-annayya-kulal-ultoor-kannada-book","title":"ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ - ಆವೃತ್ತಿ 02","description":"\u003cp data-path-to-node=\"7\"\u003e\"ನಾಡಿನ ನಾಡಿಮಿಡಿತ ದಾಖಲಿಸುವ ಲೇಖನಗಳು: ಕನ್ನಡ ಸಾಹಿತ್ಯವು ವಿಪುಲ ಮತ್ತು ವಿಭಿನ್ನ ಹಿನ್ನೆಲೆಗಳುಳ್ಳ ಸಾಹಿತಿಗಳ ಕೊಡುಗೆಯಿಂದ ಶ್ರೀಮಂತವಾಗಿದೆ. ಇಲ್ಲಿ ದರ್ಬೆ ಹಿಡಿದವರು, ಕತ್ತಿ ಹಿಡಿದವರು, ತಕ್ಕಡಿ ತೂಗಿದವರು, ನೇಗಿಲು ಹಿಡಿದವರು, ಸೌಟು ಹಿಡಿದವರು, ತೇಪೆ ಹಿಡಿದವರು, ಕರಿ ಕೋಟು ಹಾಕಿದವರು, ಖಾಕಿ ಧರಿಸಿದವರು; ಆಳಿದವರು, ಆಳಿಸಿಕೊಂಡವರು, ತುಳಿಸಿಕೊಂಡವರು, ಸೋತವರು, ಗೆದ್ದವರು - ಎಲ್ಲರೂ ಪೆನ್ನನ್ನು ಹಿಡಿದು ಸಾಹಿತ್ಯವನ್ನು ರಚಿಸಿದ್ದಾರೆ. ಇನ್ನು ಸಿರೆಂಜು ಹಿಡಿದವರು ಪೆನ್ನು ಹಿಡಿಯದಿದ್ದರೆ ಬಹುತ್ವದ ಮಾತೆಲ್ಲಿ? ಜನರ ನಾಡಿ ನೋಡುವವರು ನುಡಿಯ ಕಟ್ಟದಿದ್ದರೆ ಅಂತಹ ಸಾಹಿತ್ಯ ಅಪೂರ್ಣವಾಗಿಯೇ ಉಳಿಯುತ್ತದೆ.\u003c\/p\u003e\n\u003cp data-path-to-node=\"8\"\u003eಈ ಸುದೀರ್ಘ ಕೃತಿಯು ಹಲವು ಕಾರಣಕ್ಕೆ ಮಹತ್ವದ್ದಾಗಿದೆ. ಇಲ್ಲಿ ವೈದ್ಯರು ತಮ್ಮ ವೃತ್ತಿಯ ಖಾಸಗಿ ಅನುಭವಗಳನ್ನು ದಾಖಲಿಸಿದ್ದಾರೆ. ತಾವು ಚಿಕಿತ್ಸೆ ನೀಡಿದ ವಿಶೇಷ ರೋಗಿಗಳು, ಆಗ ಎದುರಿಸಿದ ಮಾನವೀಯ ಸನ್ನಿವೇಶಗಳು, ಮಿಂಚಿನಂತೆ ಜರುಗಿದ ಪವಾಡ ಸದೃಶ ಸಂಗತಿಗಳು - ಎಲ್ಲವೂ ಇಲ್ಲಿವೆ. ಯಾವುದೇ ಭಾಷಾ ಪಾಂಡಿತ್ಯದ ಗೊಡವೆಗೆ ಹೋಗದೆ ಸರಳಗನ್ನಡದಲ್ಲಿ ಇವನ್ನು ನಿರೂಪಿಸಿದ್ದಾರೆ. ಕೇವಲ ತಮ್ಮ ಯಶಸ್ಸುಗಳನ್ನು ಮಾತ್ರವಲ್ಲದೆ ತಮ್ಮ ಸೋಲುಗಳು, ಅಸಹಾಯಕತೆ, ತಾವು ಅನುಭವಿಸಿದ ಭಯಗಳು, ವಂಚನೆಗಳು, ತಮಾಷೆಗಳು - ಎಲ್ಲವೂ ಇಲ್ಲಿ ಬಂದಿವೆ. ನಾಡಿನ ಮೂಲೆಮೂಲೆಯಲ್ಲಿ ವೃತ್ತಿ ಮಾಡಿದ ಹಲವು ವಯೋಮಾನದ ವೈದ್ಯರು ಇಲ್ಲಿ ಲೇಖನಗಳನ್ನು ಬರೆದಿರುವುದರಿಂದ ಈ ಕೃತಿ ಒಟ್ಟಾರೆಯಾಗಿ ಕನ್ನಡ ನೆಲದ ಜನರ ಬದುಕಿನ ಕ್ರಮ, ಅವರ ಬವಣೆಗಳು, ಅವರ ವೇದನೆಗಳು, ಅವರ ನಂಬಿಕೆಗಳನ್ನು ಪ್ರತಿಫಲಿಸುತ್ತದೆ. ಜಾತಿ-ಧರ್ಮದ ತಾರತಮ್ಯ, ಬಡತನ-ಸಿರಿತನಗಳ ಅರ್ಭಟ, ಗಂಡು-ಹೆಣ್ಣಿನ ನಡುವಿನ ಒಡಕು - ಎಲ್ಲವನ್ನೂ ಇದು ದಾಖಲಿಸುತ್ತದೆ. ಇದನ್ನು ವೈದ್ಯಕೀಯ ಗ್ರಂಥವಾಗಿ ಓದದೆ, ಕನ್ನಡಿಗರ ಸಮಾಜಶಾಸ್ತ್ರದ ಪಠ್ಯವಾಗಿಯೂ ಓದಬಹುದಾಗಿದೆ. ಇಂತಹ ಲೇಖನಗಳನ್ನು ಬರೆಯುವಾಗ ವೈದ್ಯರು ತಮ್ಮ ವೈದ್ಯಕೀಯ ಅಹಂ ಬದಿಗಿಟ್ಟು, ಜನಸಾಮಾನ್ಯರಲ್ಲಿ ಒಂದಾಗಿ ಮತ್ತೊಬ್ಬ ವ್ಯಕ್ತಿಯ ಬದುಕನ್ನು ಕಾಣುವ ಪರಿಯೇ ಹೃದ್ಯವಾಗಿದೆ.\u003c\/p\u003e\n\u003cp data-path-to-node=\"9\"\u003eಎಷ್ಟೇ ತಜ್ಞ ವೈದ್ಯನಾದರೂ ಅವನು ವಿಧಿಯನ್ನು ಮಣಿಸಲಾರ. ತನ್ನ ಕೈಲಾದ ಮಟ್ಟಿಗೆ ಮನುಷ್ಯರ ಒಳಿತಿಗಾಗಿ ಪ್ರಯತ್ನ ಪಡಬಲ್ಲನೇ ಹೊರತು ಪವಾಡ ಜರುಗಿಸಲಾರ. ಆದ್ದರಿಂದ ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ಜೀವವೊಂದು ಕೈಜಾರಿಹೋಗುವುದನ್ನು ನೋಡಬೇಕಾದ ವೈದ್ಯರ ಸಂಕಟಗಳು ಒಟ್ಟಾರೆ ಮನುಕುಲದ ಅಸಹಾಯಕತೆಯ ಕೂಗಿನಂತೆ ಕೇಳುತ್ತದೆ. ವೈದ್ಯರು ಮತ್ತು ಸಮಾಜದ ಕೊಡು-ಕೊಳ್ಳುವಿಕೆ ದ್ವಿಮುಖ ಚಲನೆಯನ್ನು ಹೊಂದಿರುವಂಥದ್ದು. ನಿಸ್ಸಂಶಯವಾಗಿ ವೈದ್ಯರ ಈ ಅನುಭವ ಲೇಖನಗಳಿಂದ ಜನಸಾಮಾನ್ಯರು ಕಲಿಯುವುದು ಸಾಕಷ್ಟಿದೆ. ಆದರೆ ಅಷ್ಟೇ ಸೂಕ್ಷ್ಮವಾಗಿ ವೈದ್ಯರಿಗೂ ಸಮಾಜದ ಹಲವು ಸಂಗತಿಗಳ ಪರಿಚಯವಾಗಿ ಅವರ ಮನಸ್ಸನ್ನು ವಿಸ್ತರಿಸಬಲ್ಲವಾಗಿವೆ. ಭಾರತದ ವೈದ್ಯರು ಬಿಡುವಿಲ್ಲದಂತೆ ದುಡಿಯುವವರು, ಸ್ವಂತ ಕುಟುಂಬಕ್ಕೂ ಸಮಯ ಕೊಡಲಾಗದೆ ಸಮಾಜದ ಆರೋಗ್ಯಕ್ಕಾಗಿ ಶ್ರಮಿಸುವವರು. ಅಂತಹ ಗಾಢ ವೃತ್ತಿಯ ಮಧ್ಯೆಯೂ ಬಿಡುವು ಮಾಡಿಕೊಂಡು ಈ ಲೇಖನಗಳ ಗುಚ್ಛವನ್ನು ಸಂಗ್ರಹಿಸಿ ಪ್ರಕಟಿಸುತ್ತಿರುವುದಕ್ಕೆ ಅವರೆಲ್ಲರನ್ನೂ ಅಭಿನಂದಿಸುತ್ತೇನೆ.\"\u003cbr\u003e\u003cbr\u003e\u003cstrong\u003eವಸುಧೇಂದ್ರ (ಕನ್ನಡ ಕತೆಗಾರ)\u003c\/strong\u003e\u003cbr\u003e\u003c\/p\u003e","brand":"Dr. M. Annayya Kulal Ultoor","offers":[{"title":"Default Title","offer_id":47666937168131,"sku":"PHB0000077","price":540.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Sirinju02Cover_page-0001_1.jpg?v=1769064795"},{"product_id":"seragina-kidi-mythological-stories-dr-ruknimini-raghuram-kannada-book","title":"ಸೆರಗಿನ ಕಿಡಿ","description":"\u003cp\u003eಮಹಾಭಾರತದ ಮಹಾರಾಣಿಯರ ಕಥೆಗಳು \u003c\/p\u003e\n\u003cp\u003eಶ್ರೀಮತಿ ರುಕ್ಕಿಣಿ ರಘುರಾಮ್ ಅವರ ಈ ಕೃತಿ 'ಸೆರಗಿನ ಕಿಡಿ' ಮಹಾಭಾರತದಂತಹ ಪುರುಷ ಪ್ರಧಾನ ಮಹಾ ಕಾವ್ಯದಲ್ಲಿ ಸ್ತ್ರೀ ಸಂವೇದನೆಯನ್ನು ಅತ್ಯಂತ ಸೂಕ್ಷ್ಮವಾಗಿ ಅನಾವರಣಗೊಳಿಸಿದೆ. ಗಂಗೆಯ ಮೌನ ಬವಣೆ, ಸತ್ಯವತಿಯ ರಾಜ ತಾಂತ್ರಿಕ ಚತುರತೆ, ಅಂಬೆಯ ಆಚಲ ಪ್ರತಿರೋಧ ಹಾಗೂ ದ್ರೌಪದಿಯ ಅಗ್ನಿ ಸದೃಶ ವ್ಯಕ್ತಿತ್ವವನ್ನು ಲೇಖಕರು ಕಟ್ಟಿ ಕೊಟ್ಟಿರುವ ರೀತಿ ಅನನ್ಯವಾಗಿದೆ. ಅಧಿಕಾರ ಮತ್ತು ಯುದ್ಧದ ನೆರಳಿನಲ್ಲಿ ಬದುಕಿದ ಈ ಸ್ತ್ರೀಯರು ಕೇವಲ ನೆಪ ಮಾತ್ರದ ಪಾತ್ರಗಳಲ್ಲ ಬದಲಿಗೆ ಇಡೀ ಕಾವ್ಯದ ಗತಿಯನ್ನು ಬದಲಿಸಿದ ಅದೃಶ್ಯ ಶಕ್ತಿಗಳು.