ಕನ್ನಡದಲ್ಲೊಂದು ಅಪರೂಪದ ಪುಸ್ತಕ!

ಕನ್ನಡದಲ್ಲೊಂದು ಅಪರೂಪದ ಪುಸ್ತಕ!

ಷೇರು ಮಾರುಕಟ್ಟೆ ಎಂದರೇನು? ಅದರಲ್ಲಿ ಹೂಡಿಕೆ ಮಾಡುವುದು ಹೇಗೆ? ಹೂಡಿಕೆ ಮಾಡಿದರೆ ಹಣವನ್ನು ಗಳಿಸುವುದು ಹೇಗೆ? ಹಣ ಕಳೆದುಕೊಳ್ಳದ ರೀತಿಯಲ್ಲಿ ಹೂಡಿಕೆ ಮಾಡುವುದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಹಲವಾರು ಇಂಗ್ಲೀಷ್ ಪುಸ್ತಕಗಳಲ್ಲಿ ಸಿಗುತ್ತದೆ. ಆದರೆ ಈಗ ಕನ್ನಡದಲ್ಲಿಯೇ ಷೇರು ಮಾರುಕಟ್ಟೆಯ ಬಗ್ಗೆ, ಅದರಲ್ಲಿ ಸುಲಭವಾದ ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡುವ ಬಗ್ಗೆ, ಹೆಚ್ಚು ಹೆಚ್ಚು ಲಾಭ ಮಾಡುವ ರೀತಿಗಳ ಬಗ್ಗೆ ಓದಿ ತಿಳಿದುಕೊಳ್ಳಬಹುದು. ಇದಕ್ಕೆ ಕಾರಣ ರಂಗಸ್ವಾಮಿ ಮೂಕನಹಳ್ಳಿ ಅವರು ಬರೆದ ‘ಷೇರು ಮಾರುಕಟ್ಟೆ’ಪುಸ್ತಕ.

‘ನಾನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದೇನೆ’ ಎಂದು ನೀವು ಯಾರಿಗಾದರೂ ಹೇಳಿದರೆ, ತಕ್ಷಣ ಅವರ ಬಾಯಿಯಿಂದ ಬರುವ ಮಾತು ಎಂದರೆ ‘ಅದೆಲ್ಲ ತುಂಬಾ ರಿಸ್ಕ್‌, ಅದ್ರಲ್ಲಿ ದುಡ್ಡು ಬರೋದಕ್ಕಿಂತಾ ಹೋಗೋದೇ ಜಾಸ್ತಿ’ ಅನ್ನುವುದು. ಆದರೆ ಸರಿಯಾದ ಮಾಹಿತಿ ಇದ್ದರೆ ಖಂಡಿತಾ ಹೂಡಿಕೆಯನ್ನು ಮಾಡಬಹುದು. ಇದಕ್ಕೆ ನಮಗೆ ಮಾರ್ಗದರ್ಶಿ ಎನಿಸುವ ಪುಸ್ತಕವೇ ‘ಷೇರು ಮಾರುಕಟ್ಟೆ’. ಈ ಪುಸ್ತಕದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬೇಕಾಗಿರುವ ಪ್ರಮುಖ ಅಂಶಗಳಾದ ಫಂಡಮೆಂಟಲ್ ಅನಾಲಿಸಿಸ್, ಟೆಕ್ನಿಕಲ್ ಅನಾಲಿಸಿಸ್ ಜೊತೆಗೆ ಹೆಚ್ಚಾಗಿ ಪ್ರಸ್ತಾಪವಾಗದೆ ಇರುವ, ಆದರೆ ಬಹುಮುಖ್ಯವಾದ ಸೆಂಟಿಮೆಂಟ್ ಅನಾಲಿಸಿಸ್ ಬಗ್ಗೆ ಕೂಡ ಮಾಹಿತಿಯನ್ನು ನೀಡಲಾಗಿದೆ. ಇದರ ಜೊತೆಗೆ ಪ್ರೈಮರಿ ಮಾರುಕಟ್ಟೆಯಲ್ಲಿನ ಹೂಡಿಕೆ, ಸೆಕೆಂಡರಿ ಮಾರುಕಟ್ಟೆಯಲ್ಲಿನ ಹೂಡಿಕೆ, ಡಿರೈವೆಟಿವ್ಸ್ ಮಾರುಕಟ್ಟೆಯ ಫ್ಯೂಚರ್ ಮತ್ತು ಆಪ್ಶನ್ ಮಾರುಕಟ್ಟೆ ಬಗ್ಗೆ ಕೂಡ ಒಂದಷ್ಟು ತಿಳಿಸುವ ಪ್ರಯತ್ನವಿದೆ. ಹೂಡಿಕೆಯಿಂದ ಬರುವ ಅಪಾಯಗಳೇನು? ಷೇರುದಾರನ ಹಕ್ಕುಗಳೇನು? ಷೇರಿನ ಮೇಲಿನ ತೆರಿಗೆ ನೀತಿಯೇನಿದೆ? ಆಲ್ಗೊ ಟ್ರೇಡಿಂಗ್, ಪಿಎಂಎಸ್, ಸೆಕ್ಯುರಿಟೀಸ್, ಷೇರು ಮಾರುಕಟ್ಟೆ ಟರ್ಮಿನಾಲಜಿಗಳು, ಹೂಡಿಕೆದಾರನ ರಕ್ಷಣೆ, ಅಹವಾಲು, ಪರಿಹಾರದ ತನಕ ಷೇರು ಮಾರುಕಟ್ಟೆಯಲ್ಲಿ ನೆಲೆ ನಿಲ್ಲಲು ಬೇಕಾದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಇವೆಲ್ಲ ಮಾಹಿತಿಗಳ ಜೊತೆಗೆ ಷೇರು ಮಾರುಕಟ್ಟೆಯನ್ನು ಪ್ರವೇಶಿಸುವಾಗ ಮಾಡಬೇಕಾದ ಕೆಲಸಗಳು, ಸಾಮಾನ್ಯವಾಗಿ ಜನರು ಮಾಡುವ ತಪ್ಪುಗಳು, ಹಾಗೇ ಹೂಡಿಕೆಯ ಅವಶ್ಯಕತೆ ಏನು ಎನ್ನುವುದನ್ನೂ ಸಹ ಈ ಪುಸ್ತಕ ತಿಳಿಸಿಕೊಡುತ್ತದೆ.

ಹಾಗಾಗಿ ಹೂಡಿಕೆ ಬಗ್ಗೆ ತಿಳಿದುಕೊಳ್ಳಲು, ಷೇರು ಹೂಡಿಕೆಯನ್ನು ಸುಲಭ ಮಾಡಿಕೊಳ್ಳಲು ರಂಗಸ್ವಾಮಿ ಮೂಕನಹಳ್ಳಿ ಅವರು ಬರೆದ ‘ಷೇರು ಮಾರುಕಟ್ಟೆ’ ತುಂಬಾ ಉಪಯುಕ್ತವಾದ ಪುಸ್ತಕ.

ಷೇರು ಮಾರುಕಟ್ಟೆhttps://harivubooks.com/kn/products/sheru-maarukatte-stock-market-kannada-books

ಷೇರು ಮಾರುಕಟ್ಟೆ ಬಗ್ಗೆ ತಿಳಿಯಲು ಓದಬಹುದಾದ ಇನ್ನಷ್ಟು ಪುಸ್ತಕಗಳು,

ಷೇರು ಸಾಮ್ರಾಜ್ಯ ಕಲಿತವನೇ ಅಧಿಪತಿhttps://harivubooks.com/kn/products/sheru-samrajya-kalitawane-adhipati-kannada-book

ಷೇರು ಸಂಪತ್ತು - https://harivubooks.com/kn/products/sheru-sampattu-kannada-book

Back to blog

Leave a comment