\u003c\/p\u003e\n\u003cp\u003eವಿಧಿಗೆ ಶರಣಾಗದೆ, ಅರಮನೆಯ ಕಟ್ಟು ಪಾಡುಗಳ ನಡುವೆಯೂ ತಮ್ಮ ಬುದ್ಧಿ ಶಕ್ತಿ ಮತ್ತು ಧೈರ್ಯದಿಂದ ಅಸ್ತಿತ್ವವನ್ನು ಉಳಿಸಿಕೊಂಡ ಕುಂತಿ, ಗಾಂಧಾರಿ, ಉಲೂಪಿ ಹಾಗೂ ಉತ್ತರೆಯಂಥ ಪಾತ್ರಗಳ ಜೀವನದ ಸವಾಲುಗಳನ್ನು ಲೇಖಕರು ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಪುರುಷರ ಅಹಂಕಾರ ಮತ್ತು ಯುದ್ದದ ಕ್ರೌರ್ಯದ ನಡುವೆ ಈ ಮಹಿಳೆಯರು ಅನುಭವಿಸಿದ ಮಾನಸಿಕ ಸಂಘರ್ಷ ಹಾಗೂ ಅವರು ತೋರಿದ ಸಹನೆ ನಮಗೆ ಇಂದಿಗೂ ಸ್ಪೂರ್ತಿದಾಯಕವಾಗಿದೆ. ಮಹಾಭಾರತವನ್ನು ಹೆಣ್ಣಿನ ಕಣ್ಣಿಂದ ನೋಡ ಬಯಸುವ ಪ್ರತಿಯೊಬ್ಬರಿಗೂ ಈ ಕೃತಿ ಒಂದು ಮಾರ್ಗದರ್ಶಿಯಾಗಿದೆ.\u003cbr\u003e\u003c\/p\u003e\n\u003cp\u003e-ಡಾ. ಗುರುರಾಜ ಕರಜಗಿ\u003c\/p\u003e","brand":"Dr. Rukmini Raghuram","offers":[{"title":"Default Title","offer_id":47670052389123,"sku":"HB00005503160","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SeraginaKidi.jpg?v=1769155065"},{"product_id":"hettavara-neralu-novel-maithreyi-kannada-book","title":"ಹೆತ್ತವರ ನೆರಳು","description":"\u003cp\u003eವಂದೂರಾಗ ವಬ್ಬಾಕಿ ಹುಡಿಗಿರತಾಳಂತ. ಅಕಿ ಕಡೆ ವಂದು ಬೆಕ್ಕಿರತದಂತ. ಅದು ಆವಾಗಾವಾಗ ದಿಂಗ ಬಡಧಾಂಗ ಅಂತರದಾಗ ದೃಷ್ಟಿ ನೆಟ್ಟು ದಿಟ್ಟಿಸಿ ನೋಡತಿರತದಂತ. ಅದಕ್ಕೇನ ಕಾಣಸ್ತಿತ್ತು? ಆ ಹುಡುಗಿ ಅವ್ವಗ ಯಾವುದೋ ವಿಚಿತ್ರ ಥಂಡಿ ಹಿಡದಿತ್ತಂತ. ಅವರ ಸುತ್ತಮುತ್ತಲಿದ್ದ ಮಂದಿ-ಗಿಂದಿ - ಸಾಲದಕ್ಕ ವಂದು ಹಂದಿ - ಯಲ್ಲಾ ಕೂಡಿ ಘಾಳ್ಯಾಗ ತೂರಿಧಾಂಗ ಕಥಿ ಆದರಂತ. ಆಕಾರಿಲ್ಲದೆ ತೇಲ್ಯಾಡುವ ಈ ಕಥಿಗಳು ಭಾಷಾದಾಗ ಸೆರಿ ಹಿಡದರ ಹೆಂಗ ಕಾಣಸಬಹುದು? ಅವು ಏನು ತೋರಸಬಹುದು? ಏನು ಕಳಕೊಬಹುದು?\u003c\/p\u003e\n\u003cp\u003eಹೆತ್ತವರ ನೆರಳು ಮೈತ್ರೇಯಿಯವರ ಮೂರನೆಯ ಪುಸ್ತಕ, ಎರಡನೆಯ ಕಾದಂಬರಿ, ಹಾಗೂ ಮೊದಲ ಕನ್ನಡ ಕೃತಿ. ಅವರ ಇಂಗ್ಲಿಷ್ ಕಾದಂಬರಿ ಸಿಲ್ವಿಯಾ ಭಾರತ, ಬ್ರಿಟನ್, ಮತ್ತು ಅಮೇರಿಕಾಗಳಲ್ಲಿ ಪ್ರಕಟವಾಗಿದೆ. ಗುಡ್ಡೆ ನಗರ್ ಅವರ ಇಂಗ್ಲಿಷ್ ಕಥಾ ಸಂಕಲನ. ಹಳ್ಳ ಬಂತು ಹಳ್ಳ ಮತ್ತು ತೇಜೋ ತುಂಗಭದ್ರಾ ಕಾದಂಬರಿಗಳ ಇಂಗ್ಲಿಷ್ ಅನುವಾದಗಳಿಗೆ ಮೈತ್ರೇಯಿಯವರಿಗೆ ಎರಡು ಬಾರಿ ಕುವೆಂಪು ಭಾಷಾ ಭಾರತಿ ಅನುವಾದಿತ ಪುಸ್ತಕ ಬಹುಮಾನ ಬಂದಿದೆ. ಅವರ ಬರಹ ಮತ್ತು ಅನುವಾದಗಳಿಗೆ ಲಿಟರೇಚರ್ ಅಕ್ರಾಸ್ ಫ್ರಾಂಟಿಯರ್ಸ್ ಮತ್ತು ವೇಲ್ಸ್ ವಿಶ್ವವಿದ್ಯಾಲಯಗಳಿಂದ ಚಾರ್ಲ್ಸ್ ವೊಲಸ್ ಫೆಲೊಶಿಪ್ ಬಂದಿದೆ. ಮೈತ್ರೇಯಿ ಹುಟ್ಟಿದ್ದು ಹುಬ್ಬಳ್ಳಿಯಲ್ಲಿ. ಅವರು ಹೈದರಾಬಾದಿನಲ್ಲಿ ಎಮ್.ಎ. ಓದಿ, ಈಗ ಬ್ರಿಟನ್ನಿನಲ್ಲಿ ಪಿಎಚ್.ಡಿ. ಅಧ್ಯಯನದಲ್ಲಿ ತೊಡಗಿದ್ದಾರೆ. \u003c\/p\u003e","brand":"Maithreyi","offers":[{"title":"Regula Copy","offer_id":47744208797955,"sku":"HB0000550360","price":500.0,"currency_code":"INR","in_stock":true},{"title":"Signed Copy","offer_id":47744209518851,"sku":"HB0000550364","price":500.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HettavaraNeralu.jpg?v=1769769964"},{"product_id":"digital-arrest-madhu-y-n-kannada-books","title":"ಡಿಜಿಟಲ್ ಅರೆಸ್ಟ್","description":"\u003cp\u003eದಿನಬೆಳಗಾದರೆ ಪತ್ರಿಕೆಗಳಲ್ಲಿ \"ಯಾರೋ ಅಷ್ಟು ಲಕ್ಷ ಕಳೆದುಕೊಂಡರು, ಇಷ್ಟು ಕೋಟಿ ಕಳೆದುಕೊಂಡರು,\" ಎಂಬ ಸುದ್ದಿ ಓದಿ ನಮಗೆ ಆಶ್ಚರ್ಯವಾಗುತ್ತದೆ. \"ಛೇ! ಇದು ಹೇಗೆ ಸಾಧ್ಯ?\" ಎಂದು ಹುಬ್ಬೇರಿಸುತ್ತೇವೆ. 'ನಾನಂತೂ ಈ ಬಲೆಯಲ್ಲಿ ಬೀಳಲ್ಲಪ್ಪ' ಎಂದು ಬೆನ್ನು ತಟ್ಟಿಕೊಳ್ಳುತ್ತೇವೆ.\u003c\/p\u003e\n\u003cp\u003eಆದರೆ ಸ್ವಲ್ಪ ಆಳಕ್ಕಿಳಿದು ನೋಡಿದರೆ ಬೆಚ್ಚಿಬೀಳಿಸುವ ಸತ್ಯವೊಂದು ಎದುರಾಗುತ್ತದೆ. ಇಲ್ಲಿ ವಂಚನೆಗೆ ಒಳಗಾದ ಯಾರೂ ದಡ್ಡರಲ್ಲ; ಇವರಲ್ಲಿ ಅನೇಕರು ಸಾಫ್ಟ್ವೇರ್ ಎಂಜಿನಿಯರ್ಗಳು, ಬ್ಯಾಂಕ್ ಮ್ಯಾನೇಜರ್ಗಳು ಅಥವಾ ನಿವೃತ್ತ ಅಧಿಕಾರಿಗಳು!\u003c\/p\u003e\n\u003cp\u003eಹೋಗಲಿ, ಆ ಕಡೆ ಫೋನಿನಲ್ಲಿರುವ ವಂಚಕ ಇವರಿಗಿಂತ ಬುದ್ಧಿವಂತನೇ? ಅದೂ ಇಲ್ಲ. ಅವನಿಗೆ ಸರಿಯಾಗಿ ಇಂಗ್ಲಿಷ್ ಮಾತನಾಡಲು ಸಹ ಬರುತ್ತಿರುವುದಿಲ್ಲ. ಆದರೂ ತನಗಿಂತ ಹೆಚ್ಚು ತಿಳಿದವರನ್ನು ಖೆಡ್ಡಾಗೆ ಕೆಡವುತ್ತಾನಲ್ಲ, ಹೇಗೆ?\u003c\/p\u003e\n\u003cp\u003eಇದಕ್ಕೆ ಉತ್ತರ ನಿಮ್ಮ 'ಬುದ್ಧಿವಂತಿಕೆ'ಯಲ್ಲಿ ಇಲ್ಲ; ಅದು ಆ ಕ್ಷಣದ ನಿಮ್ಮ 'ಮನೋಸ್ಥಿತಿ'ಯಲ್ಲಿದೆ. ವಂಚಕರು ಹ್ಯಾಕ್ ಮಾಡುವುದು ನಿಮ್ಮ ಫೋನನ್ನಲ್ಲ, ನಿಮ್ಮ ಮೆದುಳನ್ನು, ಚೆನ್ನಾಗಿ, ಜವಾಬ್ದಾರಿಯಿಂದ ಡೈವಿಂಗ್ ಮಾಡುವವನೂ ಸಹ ಕೆಲವೊಮ್ಮೆ ಯಾಮಾರಿ ಅಪಘಾತ ಮಾಡಿಕೊಂಡಂತೆ.\u003c\/p\u003e\n\u003cp\u003eಈ ನಿಟ್ಟಿನಲ್ಲಿ ನೀವು ಸದಾ ಜಾಗೃತರಾಗಿರಲು, ನಿಮ್ಮ ಸುಪ್ತಪ್ರಜ್ಞೆಯನ್ನು ತರಬೇತಿಗೊಳಿಸಲು ಸ್ವಲ್ಪ ವಿಜ್ಞಾನ, ಸ್ವಲ್ಪ ಮನೋವಿಜ್ಞಾನ, ಸ್ವಲ್ಪ ತತ್ವಜ್ಞಾನ, ಸ್ವಲ್ಪ ತಂತ್ರಜ್ಞಾನ, ಅದರೊಂದಿಗೆ ತುಸು ಕಾನೂನಿನ ಅರಿವು-ಹೀಗೆ ಸುರಕ್ಷಿತ ಬದುಕಿಗೆ ಬೇಕಾದ ಎಲ್ಲವನ್ನೂ ಒಳಗೊಂಡ ಒಂದು ಪುಟ್ಟ ಕೈಪಿಡಿ ಈ ಪುಸ್ತಕ.\u003c\/p\u003e","brand":"Madhu. Y. N.","offers":[{"title":"Default Title","offer_id":47713614987523,"sku":"HB00006047","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/DigitalArrest_KannadaBook_FP.jpg?v=1770293193"},{"product_id":"digital-arrest-english-books","title":"Digital Arrest","description":"\u003cp\u003eEvery morning, we read headlines about someone losing lakhs or crores to fraud. We shake our heads in disbelief. \"How is that even possible?\" we wonder, quietly patting ourselves on the back: I'd never fall for something like that.\u003c\/p\u003e\n\u003cp\u003eBut look closer, and a startling truth emerges. The victims aren't fools. Many are software engineers, bank managers, retired officials. And the scammer on the other end? Not particularly clever either-often someone who can barely string together a sentence in English. Yet they consistently trap people far more educated than themselves. How?\u003c\/p\u003e\n\u003cp\u003eThe answer lies not in your intelligence, but in your state of mind at that moment. Scammers don't hack your phone-they hack your brain. Even the most careful driver sometimes has a lapse and meets with an accident.\u003c\/p\u003e\n\u003cp\u003eThis book is a compact guide to staying alert-training your subconscious through a blend of science, psychology, philosophy, technology, and legal awareness. Everything you need for a safer life, in one place.\u003c\/p\u003e","brand":"Madhu. Y. N.","offers":[{"title":"Default Title","offer_id":47713746059523,"sku":"HEB00001004","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/DigitalArrest_EnglishBook_FP.jpg?v=1770300605"},{"product_id":"putta-gowri-jote-putt-ganapa","title":"ಪುಟ್ಟ ಗೌರಿ ಜೊತೆ ಪುಟ್ಟ ಗಣಪ","description":"\u003cp\u003e\u003cspan\u003eಅರೆ ಮಲೆನಾಡಿನ ಭದ್ರಾವತಿ ನನ್ನ ಊರು. ಸ್ನಾತಕೋತ್ತರ ಪದವಿ ಪಡೆದಿದ್ದು ವಿಜ್ಞಾನ ವಿಭಾಗದಲ್ಲಿ, ಪುಟಾಣಿಗಳಿಗೆ ಶಿಕ್ಷಕಿಯಾಗಿ ಪಾಠ ಮಾಡುತ್ತಿರುವುದು ಕೂಡ ವಿಜ್ಞಾನವೇ ಆದರೂ, ಸಾಹಿತ್ಯ ನನ್ನ ಆಸಕ್ತಿಯ ಕ್ಷೇತ್ರ ಓದಿನ ಪಯಣ ಶುರುವಾಗಿದ್ದು ಸಾಯಿಸುತೆ, ತ್ರಿವೇಣಿ ಅವರುಗಳ ಪುಸ್ತಕದಿಂದ ಆದರೂ, ತೇಜಸ್ವಿಯವರ ಬರಹಗಳು ತುಂಬಾ ಪ್ರಭಾವಿಸಿವೆ. ಬದುಕಿನ ಎಲ್ಲಾ ಹಂತಗಳಲ್ಲೂ ಪುಸ್ತಕವನ್ನು ಜೊತೆ ಮಾಡಿಕೊಂಡವಳಿಗೆ ಎಲ್ಲೋ ಒಂದು ಕಡೆ ನಾಲ್ಕು ಅಕ್ಷರವನ್ನು ಬರೆಯುವ ಆಸೆ ಕೂಡ ಅವಾಗವಾಗ ಮೂಡುತ್ತಿತ್ತು. ನಾನೇ ಪುಟ್ಟ ಪುಟ್ಟ ಎರಡು ಮಕ್ಕಳ ತಾಯಿಯಾದ ಮೇಲೆ ಅದಕ್ಕೊಂದು ಮೂರ್ತ ರೂಪ ಸಿಕ್ಕಿತು. ಹಾಗೆ ಮೂಡಿಬಂದ ನನ್ನ ಮೂರನೇ ಕೂಸು 'ಪುಟ್ಟ ಗೌರಿ ಜೊತೆ ಪುಟ್ಟ ಗಣಪ\", 'ಮನೆಯಲ್ಲಿ ಗಂಡು ಪೋರ, ಕೊಟ್ಟಿಗೆಯಲ್ಲಿ ಹೆಣ್ಣು ಕರು ಹುಟ್ಟಿದರೆ ಚಂದ\" ಅನ್ನೋದು ದೊಡ್ಡವರ ವ್ಯವಹಾರ ಲೋಕದ ಮಾತು. ಆದರೆ ಮಕ್ಕಳ ಮನಸ್ಸಿಗೆ ಈ ವ್ಯವಹಾರ, ಲಾಭ-ನಷ್ಟದ ಸೋಂಕಿಲ್ಲ. ಅವರ ಲೋಕದಲ್ಲಿ ಮನುಷ್ಯರು, ಪ್ರಾಣಿಗಳು, ಹೆಣ್ಣು-ಗಂಡು ಎಲ್ಲಾ ಒಂದೇ.0 ಹಾಗಾಗಿಯೇ ಈ ಪುಟ್ಟ ಗೌರಿಗೆ ಕೊಟ್ಟಿಗೆಯ ಗಣಪನನ್ನು ಕಂಡರೆ ಜೀವ ಆದರೆ ದೊಡ್ಡವರ ಸಣ್ಣತನದಿಂದ ಗಣಪನಿಂದ ದೂರವಾಗುವ ಭಯ... ಮುಂದೇನಾಗುತ್ತದೆ ಅನ್ನುವುದನ್ನು ಪುಟಾಣಿ ಗೌರಿ-ಗಣಪನ ಕತೆಯನ್ನು ಓದಿ ತಿಳಿದುಕೊಳ್ಳಿ...\u003c\/span\u003e\u003c\/p\u003e","brand":"Vidhi Hemanth","offers":[{"title":"Default Title","offer_id":47719393493251,"sku":"PHB0000078","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PUTTGAWRIPUTTGANAPACover_FP.pdf.png?v=1770448344"},{"product_id":"abheera-novel-arjun-devaladakere-kannada-book","title":"ಅಭೀರ","description":"\u003cp\u003eಅಭೀರ(ಅತೀತ ಭಾಗ - ೨)\u003c\/p\u003e\n\u003cp\u003e - ಇದು ರಕ್ತದಲ್ಲಿ ಬರೆದ ಪ್ರೇಮ ಕಥೆ  \u003c\/p\u003e\n\u003cp\u003eಹಾಗೆ ಕರ್ನಾಟಕ ಮತ್ತು ಆಂಧ್ರದ ಗಡಿ ಜಿಲ್ಲೆ ಬಳ್ಳಾರಿಯ ನಿಲ್ಲೂರಿನಿಂದ ಅನಾಮತ್ತಾಗಿ ಹೊರಡಿಸಿಕೊಂಡು ಬಂದ ಲೀಲಾಳನ್ನ, ಅದೆಷ್ಟೋ ದಿನಗಳ ಕಾಲ ನಡೆಸಿಕೊಂಡೇ ಹೊರಟಿದ್ದ ಹರಿಣಾಕ್ಷ. ಅವಳು ಕೂಡ ಯಾವುದೋ ಟ್ರಾನ್ಸ್ ಗೆ ಒಳಗಾದವಳಂತೆ, ಅವನ ಹಿಂದೆಯೇ ತಾಯಿಯನ್ನ ಹಿಂಬಾಲಿಸುವ ಮಗುವಿನಂತೆ ಹೆಜ್ಜೆಗೆ ಹೆಜ್ಜೆ ಸೇರಿಸಿ ನಡೆಯುತ್ತಿದ್ದಳು. ಹರಿಣಾಕ್ಷ ಬಿಳಿ ಪಂಚೆ ಬಿಳಿ ಅಂಗಿಯನ್ನ ಧರಿಸಿ, ತನ್ನ ಇಳೆ ಬೀಳುವ ನೀರು ಕಾಣದ ಕೂದಲನ್ನ ಮಡಚಿ ತಲೆಗೆ ಕಟ್ಟಿದ್ದ ಪೇಟದಲ್ಲಿ ಅಡಗಿಸಿದ್ದ. ಉದ್ದ ಗಡ್ಡವನ್ನ ನೀಟಾಗಿ ಅರ್ಧಕ್ಕೆ ಕತ್ತರಿಸಿ ಶಿವಾಜಿ ಮಹಾರಾಜರ ಗಡ್ಡದಂತೆ ಮಾಡಿಕೊಂಡಿದ್ದ. ಜರಿ ಲಂಗ ತೊಟ್ಟಿದ್ದ ಲೀಲಾ ಅವನನ್ನ ಹಿಂಬಾಲಿಸುತ್ತಿದ್ದರೆ, ಗಂಡ ಹೆಂಡತಿ ಯಾವುದೋ ಹಬ್ಬಕ್ಕೋ, ಜಾತ್ರೆಗೋ, ಮದುವೆಗೋ ಹೋಗಿ ಮನೆಗೆ ಹಿಂದುರುಗುತ್ತಿರುವಂತೆ ಭಾಸವಾಗುತಿತ್ತು ನೋಡುಗರಿಗೆ. ಲೀಲಾಳನ್ನ ಹಾಗೆ ಅನಾಮತ್ತು ಹೊರಡಿಸಿಕೊಂಡು ಹೊರಟ ಮೊದಲ ದಿನ, ತಲೆ ಸುಡುವ ಬಿಸಿಲನ್ನೂ ಲೆಕ್ಕಿಸದೆ ಸಂಜೆಯವರೆಗು ಎಲ್ಲಿಯೂ ನಿಲ್ಲದೆ ನಡಿಸಿದ್ದ ಹರಿಣಾಕ್ಷ. ಮಾರ್ಗ ಮಧ್ಯೆ ಒಂದೇ ಒಂದು ಮಾತಿಲ್ಲ. ಮನಸ್ಸು ಟ್ರಾನ್ಸ್ ನಲ್ಲಿದ್ದರು, ಹೊಟ್ಟೆ ಕೇಳಬೇಕಲ್ಲ. ಸಂಜೆಯ ವೇಳೆಗೆ, ಹಸಿದ ಹೊಟ್ಟೆ ನಡಿಗೆಯನ್ನ ಕುಂಠಿತ ಮಾಡಿ, ಕೊನೆಗೊಮ್ಮೆ ದಾರಿಯಲ್ಲಿ ಪ್ರಜ್ಞೆ ತಪ್ಪಿದ್ದಳು ಲೀಲಾ. ಹರಿಣಾಕ್ಷನಿಗೆ ಹಸಿವಿನ ತೊಂದರೆಯಿರಲಿಲ್ಲ. ಅವನು ನೀರಾನ್ನ ತ್ಯಜಿಸಿ ವಾರಗಳೇ ಕಳೆದಿತ್ತು. ಹಸಿವು, ಅವನು 'ಬಾ' ಎಂದರೆ ಮಾತ್ರ ಬರುತಿತ್ತು. ಅಘೋರಿಗಳೇ ಹಾಗೆ, ಅವರು ಎಲ್ಲವನ್ನ ಮೀರಿದವರು. ಬೇಕೆಂದರೆ ಬೇಕು, ಬೇಡವೆಂದರೆ ಬೇಡ. ಸರಳ, ಕ್ಷಣಿಕ ಕಾಮದ ಉತ್ತುಂಗದಲ್ಲಿ ಲೈಂಗಿಕವಾಗಿ ಸಕ್ರಿಯರಾಗಿದ್ದಾಗಲೂ ಗಂಟೆಗಟ್ಟಲೆ ಸ್ಖಲನವನ್ನ ಮುಂದೂಡುವ ತಾಕತ್ತಿರುವ ಸಾಧಕರಿಗೆ, ಹಸಿವೊಂದು ಲೆಕ್ಕವೇ!? ಸಂಜೆಯ ವೇಳೆಗೆ ಹರಿಣಾಕ್ಷನಿಗೆ ‘ಇವಳು ನನ್ನ ಹಾಗೆ ಅಘೋರಿಯಲ್ಲ ಇವಳಿಗೆ ಹಸಿವು, ಬಾಯಾರಿಕೆಗಳಾಗುತ್ತವೆ’ ಎನ್ನುವ ಸತ್ಯದ ನೆನಪಾಗಿ, ರಸ್ತೆ ಬದಿಯ ಅಂಗಡಿಯೊಂದರಲ್ಲಿ ಒಂದಷ್ಟು ಬಿಸ್ಕತ್, ನೀರು ಕೊಡಿಸಿದ್ದ. ಸ್ವಲ್ಪ ಚೇತರಿಸಿಕೊಂಡವಳನ್ನ ಮತ್ತೆ ನಡೆಸಿಕೊಂಡು ಹೊರಟಿದ್ದ. ಮುಂದಿನ ಪೂರ್ಣ ಹುಣ್ಣಿಮೆಯ ದಿನದ ಒಳಗೆ ಗುವಾಹಟಿಯ ಕಾಮಾಕ್ಯ ದೇವಸ್ಥಾನ ತಲುಪುವುದಷ್ಟೇ ಅವನ ಸದ್ಯದ ಗುರಿ...\u003c\/p\u003e\n\u003cp\u003e\u003cbr\u003eಇದು ಅತೀತ ಕಾದಂಬರಿಯ ಮುಂದುವರಿದ ಭಾಗ. ಅತೀತ ಕಾದಂಬರಿಯನ್ನ ಓದಿದ ಮೇಲೆಯೇ ಈ ಕಾದಂಬರಿಯನ್ನ ಓದುವುದು ಉತ್ತಮ.\u003c\/p\u003e\n\u003cp\u003e-ಅರ್ಜುನ್ ದೇವಾಲದಕೆರೆ \u003c\/p\u003e","brand":"Arjun Devaladakere","offers":[{"title":"Default Title","offer_id":47741744218371,"sku":"HB00006217","price":325.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/616243359_25819230494368330_7603252196882222596_n_1.jpg?v=1771506219"},{"product_id":"vikramaditya-historical-novel-kannada-book","title":"ವಿಕ್ರಮಾದಿತ್ಯ","description":"\u003cp\u003e'ಪಂಚೆ ಇಲ್ಲದೇ ಮಲಗಿಯೇನು; ಖಡ್ಗ ಇಲ್ಲದೇ ವಿಶ್ರಮಿಸಲಾರೆ' ಎನ್ನುವ ಮೇಘಚಾರ್ಯರ ಅದ್ವಿತೀಯ ಬದ್ಧತೆ, ರಾಜಕೀಯವನ್ನು, ನಮ್ಮ ಕಾಲಘಟದ ಗಮನಾರ್ಹ ಕಾದಂಬರಿಕಾರ ಸಂತೋಷಕುಮಾರ ಮೆಹೆಂದಳೆಯವರು ಕಟ್ಟಿಕೊಡುತ್ತಾರೆ. ಐತಿಹಾಸಿಕ ಕಾದಂಬರಿಯನ್ನು 'ಕಾಲಯಾನದ ಕಲೆ' ಸಿದ್ದಿಸಿದವರು ಮಾತ್ರ ಮನೋಜ್ಞವಾಗಿ, ವಸ್ತುನಿಷ್ಟವಾಗಿ, ವರ್ತಮಾನದಲ್ಲಿ ಕುಳಿತು ಭೂತವನ್ನು ಕರಾರುವಾಕ್ಕಾಗಿ ಕಲ್ಪಿಸಿಕೊಳ್ಳುತ್ತ ಆಗಿನ ಭೂಗೋಲ, ಶೈಲಿ, ಸಂಪರ್ಕ, ಯುದ್ಧಕಲೆ, ವ್ಯೂಹ ರಚನೆಗಳನ್ನೆಲ್ಲ ದಾಖಲಿಸುವುದು ನಿಖರ ಅಧ್ಯಯನಶೀಲತೆಯಿಂದ ಮಾತ್ರ ಸಾಧ್ಯ.\u003cbr\u003e'ಅತ್ತ ಇತಿಹಾಸದಲ್ಲಿ ವಿಕ್ರಮಾದಿತ್ಯ ಜಯಭೇರಿ ಬಾರಿಸುತ್ತಾನೆ. ಇತ್ತ ವರ್ತಮಾನದಲ್ಲಿ ಸಂತೋಷಕುಮಾರ ಮೆಹೆಂದಳೆ ಗೆಲ್ಲುತ್ತಾರೆ' ಹಾಗಾಗೇ 'ಪುಸ್ತಕ ಇಷ್ಟವಾಗದಿದ್ದರೆ ಹಣ ಮರಳಿಸುವ ಘೋಷಣೆ ಮೆಹೆಂದಳೆಯವರದ್ದು'\u003cbr\u003e\u003cbr\u003eಡಾ. ಶಿವಾನಂದ ಕುಬಸದ\u003cbr\u003eಸಾಹಿತಿಗಳು ಮತ್ತು ಶಸ್ತ್ರ ಚಿಕಿತ್ಸಕರು\u003cbr\u003e\u003cbr\u003eವಾತಾಪಿಯ ಎರಡನೇ ಭಾಗ ವಿಕ್ರಮಾದಿತ್ಯನ ರೂಪದಲ್ಲಿ ಪ್ರಕಟಣಾಪೂರ್ವ ಓದಿಗೆ ಕೂಲಂಕಶವಾಗಿ ಓದಿಗೆ ದಕ್ಕಿತು. ಕೈತಪ್ಪಿದ್ದ ಸಾಮ್ರಾಜ್ಯವನ್ನು ಪುನಃ ಕಟ್ಟಿದ್ದು ಮಾತ್ರವಲ್ಲದೆ, ಮತ್ತೊಂದು ಉತ್ಕರ್ಷಕ್ಕೆ ಕೊಂಡೊಯ್ದ ಸಾಹಸಗಾಥೆ.\u003cbr\u003eಅನ್ವೇಷಣೆಯಲ್ಲಿ ಸಿಕ್ಕಿದ ವಿರಳ ಸಾಕ್ಷ್ಯಗಳನ್ನು ಬಳಸಿ ಕಲ್ಪನೆಯ ವಿಸ್ತಾರದಡಿಯಲ್ಲಿ ಬೆಳೆದ ವಿಕ್ರಮಾದಿತ್ಯನ ಪ್ರಯತ್ನ, ಸಾಫಲ್ಯದ ಕಥಾನಕವಿದು. ನೇರ ನಿರೂಪಣೆಯ ವಿಧಾನವನ್ನು ಅಳವಡಿಸಿರುವ ಕಾರಣ ಓದು ಸರಳವಾಗಿ ಮುಂದುವರೆಯುತ್ತದೆ.\u003c\/p\u003e\n\u003cp\u003eಡಾ. ಸುದರ್ಶನ ರಾವ್. ಕೆನಡಾ \u003c\/p\u003e\n\u003cp\u003eವೈಜಯಂತಿಪುರ, ವಾತಾಪಿ ಮುಂತಾದ ಯಶಸ್ವೀ ಕಾದಂಬರಿಗಳಂತೆ ಇನ್ನೊಂದು ಸೊಗಸಾದ ಚಾರಿತ್ರಿಕ ಕಾದಂಬರಿಯನ್ನು ಸಾಕಷ್ಟು ಅಧ್ಯಯನ, ಸಂಶೋಧನೆ ಮತ್ತು ಕ್ಷೇತ್ರಕಾರ್ಯಗಳ ಮೂಲಕ ಪುಲಕೇಶಿಯ ಪುತ್ರ ವಿಕ್ರಮಾದಿತ್ಯನ ಕುರಿತು ಬೆಳಕು ಚೆಲ್ಲುತ್ತಿದ್ದೀರಿ.\u003cbr\u003eಐತಿಹಾಸಿಕ ಕಾದಂಬರಿಗಳ ರಚನೆಯಲ್ಲಿ ಕುದುರಿದ ಕೈ ನಿಮ್ಮದು. ಕುತೂಹಲ ಹುಟ್ಟಿಸುತ್ತ ಸಾಗುವ ಕಾದಂಬರಿ, ಪೆರವಲನಲ್ಲೂರಿನ ಕದನದಲ್ಲಿ ವಿಕ್ರಮಾದಿತ್ಯನ ಸೈನ್ಯ ಪಲ್ಲವರ ಸಂಘಟಿತ ಸೈನ್ಯವನ್ನು ಸೋಲಿಸುವ ಮೂಲಕ ಮೂರು ಶರಧಿಗಳ ಒಡೆಯನಾಗುವ ಕಥನವನ್ನು ರೋಚಕವಾಗಿ ಕಟ್ಟಿ ಕೊಟ್ಟಿದ್ದೀರಿ. ಪ್ರತಿಭೆ, ಪರಿಶ್ರಮಗಳ ಈ ಪ್ರಯತ್ನಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ.\u003c\/p\u003e\n\u003cp\u003eಡಾ. ಗಜಾನನ ಶರ್ಮ \u003cbr\u003eಖ್ಯಾತ ಕಾದಂಬರಿಕಾರರು\u003c\/p\u003e","brand":"Santosh Kumar Mehandele","offers":[{"title":"Default Title","offer_id":47788561105155,"sku":"HB0000665","price":499.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-24at5.10.16PM.jpg?v=1771933425"},{"product_id":"playing-god-novel-dr-shantala-english-book","title":"PLAYING GOD","description":"\u003cp\u003eThirteen-year-old Ranjana Joshi is a musical prodigy, but her standing ovation ends in a terrifying seizure. For pediatrician Dr. Nirupama, what begins as a routine emergency quickly spirals into a horrifying medical mystery.\u003c\/p\u003e\n\u003cp\u003eAs she encounters more children suffering from rare, unexplained diseases, Nirupama discovers a chilling common thread: every child was conceived via IVF at the elite Hopes Unit of Life Line Hospital. The discovery hits home with a deafening blow-Nirupama is currently pregnant with twins, conceived at the very same clinic.\u003c\/p\u003e\n\u003cp\u003eWhen an attempt is made on her life within the hospital's own walls, Nirupama realizes she isn't just fighting for the truth; she is fighting for the survival of her unborn children. In a world where scientists can manipulate embryos to create \"made-to-order\" babies, how far will they go to achieve perfection? And when humanity begins playing God, who pays the ultimate price?\u003c\/p\u003e","brand":"Dr. Shantala","offers":[{"title":"Default Title","offer_id":47819754766595,"sku":"PHB0000080","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PlayingGod.jpg?v=1772697459"},{"product_id":"taliban-historical-and-political-study-of-afghanistan-kannada-book","title":"ತಾಲಿಬಾನ್","description":"\u003cp class=\"x_MsoNormal\"\u003e\u003cspan lang=\"KN\" data-olk-copy-source=\"MessageBody\"\u003eಅಫಘಾನಿಸ್ತಾನ ಅಂದರೆ ಸುಂದರ ಪರ್ವತ ಸಾಲು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಹಿಮದ ಹನಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಕಡಲೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಅಂಜೂರ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eದ್ರಾಕ್ಷಿ ಮತ್ತು ಅತ್ತರ್ನ ಘಮ. ಅಫಘಾನಿಸ್ತಾನ ಅಂದರೆ ಶೀರ್ಖುರ್ಮ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಖಾಬಿಲ್ಪಿಲಾವ್\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಬರ್ಫಿ. ಅಫಘಾನಿಸ್ತಾನ ಅಂದರೆ ಜೋಝ್ಬಾಝಿ ಎಂಬ ಕುಂಟಾಬಿಲ್ಲೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಡಂಬುರ ಮತ್ತು ರುಬಾಬ್\u003c\/span\u003e\u003cspan\u003e,\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eರಬಿಯಾ ಬಾಲ್ಖಿಯ ಪ್ರೇಮ ಕಥನ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eರೂಮಿ ಎಂಬ ಸಂತನ ಪ್ರಜ್ಞೆ ಮತ್ತು ನಿನ್ನ ಹೃದಯ ಸಾಗುವ ಹಾದಿಯಲ್ಲಿ ನಿನ್ನ ಪಾದಗಳೂ ಸಾಗಲಿ ಎಂಬ ಜನಪದರ ಸಾಲು.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಅಫಘಾನಿಸ್ತಾನ ಅಂದರೆ ಸಿಡಿದ ಬಾಂಬು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಹುರಿದ ದೇಹ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಹರಿದ ರಕ್ತ ಮತ್ತು ಬಂದೂಕಿನ ನಳಿಗೆ. ಅಫಘಾನಿಸ್ತಾನ ಅಂದರೆ ಧರ್ಮ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eರಾಜಕೀಯ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eವಿದೇಶಿ ಹಸ್ತಕ್ಷೇಪಗಳ ನಡುವೆ ಪ್ರಜೆಗಳ ಹುಟ್ಟು ಸಾವಿನ ಹೋರಾಟಗಳ ಹಾದಿ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಅಫಘಾನಿಸ್ತಾನ ಅಂದರೆ ತಾಲಿಬಾನ್ ಎಂಬ ಒಂದು ಯುಗದ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಒಂದು ಮನೋಭಾವದ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಮತ್ತು ಎಂದೂ ಮಾಯದ ಹಸಿಹಸಿ ಗಾಯ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp\u003e\u003cspan lang=\"KN\"\u003eಅಂತಹ ಅಫಘಾನಿಸ್ತಾನದ ಮತ್ತು ಅದಕ್ಕಂಟಿದ ಗಾಯಗಳ ಸಂಪೂರ್ಣ ಚಿತ್ರಣ ಈ ಪುಸ್ತಕ.\u003c\/span\u003e\u003c\/p\u003e","brand":"Gopalakrishna Kuntini","offers":[{"title":"Default Title","offer_id":47822326202627,"sku":"HB00006687","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Taliban.jpg?v=1772794637"},{"product_id":"samagra-kathegalu-collection-of-stories-shree-krishna-alanahally-kannada-book","title":"ಸಮಗ್ರ ಕಥೆಗಳು","description":"\u003cp\u003eಶ್ರೀಕೃಷ್ಣ ಆಲನಹಳ್ಳಿ ಬರೆದ ಎಲ್ಲ ಕತೆಗಳು ಇಲ್ಲಿವೆ. ತನ್ನ ವಿದ್ಯಾರ್ಥಿ ಜೀವನದಿಂದಲೇ ಕತೆಗಳನ್ನು ಬರೆಯತೊಡಗಿದ್ದ ಶ್ರೀಕೃಷ್ಣ ನವ್ಯ ಕತೆಗಾರರ ನಡುವೆ ಪ್ರಮುಖ ಹೆಸರಾಗಿದ್ದುದು ಈಗ ಇತಿಹಾಸವಾಗಿದೆ. ಕಣ್ಣು ಮಿಟುಕಿಸದಂಥ ನೆಟ್ಟ ನೋಟದಲ್ಲಿ ತನ್ನ ಕತೆಗಳಲ್ಲಿ ಪಾತ್ರಗಳ ಅಂತರಂಗ ದರ್ಶನವನ್ನು, ಭಾವನೆಗಳ ಒಳತೋಟಿಯನ್ನು ಅದ್ಭುತ ಕಲ್ಪಿತ ಶಕ್ತಿಯಲ್ಲಿ ಓದುಗರ ಕಣ್ಮುಂದೆ ನಿಲ್ಲಿಸುವುದು ಶ್ರೀಕೃಷ್ಣನ ಪ್ರತಿಭೆಗೆ ಸಾಕ್ಷಿಯಾಗಿವೆ ಈ ಕತೆಗಳು.\u003c\/p\u003e\n\u003cp\u003e ಇಲ್ಲಿನ ಕತೆಗಳಲ್ಲಿ ಹಳ್ಳಿಯ ಮುಗ್ಧ ಬಾಲಕನಿದ್ದಾನೆ, ಬಾಲ್ಯದ ಒಡನಾಟದಲ್ಲಿ ಹರೆಯಕ್ಕೆ ಅಡಿಯಿಟ್ಟವರಿದ್ದಾರೆ; ಹಳ್ಳಿ- ನಗರಗಳ ನಡುವಿನ ಜೀವನವಿದೆ. ತುಂಬು ಅಂತಃಕರಣ ಸೆಲೆಯಲ್ಲಿ ಸಂಬಂಧಗಳನ್ನು ತಡಕಾಡುವ ಕತೆಗಾರ ಶ್ರೀಕೃಷ್ಣ ನೆಲದ ಸೊಗಡಿನ ಭಾಷೆಗೆ ಕಾವ್ಯಾತ್ಮಕ ಅಭಿವ್ಯಕ್ತಿ ನೀಡಿರುವುದನ್ನು ಈ ಎಲ್ಲ ಕತೆಗಳಲ್ಲೂ ಕಾಣಬಹುದು. ‘ಸ್ವಗತ ಕಥನ’ದ ತನ್ನದೇ ವಿಶಿಷ್ಟ ಛಾಪಿನ ಶೈಲಿಯನ್ನು ಕಥಾರಚನೆಯಲ್ಲಿ ನಿರ್ಮಿಸಿರುವ ಶ್ರೀಕೃಷ್ಣ ಬರೆದ, ಈ ಕತೆಗಳು ಇಂದಿಗೂ ಹೊಚ್ಚಹೊಸ ಅನುಭವ ನೀಡುವ ವಿನೂತನತೆಯನ್ನು ಪಡೆದಿವೆ.\u003c\/p\u003e","brand":"Shree Krishna Alanahalli","offers":[{"title":"Default Title","offer_id":47829479883011,"sku":"HB00006715","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SamagraKategalu.jpg?v=1773124509"},{"product_id":"itihasada-rochaka-putagalu-history-anantha-haritsa-kannada-book","title":"ಇತಿಹಾಸದ ರೋಚಕ ಪುಟಗಳು","description":"\u003cp\u003eಇತಿಹಾಸದ ಘಟನಾವಳಿಗಳನ್ನ ಕಥೆಯಾಗಿಸಿ ಮಾಹಿತಿ ಪೂರ್ವಕವಾಗಿ ಓದುಗರಿಗೆ ತಲುಪಿಸುವ ಪುಸ್ತಕ 'ಇತಿಹಾಸದ ರೋಚಕ ಪುಟಗಳು\" ಓದುಗರ ಕ ಕೈ ಸೇರುತ್ತಿದೆ. ಸದಾ ಏನಾದರೂ ಕ್ರಿಯಾತ್ಮಕವಾಗಿ ಮಾಡುತ್ತಿರುವ ಅನಂತ್ ಅವರ ಈ ಮತ್ತೊಂದು ಪ್ರಯತ್ನಕ್ಕೆ ನನ್ನ ಹೃದಯತುಂಬಿದ ಅಭಿನಂದನೆಗಳು.\u003c\/p\u003e\n\u003cp\u003e-ಲೇಖಕಿ - ನಿರೂಪಕಿ - ರೂಪಾ ಗುರುರಾಜ್\u003c\/p\u003e","brand":"Anantha Haritsa","offers":[{"title":"Default Title","offer_id":47833424396547,"sku":"HB00006753","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ItihasadaRochakaPutagalu.jpg?v=1773297338"},{"product_id":"belvel-narrative-stories-kannada-book","title":"ಬೆಲ್ ವೆಲ್","description":"\u003cp\u003eಬದುಕನ್ನು ಸಂಭ್ರಮಿಸಬೇಕು ಎನ್ನುವ ಉದ್ದೇಶದಿಂದ ಬದುಕುತ್ತಿರುವವನು ನಾನು. ನನಗೆ ಈ ಸಾಲು ಪ್ರತೀ ಕಷ್ಟದ ಸಮಯಗಳಲ್ಲಿ ಬಲ ಕೊಡುತ್ತದೆ ಹಾಗೆಯೇ ಪ್ರತೀ ಸಂತಸದ ಸಮಯಕ್ಕೆ ಹೆಚ್ಚು ಖುಷಿ ತರುತ್ತದೆ. ಈ ಸಾಲು ನನಗೆ ನನ್ನ ಸುತ್ತಮುತ್ತಲಿನ ಸಂಬಂಧಗಳನ್ನ, ಸಮಾಜವನ್ನ, ಒಟ್ಟಾರೆ ಪ್ರಪಂಚವನ್ನ ನೋಡುವ ಪರಿಯನ್ನೇ ಬದಲಿಸಿದೆ. ಬದುಕಿನ ಕ್ಯೂರಿಯಾಸಿಟಿಯನ್ನು ಹೆಚ್ಚಿಸಿದೆ. ಅದಕ್ಕೆ ಏನೋ ಸಣ್ಣ ಸಣ್ಣ ಘಟನೆಗಳು ದೊಡ್ಡ ಸಂದೇಶವನ್ನು ಹೇಳಿಕೊಡುತ್ತಿವೆ. ಉದಾಹರಣೆಗೆ ಈ ಪುಸ್ತಕದ ಟೈಟಲ್- \"ಬೆಲ್ವೆಲ್\", ಈ ಪದವನ್ನು ಯಾವ ಭಾಷೆಯಿಂದಲೂ ನಾನು ತಗೆದುಕೊಂಡಿಲ್ಲ. ಇದು ನನ್ನ ಮುದ್ದಿನ ಚೊಚ್ಚಲ ಮಗ ತ್ರಿಲೋಕನ ತೊದಲಿನ ಪ್ರೇಮ ಭಾಷೆ. ನನ್ನನ್ನು ತನ್ನ \"ಬೆಸ್ಟ್ ಫ್ರೆಂಡ್\" ಎಂದು ಕರೆಯಲು ಪ್ರೀತಿಯಿಂದ ಅವನೇ ತನ್ನದೇ ಬಾಲ ನುಡಿಯಲ್ಲಿ ಸೃಷ್ಟಿಸಿರುವ ಪದ, ಬೆಲ್ವೆಲ್.\u003c\/p\u003e\n\u003cp\u003eಹೆತ್ತವರು, ಒಡ ಹುಟ್ಟಿದವರು, ಮಡದಿ ಮಕ್ಕಳ ಜೊತೆ, ಬಂಧು ಬಳಗದವರ ಜೊತೆ, ಸ್ನೇಹಿತರ ಜೊತೆ, ಸಿಬ್ಬಂದಿಗಳ ಜೊತೆ, ಸಾಧಕರ ಜೊತೆ, ಮಾತು ಮಾತಲ್ಲೇ ಒಂದಿಷ್ಟು ಗೊತ್ತಾದ ಎಷ್ಟೋ ಜನರ ಜೊತೆಗೆ ನಾನು ಕಳೆದ ಮತ್ತು ಮುಂದೆ ನನಗೆ ಎಂದೂ ಸಿಗದ ಸಮಯವು ನನಗೆ ಕೊಟ್ಟಿರುವ ಒಂದಿಷ್ಟು ಪ್ರೀತಿಯನ್ನು ಮತ್ತು ನಾನು ಅದರಿಂದ ಕಲಿತ ಒಂದಿಷ್ಟು ನೀತಿಯನ್ನು ಈ ಪುಸ್ತಕದಲ್ಲಿನ ಬರಹಗಳೊಂದಿಗೆ ನಿಮ್ಮ ಜೊತೆ ಹಂಚಿಕೊಂಡಿದ್ದೇನೆ. ಈ \"ಬೆಲ್ವೆಲ್\" ಓದು ನಿಮಗೆ ನಿಮ್ಮ ಬದುಕನ್ನು ಸಂಭ್ರಮಿಸಲು ಪ್ರೇರೇಪಿಸುವಂತಾದರೆ ಅದುವೇ ನನ್ನ ನನ್ನ ಈ ಬರಹಗಳು ಮತ್ತು ಅನುಭವಗಳಿಗೆ ಗೆಲುವು.\u003c\/p\u003e\n\u003cp\u003eಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಸದಾ ಬದುಕನ್ನು ಸಂಭ್ರಮಿಸಿ!\u003c\/p\u003e","brand":"Vikrama. B. K.","offers":[{"title":"Default Title","offer_id":47840533446915,"sku":"HB00006788","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-03-14at5.53.06PM_b3728dff-aa39-49f0-8423-43a1e430acd1.jpg?v=1773491689"},{"product_id":"ananya-allama-vachana-harihar-shivakumar-kannada-books","title":"ಅನನ್ಯ ಅಲ್ಲಮ","description":"\u003cp\u003eಬೆರಗಿನ ಆಗರವಾಗಿ ಬೆಡಗಿನ ಖಜಾನೆಯಾಗಿ ಪಾಂಡಿತ್ಯಕ್ಕೆ ಸವಾಲಾಗಿರುವ ಅಲ್ಲಮನ ವಚನಗಳ ನಿರ್ವಚನ ಇಲ್ಲಿದೆ.  ವಚನಕಾರರಲ್ಲಿ ನಮ್ಮ ತನುವನ್ನಲ್ಲಾಡಿಸಿ, ಮನವನ್ನಲ್ಲಾಡಿಸಿ ನೋಡುವ ವಚನಕಾರನೆಂದರೆ ಅಲ್ಲಮನೊಬ್ಬನೇ. ಆತನ ವಚನಗಳು ಅನನ್ಯ. ಅಲ್ಲಮ ಸುಲಭವಾಗಿ ಅರ್ಥವಾಗದಿದ್ದರೂ ಆತ್ಮೀಯ ಓದುಗರು ಒಂದು ಸಲ ಓದಿದರೆ ಸಾಕು ಮತ್ತೆ ಮತ್ತೆ ಕಾಡುವ ವಚನಕಾರ. ಅವನ ವಚನಗಳ ಕಾಡಿನಲ್ಲಿ ಒಮ್ಮೆ ಹೊಕ್ಕರೆ ಸಾಕು ತಪ್ಪಿಸಿಕೊಂಡು ಆಚೆ ಬರುವುದು ಕಷ್ಟ. ಬಸವಣ್ಣ ಅಕ್ಕ ಮಹಾದೇವಿಯವರಂತೆ ಅವನು ಅರ್ಥವನ್ನು ಬಿಟ್ಟುಕೊಡುವುದಿಲ್ಲ. ನಮ್ಮನ್ನೂ ಬಿಡುವುದಿಲ್ಲ. ನನ್ನ ಪ್ರಕಾರ ಅವನ ವಚನಗಳಿಗೆ ದಾರ್ಶನಿಕ, ಸಾಮಾಜಿಕ ಅಥವಾ ಸಾಹಿತ್ಯಕ ತಾತ್ಪರ್ಯ ಅಸಾಧ್ಯ ಮತ್ತು ಅಸಾಧು. ಆದರೆ ತಮ್ಮ ತಮ್ಮ ಮಜಲಿನಲ್ಲಿ ತಮ್ಮ ಅನುಭವದ ತಿಳುವಳಿಕೆಯ ಸಂದರ್ಭದೊಳಗಿಟ್ಟು ಅಲ್ಲಮನನ್ನು ಅರ್ಥಮಾಡಿಕೊಳ್ಳುವ ಶಿವಕುಮಾರರವರ ಪ್ರಯತ್ನ ಸ್ವಾಗತಾರ್ಹ. \u003cbr\u003e\"ಸಿಡಿಲೊಡನೆ ಕಾದುವಂಗೆ ಕೊಡೆಯೊಂದು ಮರೆಯೆ?\" ಇದು ಅಲ್ಲಮನದೇ ಮಾತು. ಆದರೆ ಸಾಮಾನ್ಯರಾದ ನಮಗೆ ಕೊಡೆಗಳನ್ನು ಬಿಟ್ಟು ನೇರವಾಗಿ ಸಿಡಿಲಿಗೆ ಎದೆಯೊಡ್ದುವುದು ಸಾಧ್ಯವಿಲ್ಲ. ಅಲ್ಲಮನೆಂಬ ಸಿಡಿಲನ್ನು ಎದುರುಗೊಳ್ಳುವುದಕ್ಕೆ ಮೊದಲ ಹಂತವಾದ ಸಾಮಾನ್ಯ ತಿಳುವಳಿಕೆಯ ಅರ್ಥ ವಿವರಣೆಯನ್ನು ಶಿವಕುಮಾರರವರು  ನೀಡಿದ್ದಾರೆ. \u003c\/p\u003e\n\u003cp\u003eಮುನ್ನುಡಿಯಲ್ಲಿ \u003cbr\u003eಎಚ್ ಎಸ್ ಶಿವಪ್ರಕಾಶ್\u003cbr\u003eಕವಿ, ನಾಟಕಕಾರ, ಚಿಂತಕರು.\u003c\/p\u003e","brand":"Harihar Shivakumar","offers":[{"title":"Default Title","offer_id":47866839040259,"sku":"PHB0000081","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Artboard1_1_2x_29b844a3-c78b-4452-866f-c880b18834df.png?v=1774263958"},{"product_id":"bettalege-beragagabaradu-articles-ragam-kannada-book","title":"ಬೆತ್ತಲೆಗೆ ಬೆರಗಾಗಬಾರದು","description":"\u003cp\u003eಈತನನ್ನು, ಓದುವುದು, ಚಿಂತಿಸುವುದು ಮತ್ತು ಈತನ ಕುರಿತು ಬರೆಯುವುದೇ ಒಂದು ಅಪರಾಧ ಎನ್ನುವ ಆ ಕಾಲಘಟ್ಟದಿಂದ, ಇಂದಿನ ಹೈ-ಸೊಸೈಟಿಗಳ ಹಸಿವಾಗಿ, ಅವರ ದೃಷ್ಟಿಹೀನ ಕಾಮದ ಕಮಟು ವಾಸನೆಯಾಗಿ, ಈತ ಬೆಳೆಯುತ್ತಿರುವ ಈ ಕಾಲಘಟ್ಟದವರೆಗೂ ನಾನು ಇವನೊಂದಿಗಿದ್ದೇನೆ. ಈತ ಮಿಲಿಯನ್ ವರ್ಷಗಳಷ್ಟು ಮೊದಲಿಗ, ನಾನು ಕೋಟಿ ವರ್ಷಗಳಷ್ಟು ಪುರಾತನ. ನಾವಿಬ್ಬರೂ ಇಲ್ಲಿಯೇ ಇದ್ದೇವೆ. ಈತ ಬೆಂಕಿಯಾಗಿ, ನಾನು ಅವನೊಳಗೆ ಬೈಚಿಟ್ಟ ಕೋಲಾಗಿ. ಈಗ ಬೆತ್ತಲಾಗುವ ಹೊತ್ತು. ಮುಗ್ಧತೆ ಮೈದಾಳಿ, ಮನಸ್ಸು ಪಿಸುಗುಡುವ ಸಮಯ, ಸ್ವಲ್ಪ ಆಲಿಸುವಿರಾ?\u003c\/p\u003e\n\u003cp\u003e\u003cbr\u003e\u003c\/p\u003e","brand":"Ragam","offers":[{"title":"Default Title","offer_id":47899537178883,"sku":"HB00006950","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BettalegeBeragagabaradu_1ed742eb-97a7-4877-b902-4105a1f609d4.jpg?v=1775116149"},{"product_id":"gramaphone-pin-rahasya-detective-stories-to-kannada-m-v-nagaraja-rao-kannada-book","title":"ಗ್ರಾಮಾಫೋನ್ ಪಿನ್ ರಹಸ್ಯ","description":"\u003cp\u003e\u003cspan\u003eಪುಸ್ತಕದ ಬಗ್ಗೆ: ಗ್ರಾಮಾಫೋನ್ ಪಿನ್ ರಹಸ್ಯ ಭಾರತದ ಷರ್ಲಾಕ್ ಹೋಮ್ಸ್ ಎಂದೇ ಖ್ಯಾತರಾಗಿರುವ ವೋಮಕೇಶ ಬಕ್ಷಿ ಕನ್ನಡಕ್ಕೆ ಅಪರಿಚಿತ, ಹಿಂದಿಯಲ್ಲಿ ಇವರ ಸಾಹಸಗಳನ್ನು ಕುರಿತ ಧಾರಾವಾಹಿ ಸಾಕಷ್ಟು ಪ್ರಸಿದ್ಧವಾಗಿದೆ. ಈಗ ದ್ಯೋಮಕೇಶ ಬಕ್ಷಿ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಮೈ ನವಿರೇಳಿಸುವ, ಓದುಗರನ್ನು ತುದಿಗಾಲ ಮೇಲೆ ನಿಲ್ಲಿಸುವ ಈ ಪತ್ತೇದಾರಿ ಕಥೆಗಳು ಕನ್ನಡದ್ದೇ ಎಂಬಂತೆ ಓದಿಸಿಕೊಳ್ಳುತ್ತವೆ. ಅತ್ಯಂತ ಅಪಾಯಕಾರಿ ಮತ್ತು ದಂಗಾಗಿಸುವ ಪ್ರಕರಣವನ್ನು ತನ್ನ ಚತುರತೆ ಮತ್ತು ಅಸಾಧಾರಣ ಬುದ್ಧಿವಂತಿಕೆಯಿಂದ ಕೊನೆ ಮುಟ್ಟಿಸುವಲ್ಲಿ ಈತ ಕುಶಲಿ. ಈ ಪ್ರೋಮಕೇಶ ಬಕ್ಷಿ ಕೊನೆಯವರೆಗೂ ಅಪರಾಧಿ ಯಾರು ಎಂದು ತಿಳಿಯದೆ ಓದುಗರನ್ನು ಕುತೂಹಲದ ಪರಾಕಾಷ್ಠೆಗೆ ತಲಪಿಸುತ್ತಾರೆ. ಇಂತಹ ನಿಗೂಢ, ರಹಸ್ಯ ಮತ್ತು ರೋಮಾಂಚಕಾರಿ ಕಥೆಗಳು ಇಲ್ಲಿವೆ.\u003c\/span\u003e\u003c\/p\u003e","brand":"To Kannada : M. V. Nagarajarao","offers":[{"title":"Default Title","offer_id":47939502244099,"sku":"HB00007013","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/GramaphonePinRahasya.webp?v=1776161101"},{"product_id":"indian-james-bond-ajith-doval-biography-ravindra-joshi-kannada-book","title":"Indian James Bond ಅಜಿತ್ ದೋವಲ್","description":"\u003cp data-start=\"57\" data-end=\"305\"\u003eಈ ಪುಸ್ತಕವು ಭಾರತದ ಪ್ರಸ್ತುತ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ (NSA) \u003cb data-path-to-node=\"3\" data-index-in-node=\"64\"\u003eಅಜಿತ್ ದೋವಲ್\u003c\/b\u003e ಅವರ ಜೀವನ ಮತ್ತು ಸಾಧನೆಗಳನ್ನು ಅನಾವರಣಗೊಳಿಸುವ ಒಂದು ಜೀವನಚರಿತ್ರೆಯಾಗಿದೆ. ಅಜಿತ್ ದೋವಲ್ ಅವರನ್ನು ಏಕೆ 'ಭಾರತದ ಜೇಮ್ಸ್ ಬಾಂಡ್' ಎಂದು ಕರೆಯಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರವನ್ನು ಈ ಕೃತಿ ಒದಗಿಸುತ್ತದೆ.\u003c\/p\u003e","brand":"Ravindra Joshi","offers":[{"title":"Default Title","offer_id":47958652289283,"sku":"HB00007039","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ajithdovalnew.jpg?v=1776678850"},{"product_id":"moorane-bogi-collection-of-stories-kannada-book","title":"ಮೂರನೇ ಬೋಗಿ","description":"\u003cp\u003e\u003cimg\u003e\u003c\/p\u003e\n\u003cp\u003eಏನೇ ಕೆಲಸ ಮಾಡೋರಾಗಲಿ ಒಬ್ಬೊಬ್ಬರಿಗೆ ಅವರದೇ ಆದ ಒಂದು ಶೈಲಿ ಇರುತ್ತೆ. ಬಹುಶಃ ರಂಜನಿ ಕೀರ್ತಿ ಅವರ ಶೈಲಿಯೆಂದರೆ; ಎಲ್ಲೆಲ್ಲೋ ಏರಿಳಿದು, ಏನೇನೋ ಭಾವಗಳ ಅಲೆಯ ಮೇಲೆ ತೇಲಾಡಿಸಿ ಬರುವ ಕಥೆಯ ಕೊನೆಯಲ್ಲೊಂದು ವಾಕ್ಯವಿರುತ್ತದೆ, ಬಹುತೇಕ ಅದು ಎರಡು ಮೂರು ಪದಗಳಷ್ಟೇ ಇರುವ ಪುಟ್ಟ ಸಾಲು, ಕೆಲವೊಮ್ಮೆ ಅದು ಸಾಲು ಕೂಡಾ ಅಲ್ಲಾ, ಕೇವಲ ಒಂದೇ ಪದ, ಆದರೆ ಇಡೀ ಕಥೆಯ ನೂರಾರು ಸಾಲುಗಳ ಆತ್ಮ ಅಲ್ಲೇ ಅಡಗಿರುತ್ತದೆ. ಕಡೆಯ ಅದೊಂದು ಪುಟ್ಟ ಸಾಲು ಅಥವಾ ಪದ ಇಡೀ ಕತೆಯನ್ನು ಬೇರೆಯದೇ ಮಟ್ಟಕ್ಕೆ ಕೊಂಡೊಯ್ದು ಬಿಡುತ್ತದೆ.\u003c\/p\u003e\n\u003cp\u003eತಣ್ಣಗೆ ಹರಿವ ನದಿಯಷ್ಟೇ ಚೇತೋಹಾರಿಯಾದ ಬರಹದ ಶೈಲಿಯ ರಂಜನಿ ಕೀರ್ತಿ ಅವರ ಈ ಪುಸ್ತಕದ ಓದು ಅಪ್ಯಾಯಮಾನ ಎನಿಸುವುದು ಖಚಿತ.\u003c\/p\u003e\n\u003cp\u003e-ಖ್ಯಾತ ಗೀತರಚನೆಕಾರ ಕವಿರಾಜ್\u003c\/p\u003e","brand":"Ranjani Keerthi","offers":[{"title":"Default Title","offer_id":48025106645251,"sku":"PHB0000082","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1777095787209-4ad0808a-8d3f-4cbb-9876-57c73d152601_1.png?v=1777359537"},{"product_id":"buddham-sharanam-gacchhami-stories-dr-lakshman-kounte-kannada-book","title":"ಬುದ್ಧಂ ಶರಣಂ ಗಚ್ಛಾಮಿ","description":"\u003cp\u003e'ಬುದ್ಧಂ ಶರಣಂ ಗಚ್ಛಾಮಿ'\u003c\/p\u003e\n\u003cp\u003eವಿಶ್ವದ ದಾರ್ಶನಿಕರಲ್ಲಿ ಗೌತಮಬುದ್ಧನ ಶಿಷ್ಯರಷ್ಟು ಧರ್ಮಪ್ರಿಯರು, ಬೌದ್ಧಧರ್ಮ ನಿಯಮಗಳನ್ನು ಅನುಸರಿಸಿದವರು ದೊರೆಯುವುದು ಅಪರೂಪ. ಬುದ್ಧನ ಪ್ರಭಾವವೇ ಅಷ್ಟು ಪರಿಣಾಮಕಾರಿಯಾದುದು. ಗೌತಮನ ಪ್ರಭಾವ ವಲಯಕ್ಕೆ ಒಳಗಾದವರು ಅವರಿಂದ ಮತ್ತೆ ದೂರ ಸರಿಯುವುದು ಅಸಾಧ್ಯ ಎನ್ನುವುದಕ್ಕೆ ಹಲವು ಉದಾಹರಣೆಗಳು ದೊರೆಯುತ್ತವೆ. ಬೌದ್ಧಧರ್ಮ ವಾಸ್ತವವಾಗಿ ಕರುಣಾಮಯಿಯಾದದ್ದು, ಮೌಡ್ಯವನ್ನು ನಿರಾಕರಿಸಿ ವೈಜ್ಞಾನಿಕವಾಗಿ ಚಿಂತನೆಗೆ ಹಚ್ಚುವಂತೆ ಮಾಡುವಂಥದ್ದು. ಮನುಜರೊಳಗಿನ ಆಮಿಷಗಳನ್ನು ಮೋಸ ವಂಚನೆ ಕಳ್ಳತನ ಕೊಲೆಯಂತಹ ಹೇಯಗುಣಗಳನ್ನು ವಿಸರ್ಜಿಸಿ ಮಾನವೀಯ ಮಾರ್ಗದಲ್ಲಿ ನಡೆಯುವಂತಹ ತಿಳುವಳಿಕೆಯನ್ನು ಆ ಧರ್ಮ ಹೇಳಿದೆ. ಅಂಗುಲಿಮಾಲಾನಂತಹ ಕೊಲೆಗಡುಕನನ್ನು ಪುಣ್ಯಾಕ್ಷನನ್ನಾಗಿ ಮಾಡಿದ. ವೇಶ್ಯ ಆಮ್ರಪಾಲಿಯನ್ನು ಭಿಕ್ಕುಣಿಯಾಗುವಂತೆ ಪರಿವರ್ತನೆಯ ದಿಶೆ ತೋರಿದ ಧರ್ಮ ಗೌತಮಬುದ್ಧನದು. ದೊರೆಗಳಾದ ಬಿಂಬಿಸಾರ, ಪ್ರಸೇನಜಿತರಂಥವರಲ್ಲಿನ ದೋಷಗಳನ್ನು ಕಳೆದು ಅವರಲ್ಲಿಯೂ ಮಾನವೀಯ ಅನುಕಂಪವನ್ನು ಬುದ್ಧ ಬೀರಿದ್ದು ಬಹುದೊಡ್ಡ ಸಂಗತಿಯೇ ಆಗಿದೆ. ಬುದ್ಧಧರ್ಮದಡಿಯಲ್ಲಿ ನಡೆಯುವ ಭಿಕ್ಕುಸಂಘಕ್ಕೆ ಎಳೆಸಿ ಬಂದವರು ಕೇವಲ ಸಾಮಾನ್ಯ ವರ್ಗದ ಜನರಲ್ಲ; ದೊರೆಗಳಂಥವರು ರಾಜ್ಯ ಮೊದಲಾದ ಸರ್ವಗಳನ್ನು ತೊರೆದು ಬಹಳ ದೂರದ ದೇಶದಿಂದ ಅವನನ್ನು ಹುಡುಕಿಕೊಂಡು ಬಂದವರಿದ್ದಾರೆ. ಗಾಂಧಾರ ದೊರೆ ಪುಕ್ಕುಸಾತಿ, ರೋರುವ ರಾಜ್ಯದ ಅರಸ ತಿಷ್ಯ ಮೊದಲಾದವರನ್ನು ಇಲ್ಲಿ ಹೆಸರಿಸಬಹುದು.\u003c\/p\u003e\n\u003cp\u003e\u003cbr\u003e\u003c\/p\u003e","brand":"Dr. Lakshmana Kounte","offers":[{"title":"Default Title","offer_id":48026751697155,"sku":"PHB0000083","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BuddhamSharanamGacchhami.png?v=1777374728"},{"product_id":"kadambakula-mayurasharma-historical-novel-prakash-hemavathi-kannada-book","title":"ಕದಂಬಕುಲ ಮಯೂರಶರ್ಮ","description":"\u003cp\u003e\u003cb data-path-to-node=\"0\" data-index-in-node=\"0\"\u003e'ಕದಂಬ ಮಯೂರಶರ್ಮ'\u003c\/b\u003e ಪ್ರಕಾಶ್ ಹೇಮಾವತಿ ಅವರು ಬರೆದ ಒಂದು ಮಹತ್ವದ ಐತಿಹಾಸಿಕ ಕಾದಂಬರಿಯಾಗಿದ್ದು, ಇದನ್ನು \u003cb data-path-to-node=\"0\" data-index-in-node=\"87\"\u003eಕಾಮಧೇನು ಪುಸ್ತಕ ಭವನ\u003c\/b\u003e ಪ್ರಕಟಿಸಿದೆ. ಈ ಕಾದಂಬರಿಯು ಕರ್ನಾಟಕದ ಹೆಮ್ಮೆಯ ಮೊದಲ ಕನ್ನಡ ಸಾಮ್ರಾಜ್ಯವಾದ 'ಕದಂಬ' ವಂಶದ ಸ್ಥಾಪಕ ಮಯೂರಶರ್ಮನ ಬದುಕು ಮತ್ತು ಸಾಧನೆಗಳನ್ನು ಅನಾವರಣಗೊಳಿಸುತ್ತದೆ.\u003c\/p\u003e","brand":"Prakash Hemavathi","offers":[{"title":"Default Title","offer_id":48062757536003,"sku":"HB00007073","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Mayurasharma.png?v=1777888241"}],"url":"https:\/\/harivubooks.com\/collections\/13.oembed","provider":"Harivu Books","version":"1.0","type":"link"}